Submission 2003

ಪುಸ್ತಕದ ಶೀರ್ಷಿಕೆ: ಕರ್ವಾಲೋ

ಪುಸ್ತಕದ ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಕ್ಷಯ ಸುತಾರ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಎಲ್ಲ ಕಾದಂಬರಿಗಳು ವಿಶೇಷತೆಯನ್ನೆ ಒಳಗೊಂಡಿರುತ್ತವೆ, ಅದರಲ್ಲಿ ಪ್ರಮುಖವಾಗಿ ನೋಡುವುದಾದರೆ ನನಗೂ ಬಹು ಇಷ್ಟ ವೇನಿಸಿರುವ "ಕರ್ವಾಲೋ" ಕಾದಂಬರಿ. ಈ ಕಥೆ ಶುರುವಾಗುವುದು ಒಂದು ಕಗ್ಗಾಡಿನ ಹಳ್ಳಿಯೊಂದರಲ್ಲಿ,ಹಳ್ಳಿ ಜೀವನ ಶೈಲಿಯಲ್ಲಿ ಆಸಕ್ತಿ ಇದ್ದರು ಕೂಡ ವಿಫಲ ಕೃಷಿಯಲ್ಲಿ ಬೇಸತ್ತು ಆಸ್ತಿಯನ್ನು ಮಾರಿ ನಗರಕ್ಕೆ ಹೋಗಲು ತೇಜಸ್ವಿ ಅವರು ನಿರ್ಧರಿಸುತ್ತಾರೆ. ಈ ನಡುವೆಯೇ ಮೂಡುಗೆರೆ ಜೇನು ಸೊಸೈಟಿಯಲ್ಲಿ ಜೇನುತುಪ್ಪವನ್ನು ಕೊಂಡು ಕೊಳ್ಳುವದರೊಂದಿಗೆ, ಒಂದು ಬಾಟಲಿ ಜೇನು ತುಪ್ಪವನ್ನು ಕೊಂಡುಕೊಳ್ಳಲು ಹೋದ ಲೇಖಕರು ಅಲ್ಲಿನ ಅಗ್ಗದ ಜೇನುತುಪ್ಪವನ್ನು ಕಂಡು ಒಂದು ಟಿನ ಜೇನುತುಪ್ಪವನ್ನು ಕೊಂಡು ಅದನ್ನು ಮನೆಗೆ ತಲುಪಿಸಲು ಕಷ್ಟಪಟ್ಟ ಪರಿ ಅಷ್ಟಿಷ್ಟಲ್ಲ. ಹಾಗೆಯೇ ಲೇಖಕರ ಮನೆಯ ಕೆಲಸದವ ಪ್ಯಾರ, ಅವರ ಮುದ್ದಿನ ನಾಯಿ ಕಿವಿ ಯಾಗಿದ್ದು, ಜೇನು ಸೊಸೈಟಿಯಲ್ಲಿ ಪರಿಚಯವಾದ "ಮಂದಣ್ಣನ" ಪಾತ್ರವೇ ಬಹುಮುಖ್ಯವಾಗಿದ್ದು, ಅಷ್ಟೇ ನಗೆ ಭರಿಸುವ ಪಾತ್ರವಾಗಿದೆ. ಹಾಗೂ ಮಂದಣ್ಣನ ಏಕ ಮಾತ್ರ ಗುರಿ ಮದುವೆ ಯಾಗುವುದು, ಸಾಕಷ್ಟು ಕಷ್ಟಗಳ ನಡುವೆಯೂ ರಾವಿ ಯೊಡನೆ ಮದುವೆಯಾಗುವನು. ಅವಳ ಗಂಟು ಬಿದ್ದೆದೆ ತಡ ಅವನ ಗ್ರಹಚಾರ ಕೆಟ್ಟು ಜೈಲುಪಾಲಾಗುವನು. ಮಂದಣ್ಣನನ್ನು ಕರ್ವಾಲೋ ರವರು ಜೈಲಿನಿಂದ ಹೊರತರುತ್ತಾರೆ. ಕರ್ವಾಲೋ ರವರು ಈ ಕಥೆಯ ಕೇಂದ್ರ ಪಾತ್ರಧಾರಿಗಳು, ಇವರು ಕೃಷಿ ವಿಜ್ಞಾನಿಯಾಗಿದ್ದು ಇವರ ಹುಡುಕಾಟ ಮತ್ತು ಅನ್ವೇಷಣೆಗಳು ಜನಸಾಮಾನ್ಯರ ಜ್ಞಾನಕ್ಕೆ ನಿಲುಕಲಾರದಂತಹುಗಳು. ಕರ್ವಾಲೋರವರು ಮಂದಣ್ಣನನ್ನು ಹೊರತರಲು ಕಾರಣ ಮಂದಣ್ಣಒಂದು ವಿಶಿಷ್ಟವಾದ ಪ್ರಾಣಿ ಸಂಕುಲವನ್ನು ಕಣ್ಣಾರೆ ಕಂಡಿರುತ್ತಾನೆ. ಅದುವೇ "ಹಾರುವ ಓತಿ"(flying lizard) ಈ ಪ್ರಾಣಿಯನ್ನು ಮಂದಣ್ಣ ಕಣ್ಣಾರೆ ಕಂಡಿರುತ್ತಾನೆ. ಈ ಹಾರುವ ಓತಿಯ ಸಂತತಿಯು ಸಾಕಷ್ಟು ವರ್ಷಗಳ ಹಿಂದೆಯೇ ನಶಿಸಿ ಹೋಗಿವೆ ಎಂದು ವಿವಿಧ ದೇಶಗಳು ಸಾಕಷ್ಟು ವಿಜ್ಞಾನಿಗಳು ತಿಳಿಸಿರುತ್ತಾರೆ. ಆದರೆ ಈ ಹಾರುವ ಓತಿಯನ್ನು ಮಂದಣ್ಣನು ಕಣ್ಣಾರೆ ಕಂಡಿರುವದರಿಂದ, ಕರ್ವಾಲೋ ರವರು ಇದನ್ನು ಕಾಣಬೇಕೆಂದು ಮಂದಣ್ಣನನ್ನು ಮತ್ತು ನಾರ್ವೆಕಾಡು ಮದ್ಯ ದಾರಿಯಲ್ಲಿ, ಪ್ರಭಾಕರ, ವೆಂಕ್ಟ,ಕರಿಯಪ್ಪ, ಕಿವಿ, ಕರ್ವಾಲೋ ರವರು ಲೇಖಕರು ಎಲ್ಲರೂ ಸೇರಿ ಹಾರುವ ಓತಿಯನ್ನು ಹಿಡಿಯಲು ಹೋರಡುತ್ತಾರೆ. ಈ ಹಾರುವ ಓತಿಯನ್ನು ಹಿಡಿಯಲು ಹೋರಟ ಇವರ ಕಾಡುದಾರಿಯ ಅನುಭವವೆ ವಿಶಿಷ್ಟವಾದದ್ದು,ಇವರಲ್ಲಿ ನಾವು ಕೂಡ ಅವರಲ್ಲೊಂದಾಗಿ ಹಾರುವ ಓತಿಯನ್ನು ಹಿಡಿಯಲು ಹೋರಡುತ್ತೇವೆ. ಹಾಗೆಯೇ ಎರಡು ದಿನಗಳಕಾಲ ಸತತವಾಗಿ ಮರದಿಂದ ಮರಕ್ಕೆ ಹಾರುವ ಪ್ರತಿಯೊಂದು ಪ್ರಾಣಿ ಪಕ್ಷಿ ಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಈ ಹಾರುವ ಓತಿ ಇರಬಹುದೆಂದು ಹುಡುಕುತ್ತಾ ಹೊರಡುತ್ತಾರೆ. ಆದರೆ ದಿನಕಳೆದರೂ ಅದರ ಸುಳಿವು ಇವರಿಗೆ ಸಿಗುವದಿಲ್ಲ, ಮಾರನೇ ದಿನ ಈ ಹಾರುವ ಓತಿ ನಮಗೆ ದಕ್ಕದು ಎಂದು ನಿರಾಶರಾಗಿ ಕುಳಿತಿರುವಾಗ, ನಮ್ಮ ಲೇಖಕರ ಕಣ್ಣಿಗೆ ಈ ಹಾರುವ ಓತಿಯು ಕಾಣುತ್ತದೆ. ಈ ಹಾರುವ ಓತಿಯನ್ನು ಹಿಡಿಯಲು ಕರಿಯಪ್ಪ ವೆಂಕ್ಟ ಸಾಕಷ್ಟು ಹರಾಸಹ ಪಡುತ್ತಾರೆ ಆದರೆ ಕೊನೆಯಲ್ಲಿ ಈ ಹಾರುವ ಓತಿ ಯಾರ ಕೈಗೂ ಸಿಗದೇ,ನೀಲಿ ಆಕಾಶದತ್ತ ತೇಲಿ ತೇಲಿ ಕಣ್ಮರೆಯಾಗುತ್ತದೆ. ಅವಾಗ ಕರ್ವಾಲೋ ಅವರು bad luck ಹೋಗಲಿ ಬಿಡಿ ಯಾರು ಬೇಸರ ಮಾಡಿಕೊಳ್ಳಬೇಡಿ ಏಕೆಂದರೆ, ಪ್ರಕೃತಿಯಲ್ಲಿನ ವಿಸ್ಮಯವು ಕ್ಷಣ ನಮ್ಮೆದುರಿಗೆ ಪ್ರತ್ಯಕ್ಷವಾಗಿ ಮತ್ತೆ ಪ್ರಕೃತಿಯಲ್ಲಿ ಲಿನವಾಯಿತು ಅದನ್ನು ನೋಡಿರುವುದೇ ನಮ್ಮ ಪುಣ್ಯ ಎಂದು ಹೇಳುತ್ತಾರೆ. ಹಾಗೆ ಕರ್ವಾಲೋರವರು ಲೇಖಕರಿಗೆ ಒಂದು ಮಾತನ್ನು ಹೇಳುತ್ತಾರೆ. ಜೀವ ಸಂಕುಲಕ್ಕೆ ಕೋನೆ ಇಲ್ಲ, ಅಂತ. ಅದು ಸಹ ಸತ್ಯ ಏಕೆಂದರೆ ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಬಳಿ ಇರುವ ಹಾರೋ ಹಿತ್ತಲು ಗ್ರಾಮದಲ್ಲಿ ಈ ಹಾರುವ ಓತಿಯು ಕಾಣಿಸಿ ಕೊಂಡಿದೆಎಂದು ಪತ್ರಿಕೆಯಲ್ಲಿ ವರದಿಯಾಗಿರುತ್ತದೆ. ಇಂದು ಈ ಹಾರುವ ಓತಿ ಕಾಣಿಸಿಕೊಂಡಿರುವುದು ಸೃಷ್ಠಿಯ ಅದ್ಭುತವೆ ಸರಿ. ನಮ್ಮ ಸುತ್ತಮುತ್ತಲಿನ ಪರಿಸರ ಎಷ್ಟೊಂದು ಅದ್ಭುತ ಜೀವ ವೈವಿದ್ಯತೆಗಳನ್ನು ತನ್ನಲಿ ಅಡಗಿಸಿ ಕೊಂಡಿದೆ. ಕಲ್ಪನೆಗೂ ನಿಲುಕದ ಸಸ್ಯ ಹಾಗೂ ಪ್ರಾಣಿ ಸಂಪತ್ತು ಪ್ರಕೃತಿಯ ಮಡಿಲಲ್ಲಿ ರಾರಾಜಿಸುತ್ತಿದೆ.ಇಂತಹ ಅಗೋಚರ ಜೀವ ಜಗತ್ತಿನ ಮಹತ್ವವನ್ನು ತಿಳಿಯಲು ನಾವು ಒಮ್ಮೆಯಾದರು ತೇಜಸ್ವಿಅವರ ಕರ್ವಾಲೋ ಕಾದಂಬರಿಯನ್ನು ಓದಲೇಬೇಕು....

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

43
Votes
240
Views
7 Months
Since posted

Voting Closed!

Scroll to Top