ಪುಸ್ತಕದ ಶೀರ್ಷಿಕೆ: ಟಚ್ ಮೀ ನಾಟ್
ಪುಸ್ತಕದ ಲೇಖಕರು: ಮುನವ್ವರ್ ಜೋಗಿಬೆಟ್ಟು
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸಿಂಧು ಭಾರ್ಗವ , ಬೆಂಗಳೂರು
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಟಚ್ ಮೀ ನಾಟ್ - ಮುನವ್ವರ್ ಜೋಗಿಬೆಟ್ಟು ಅವರ ಕಥಾಸಂಕಲನ. ಇದರಲ್ಲಿನ ಕಥೆಗಳು ಮನಸ್ಸಿಗೆ ನಾಟುವಂತಿವೆ. ಸಹಜ ಬದುಕಿನ ವಿವಿಧ ಮಜಲುಗಳ ಅನಾವರಣ. ಕತೆಗಾರ ತನ್ನ ಜೀವನದ ಪಯಣದಲ್ಲಿ ಕಂಡಂತಹ ಅನೇಕ ಘಟನೆಗಳಿಗೆ ಅಕ್ಷರರೂಪ ನೀಡಿದ್ದಾರೆ. ನಮ್ಮ ಯೋಚನೆ, ಪೂರ್ವಾಗ್ರಹ ಪೀಡಿತ ಆಲೋಚನೆಗಳು, ಬೆಳೆದ ವಾತಾವರಣವೇ ನಮ್ಮ ವರ್ತನೆಗೆ ಕಾರಣ. ಎದುರಿಗಿದ್ದವರಿಗೆ ಅದರಿಂದ ಸಮಸ್ಯೆಗಳಾವುದಕ್ಕೂ ಅವಘಡ ಸಂಭವಿಸುವುದಕ್ಕೂ ಅವಾಚ್ಯ ಶಬ್ದಗಳ ಬಳಕೆ ಮಾಡಿ ನಿಂದಿಸುವುದಕ್ಕೂ, ಮನಸ್ಸಿಗೆ ಘಾಸಿ ಮಾಡುವುದಕ್ಕೂ ಅದೇ ಕಾರಣ. ಸಸಿ ಪ್ರಕಾಶನ ಮೈಸೂರು ಇವರ ಪ್ರಕಾಶನದಿಂದ ಹೊರ ಬಂದ ಕೃತಿ ಎರಡನೇ ಮುದ್ರಣ ಕಂಡು ಓದುಗರ ಮನ ಸೆಳೆಯುತ್ತಿರುವುದು ಹೆಮ್ಮೆಯ ವಿಷಯ. ಸುಮಾರು ಒಂಭತ್ತು ಕತೆಗಳನ್ನು ಒಳಗೊಂಡ ಈ ಕಥಾಸಂಕಲನ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಟಚ್ ಮಿ ನಾಟ್ ಶೀರ್ಷಿಕೆ ಹೊತ್ತ ಕತೆ- ಮಕ್ಕಳಿಗೆ ಗುಡ್ ಟಚ್ ಬ್ಯಾಡ್ ಟಚ್ ಬಗೆಗೆ ತಿಳಿಸಿಕೊಡಬೇಕು ನಿಜ. ಆದರೆ ಭಾವನೆಗಳನ್ನು ಹೇಗೆ ಕಲಿಸಿಕೊಡುವುದು. ದೊಡ್ಡ ಬಂಗಲೆಯ ಯಜಮಾನನ ಮುದ್ದಿನ ಮಗಳು 'ಸಾನ್ವಿಕ'. 'ಭವಿಷಣ' ಎಂಬಾತ ಆ ಮನೆಯಲ್ಲಿ ಕೆಲಸಕ್ಕಿದ್ದ. ಕಾರು ತೊಳೆಯುವುದು, ಗಾರ್ಡನ್ ಗೆ ನೀರು ಹಾಕುವುದು ಅವನ ಕೆಲಸ. ಆ ಮಗು ತುಂಬಾ ಹಚ್ಚಿಕೊಂಡಿತ್ತು. ಇವನು ಕೂಡ ಅವಳ ಮುಗ್ದತೆಗೆ ಸೋತುಹೋಗಿದ್ದ. ಆಟಪಾಠ ಎಲ್ಲವನ್ನೂ ಓಡೋಡಿ ಬಂದು ಮೊದಲು ಅವನ ಬಳಿಯೇ ಹಂಚಿಕೊಳ್ಳುತ್ತಿದ್ದಳು. ಒಮ್ಮೆ ಅವಳು ಹಾಡಿದ ತೊದಲುನುಡಿಯ ರೈಮ್ಸ್ ಕೇಳಿ ಖುಷಿಯಿಂದ ತನ್ನ ಪುಟ್ಟ ಮಗಳಂತೆ ಭಾವಿಸಿ ಮುದ್ದಾಡಲು ಹೋಗಿ ಕೆನ್ನೆ ಮುತ್ತನಿಟ್ಟ. ಆಗಲೇ ನೋಡಿ ಮಗು, 'ಬ್ಯಾಡ್ ಟಚ್ ಮಾಡಿದ' ಎಂದು ಜೋರಾಗಿ ಬೊಬ್ಬೆ ಹೊಡೆದು ದೂರುಹಾಕುತ್ತ ತಾಯಿಯ ಬಳಿ ಹೋಗುತ್ತದೆ. ಅವಳ ದೂರನ್ನು ಕೇಳಿಸಿಕೊಂಡ ಅವಳಮ್ಮ ತಕ್ಷಣವೇ ಓಡೋಡಿ ಬಂದು 'ಹಿಡಿರೋ ಆ ಹುಚ್ಚನನ್ನು' ಎಂದು ಅಬ್ಬರಿಸುತ್ತಾಳೆ. ಕೆಲಸದವನಿಗೇನು ಅರ್ಥವಾಗುತ್ತಿರಲಿಲ್ಲ. ಆದರೆ ಅಪಾಯವನ್ನು ಅರಿತವನೇ ಬಟ್ಟೆಯನ್ನೆಲ್ಲ ಪ್ಯಾಕ್ ಮಾಡಿ ಅಲ್ಲಿಂದ ಕಾಲ್ಕಿತ್ತ. ಆ ಅಸಹಾಯಕನ ಪರಿಸ್ಥಿತಿ ಯಾರಿಗೂ ಬೇಡ. ಬ್ಯಾಡ್ ಟಚ್ ನ ಅರ್ಥ ಅನರ್ಥವಾಗಿ ಜೀವಕ್ಕೆ ಆಪತ್ತು ತಂದಿತ್ತು. ಕತೆಗಾರ ಬೆಂಗಳೂರಿನಿಂದ ಕ್ಯಾಲಿಕಟ್ ಕಡೆಗೆ ಪ್ರಯಾಣಿಸುವ ಬಸ್ಸಿನಲ್ಲಿ ಸಹಪ್ರಯಾಣ ಮಾಡುತ್ತಿದ್ದ ಭವಿಷಣ ಎಲ್ಲ ನಡೆದ ಘಟನೆಗಳನ್ನು ದಾರಿಯುದ್ದಕ್ಕೂ ವಿವರಿಸುತ್ತ ಬಂದಿದ್ದ. ಅವನೀಗ ಅಪರಾಧಿ. ಪೋಲೀಸರು ಹೋಗುತ್ತಿದ್ದ ಬಸ್ ಅಡ್ಡ ಹಾಕಿ ಅಪರಾಧಿಯ ಹುಡುಕಾಟ ನಡೆಸುತ್ತಿದ್ದರು. ಆ ಬಸ್ ನಲ್ಲಿ ಇವನು ಸಿಕ್ಕಿದ್ದೇನೊ ನಿಜ. ಆದರೆ ಅಷ್ಟರಲ್ಲಾಗಲೇ ಉಸಿರು ನಿಂತಿತ್ತು. ತಾನು ಅಪರಾಧಿಯಲ್ಲ ಎಂದು ಹೇಗೆ ಸಾಬೀತು ಪಡಿಸುವುದು ಅಥವಾ ಅಪಾರ್ಥ ಮಾಡಿಕೊಂಡವರಿಗಾದರೂ ಹೇಗೆ ಅರ್ಥಮಾಡಿಸುವುದು ಈ ಕತೆಯ ಅಂತ್ಯ ಗಾಢವಾದ ಮೌನಕ್ಕೆ ಶರಣಾಗಿಸುವಂತೆ ಮಾಡುತ್ತದೆ. ಇಂತಹ ಉಳಿದ ಎಂಟು ಕತೆಗಳಲ್ಲಿಯೂ ಸಮಾಜದಲ್ಲಿರುವ ಅಮಾಯಕರ ಅಸಹಾಯಕೆ, ಗಡಿ, ಭಾಷೆ, ಜಾತಿ ನಿಂದನೆಗಳನ್ನು ಕಥಾವಸ್ತುವಾಗಿಸಿದ್ದನ್ನು ನಾವು ಕಾಣಬಹುದಾಗಿದೆ. ಇಂತಹ ಘಟನೆಗಳನ್ನು ಪ್ರತಿದಿನ ನೋಡಿ ಅನುಭವಿಸಿ ಕೆಲವರ ಮನಸ್ಸು ಕಲ್ಲಾಗಿ ಹೋಗುತ್ತದೆ. ಅಥವಾ ಕೆಲವರು ವಿರೋಧಿಸುವ ಗುಣವನ್ನೂ ಬೆಳೆಸಿಕೊಳ್ಳುತ್ತಾರೆ. ಪದೆಪದೆ ಪೆಟ್ಟು ತಿಂದ ಹಾವು ಬುಸುಗುಡುವ ರೀತಿಯಲ್ಲಿ ಅನೇಕರು ಆಗಾಗ್ಗೆ ಬುಸುಗುಡುತ್ತಾ ಇರುತ್ತಾರೆ. ಈ ಕಥಾ ಸಂಕಲನ ಎಲ್ಲಾ ವರ್ಗದ ಜನರಿಗೂ ಸೂಕ್ತ. ಒಮ್ಮೆಯಾದರೂ ಓದಬೇಕು. ನಮ್ಮ ಸಮಾಜದ ವಿವಿಧ ಮಜಲುಗಳನ್ನು ತೋರಿಸಿದ್ದಾರೆ. ಹಾಗಾಗಿ ಹೀಗೂ ನಡೆಯುವುದೇ? ಎಂದು ಊಹಿಸಿಕೊಳ್ಳುವ ಬದಲು ಅನುಮಾನ ವ್ಯಕ್ತ ಪಡಿಸುವ ಬದಲು, ನಡೆದ ಘಟನೆಗಳನ್ನು ಓದಿ ತಿಳಿದುಕೊಳ್ಳಬಹುದಲ್ಲವೇ? ಸಿಂಧು ಭಾರ್ಗವ, ಬೆಂಗಳೂರು.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಭವಿಷಣ್ ಕೆಲಸಗಾರ ಸಾನ್ವಿಕ ಶ್ರೀಮಂತಳ ಮಗಳು. ಸಮಾಜದಲ್ಲಿರುವ ಅಮಾಯಕರ ಅಸಹಾಯಕೆ, ಗಡಿ, ಭಾಷೆ, ಜಾತಿ ನಿಂದನೆಗಳನ್ನು ಕಥಾವಸ್ತುವಾಗಿಸಿದ್ದನ್ನು ನಾವು ಕಾಣಬಹುದಾಗಿದೆ. ಇಂತಹ ಘಟನೆಗಳನ್ನು ಪ್ರತಿದಿನ ನೋಡಿ ಅನುಭವಿಸಿ ಕೆಲವರ ಮನಸ್ಸು ಕಲ್ಲಾಗಿ ಹೋಗುತ್ತದೆ. ಅಥವಾ ಕೆಲವರು ವಿರೋಧಿಸುವ ಗುಣವನ್ನೂ ಬೆಳೆಸಿಕೊಳ್ಳುತ್ತಾರೆ. ಪದೆಪದೆ ಪೆಟ್ಟು ತಿಂದ ಹಾವು ಬುಸುಗುಡುವ ರೀತಿಯಲ್ಲಿ ಅನೇಕರು ಆಗಾಗ್ಗೆ ಬುಸುಗುಡುತ್ತಾ ಇರುತ್ತಾರೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಈ ಕಥಾ ಸಂಕಲನ ಎಲ್ಲಾ ವರ್ಗದ ಜನರಿಗೂ ಸೂಕ್ತ. ಒಮ್ಮೆಯಾದರೂ ಓದಬೇಕು. ನಮ್ಮ ಸಮಾಜದ ವಿವಿಧ ಮಜಲುಗಳನ್ನು ತೋರಿಸಿದ್ದಾರೆ. ಹಾಗಾಗಿ ಹೀಗೂ ನಡೆಯುವುದೇ? ಎಂದು ಊಹಿಸಿಕೊಳ್ಳುವ ಬದಲು ಅನುಮಾನ ವ್ಯಕ್ತ ಪಡಿಸುವ ಬದಲು, ನಡೆದ ಘಟನೆಗಳನ್ನು ಓದಿ ತಿಳಿದುಕೊಳ್ಳಬಹುದಲ್ಲವೇ?
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.