Submission 2007

ಪುಸ್ತಕದ ಶೀರ್ಷಿಕೆ: ವಿಕ್ಷಿಪ್ತ

ಪುಸ್ತಕದ ಲೇಖಕರು: ಗುರುರಾಜ ಕೊಡ್ಕಣಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅರ್ಪಣಾ ಜಿ. ಹೆಗಡೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಮೂಲತಃ ಮಲೆನಾಡಿನವಳೇ ಆದರೂ, ದುಂಡಾವರ ಎನ್ನುವ ಊರು ನಿಜವಾಗಿಯೂ ಇದೆಯೇ ಎಂದು ತಿಳಿದುಕೊಳ್ಳುವ ಕುತೂಹಲವಂತೂ ಇಲ್ಲ. ಮನೆಯಲ್ಲಿರುವ ಇಷ್ಟದ ಕರಡಿ ಗೊಂಬೆ(ಟೆಡ್ಡಿ ಬೇರ್) ಯನ್ನೇ ಸವರಲೂ ಎರಡು ಸಲ ಯೋಚಿಸಬೇಕಾಗಿದ ಈ ಸಂದರ್ಭದಲ್ಲಿ, ದುಂಡಾವರ ಹೆಸರಿನ ಊರಿದ್ದರೂ ಅದರೆಡೆಗೆ ತಲೆಹಾಕಿ ಮಲಗುವ ಸಾಹಸವನ್ನೂ ಮಾಡಲಾರೆ. ಚಿಕ್ಕದೊಂದು ಆಟಿಕೆಯಿಂದ ಪ್ರಾರಂಭವಾಗುವ ಈ ಪುಟ್ಟ ಕಾದಂಬರಿ, ಕೇವಲ ಹಾರರ್ ಝೋನ್ ಗೆ ಮಾತ್ರ ಸೀಮಿತವಾಗದೆ ಮನುಷ್ಯನ ಕೀಳರಿಮೆ, ಅದನ್ನು ಹೊತ್ತು ತರುವ ಕಾರಣಗಳು, ತನ್ನ ತಪ್ಪಿಗೆ ಇನ್ನೊಬ್ಬರನ್ನು ಹೊಣೆ ಮಾಡಿ ಅದರಲ್ಲೇ ನೆಮ್ಮದಿಯ ಹುಡುಕಾಟ.. ಹೀಗೆ ಹಲವಾರು ಉತ್ತರವಿಲ್ಲದ ಪ್ರಶ್ನೆಗಳ ಭಾವನೆಗಳನ್ನು ಹೊತ್ತು ತಂದಿದೆ. ವಯೋಸಹಜ ಕುತೂಹಲ/ಹುಂಬ ಧೈರ್ಯದಿಂದ ಅಪಾಯದ ಅರಿವಿಲ್ಲದೇ ತಾನೇ ಹೋಗಿ ಚಕ್ರವ್ಯೂಹದಲ್ಲಿ ಸಿಲುಕುವ ಅಭಿಮನ್ಯು, ಕಾರಣವೇ ಅರಿಯದ ದ್ವೇಷಕ್ಕೆ ಸಾವಿಗೀಡಾದ ಅವನ ತಾಯಿ, ತಮ್ಮ.. ವಯಸ್ಸಿಗೂ ಮೀರಿದ ಪ್ರಬುದ್ಧತೆಯನ್ನು ಹೊಂದಿದ ಮಗ ವಿಕಾಸ್ (ಒಂದರ್ಥದಲ್ಲಿ ಈ ಕಥೆಯ ಹೀರೋ!!) , ಕಷ್ಟ ಎಂದಾಗ ಜೊತೆಯಾಗಿ ನಿಂತ(?) ಚಿಕ್ಕಪ್ಪ!!, ಸವಿತಾ, ವಿಶಾಲ ಹಾಗೂ ಅತಿಥಿಗಳಂತೆ ಬಂದು ಹೋಗುವ ಹಲವಾರು ಪಾತ್ರಗಳು, ಅವರ ಮನದ ತುಮುಲಗಳು, ಅವರೆಲ್ಲರೂ ನಮ್ಮಲ್ಲೇ ಒಬ್ಬರು ಎನಿಸುವಂತ ನೈಜತೆಯನ್ನು ಕಟ್ಟಿಕೊಟ್ಟಿರುವುದರಲ್ಲಿ ಲೇಖಕರ ಪಾತ್ರ ಬಹುದೊಡ್ಡದು. ಒಂದೇ ಓಘದಲ್ಲಿ ಇಡೀ ಪುಸ್ತಕವನ್ನು ಓದಿ ಮುಗಿಸಬೇಕೆನ್ನಿಸುವ ಹಪಾಹಪಿ, ಮುಂದೆ ಯಾವ ಭಯಾನಕ ವಾತಾವರಣ ಸೃಷ್ಟಿಯಾಗುವುದೋ ಎಂಬ ಭಯದ ಜೊತೆಗೇ ಕಥೆಯ ಕುತೂಹಲವನ್ನೂ ಕಾಪಿಟ್ಟುಕೊಂಡು ಕೊನೆಯ ಪುಟದವರೆಗೂ ಓದಿಸಿಕೊಂಡು ಹೋಗುವ ಈ ಕೃತಿ ಓದು ಮುಗಿದ ಮೇಲೂ ಬಹಳ ಸಮಯದವರೆಗೂ ಮನಸ್ಸನ್ನು ವಿಚಲಿತಗೊಳಿಸಿದ್ದಂತೂ ನಿಜ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಅಭಿಮನ್ಯುವಿಗೆ ಮಗನ ಬೆಂಬಲ ದೊರೆತು, ಅವರು ತಮ್ಮ ಕಾರ್ಯದಲ್ಲಿ ಯಶಸ್ಸು ಸಾಧಿಸುವ ಹಾದಿಯಲ್ಲಿ ಅವನ ಚಿಕ್ಕಪ್ಪನ ಉದ್ದೇಶ, ಅವನ ನಡವಳಿಕೆಯಲ್ಲಿನ ಹಠಾತ್ ಬದಲಾವಣೆಯೂ ಕಥೆಗೆ ಹೊಸ ತಿರುವನ್ನು ನೀಡಿದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಇದೊಂದು ಹಾರರ್ ಜೋನ್ ಕಾದಂಬರಿ ಆಗಿದ್ದು, ಮನುಷ್ಯನ ಆಲೋಚನೆಗಳು, ಕೀಳರಿಮೆ ಹಾಗೂ ಅದರಿಂದ ಉಂಟಾಗುವ ಪರಿಣಾಮಗಳನ್ನೆಲ್ಲ ಸೂಕ್ಷ್ಮವಾಗಿ ಅವಲೋಕನ ಮಾಡಿದರೆ, ಈ ಪುಸ್ತಕವನ್ನು ಮನೋವೈಜ್ಞಾನಿಕ ಕಾದಂಬರಿಗಳ ವರ್ಗಕ್ಕೆ ಸೇರಿಸಬಹುದು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

28
Votes
249
Views
7 Months
Since posted

Voting Closed!

Scroll to Top