ಪುಸ್ತಕದ ಶೀರ್ಷಿಕೆ: ಪರಿಸರದ ಕಥೆ
ಪುಸ್ತಕದ ಲೇಖಕರು: ಕೆ ಪಿ ಪೂರ್ಣ ಚಂದ್ರ ತೇಜಸ್ವಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ರವಿತೇಜ ಜೆ ಎ.
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಕೆಲವು ಪುಸ್ತಕಗಳೇ ಹಾಗೆ ಓದಿದ ಮೇಲೆ ಅವುಗಳ ಮೇಲೆ ಮನಸಲ್ಲಿ ಒಂದು ಆಗಾಧ ಪ್ರೀತಿಯನ್ನು ಹುಟ್ಟಿಸಿ ಬಿಡುತ್ತವೆ. ನನ್ನ ಪಾಲಿನ ಅಂತ ಪುಸ್ತಕದಲ್ಲಿ ಒಂದು ಕೆ ಪಿ ಪೂರ್ಣ ಚಂದ್ರ ತೇಜಸ್ವಿ ಅವರು ಬರೆದ "ಪರಿಸರದ ಕಥೆ" ಕೂಡಾ ಒಂದು. ಕಥೆಗಳು, ವಿಸ್ಮಯಗಳು ನಮ್ಮ ಸುತ್ತಲೂ ಇರುತ್ತವೆ, ಆದರೆ ಅವುಗಳನ್ನು ತಿಳಿಯಲು, ವಿಮರ್ಶೆ ಮಾಡಲು ನಮಗೆ ಕೊಂಚ ತಾಳ್ಮೆ ಹಾಗೂ ಆಗತ್ಯವಿದ್ದಷ್ಟು ಕುತೂಹಲಗಳು ಇರಬೇಕು ಎಂಬುದು ನನಗೆ ಅರ್ಥವಾಗಿದ್ದೆ "ಪರಿಸರದ ಕಥೆ " ಓದಿದ ನಂತರ. ಈ "ಪರಿಸರದ ಕಥೆ " ಪುಸ್ತಕದಲ್ಲಿ ತೇಜಸ್ವಿ ಇದ್ದಾರೆ, ಅವರ ಮಗಳು "ಸುಸ್ಮಿತಾ", ಅವರ ನಾಯಿ "ಕಿವಿ " ಜೊತೆಗೆ " ಪ್ಯಾರ " "ಮಾರ " ಜೊತೆಗೆ ಪ್ರಕೃತಿಯ ವಿಸ್ಮಯಕ್ಕೆ ಜೀವಂತ ಸಾಕ್ಷಿಯಾದ ಪ್ರಾಣಿಗಳಿವೆ. ಕಥೆಯಲ್ಲಿ ಬರುವ ಪಾತ್ರಗಳು ಸತ್ಯಘಟನೆಯಿಂದ ಪ್ರೇರಿತವಾಗಿರುವುದರಿಂದ, ಅಲ್ಲಿ ಕೆಲವರಲ್ಲಿ ಅಮಾಯಕತೆ, ಅಧಿಕಪ್ರಸಂಗಿತನ ಜೊತೆಗೆ " ಹೀಗೂ ಉಂಟೆ? " ಎಂದು ನೀವೇ ನಿಬ್ಬೆರಾಗಗುವಂತೆ ಮಾಡುವ ಪ್ರಕೃತಿಯ ವಿಸ್ಮಯಗಳಿವೆ. ತಿಳಿ ಹಾಸ್ಯದ ಲೇಪನ ಮಾಡಿ ಲೇಖಕರು ಬರೆದ ರೀತಿ ತುಂಬಾ ಇಷ್ಟವಾಗುತ್ತದೆ. ಕೇವಲ ನೂರಾಮೂವತ್ತು ಪುಟಗಳ ಈ ಪುಸ್ತಕ, ಮೊದಲ ಬಾರಿ ನನ್ನ ಕೈ ಸೇರಿದಾಗ ನಾಲ್ಕು ದಿನದಲ್ಲಿ ಓದಿ ಮುಗಿಸಿದ್ದೆ. ಆ ನಂತರ ಕೆಲವು ಸ್ನೇಹಿತರಿಗೆ ಅವರು ಕೇಳದೆ ಇದ್ದರೂ ನಾನೇ ಈ ಪುಸ್ತಕದ ಬಗ್ಗೆ ಹೇಳಿದ್ದೆ. ಒಂದು ವಿಶೇಷ ಸೂಚನೆ ಈ ಪುಸ್ತಕ ತುಂಬಾ ಚನ್ನಾಗಿದೆ ಆದರೆ ಕೆಲವು ಬೈಗುಳದ ಪದಗಳನ್ನು ಇದರಲ್ಲಿ ಉಪಯೋಗಿಸಲಾಗಿದೆ. ಉಳಿದಂತೆ ಇದೊಂದು ಕನ್ನಡಿಗರ ಪಾಲಿಗೆ ಓದಲೇ ಬೇಕಾದ ಪುಸ್ತಕ ಎಂಬುದು ನನ್ನ ಅಭಿಪ್ರಾಯ. ಹದಿನಾಲ್ಕು ಪುಟ್ಟ ಪುಟ್ಟ ಕಥೆಗಳಿವೆ ( ಕಥೆಗಳು ಅನ್ನುವುದಕ್ಕಿಂತ, ಹದಿನಾಲ್ಕು ಸ್ವರಸ್ಯ ತುಂಬಿದ ಪ್ರಸಂಗಗಳು ಅನ್ನುವುದೇ ಸೂಕ್ತ ಅನಿಸುತ್ತದೆ). ಒಮ್ಮೆ ನೀವು ಓದಿ ನೋಡಿ ಎಂದು ಹೇಳಿ ವಿಮರ್ಶೆ ಮುಗಿಸುತ್ತೇನೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಒಂದು ದಿನ ಮಾರ ಬಿದ್ದು ಮೈಕೈ ಎಲ್ಲಾ ಗಾಯ ಮಾಡಿಕೊಂಡು ಬೆಳಗಿನ ಹೊತ್ತಿಗೆ ಮನೆಗೆ ಬಂದ. ಲೇಖಕರು "ಯಾಕೋ ಗಾಯ ಮಾಡಿಕೊಂಡಿದ್ದೀಯ? ಎಂದು ಕೇಳಿದ್ದಕ್ಕೆ. ಜನ್ನಾಪುರದಿಂದ ಬರುತ್ತಾ ಈಚಲು ಹರದಲ್ಲಿ ಒಂದು ದೆವ್ವ ಅವನಿಗೆ ಕಾಟ ಕೊಟ್ಟಿತೆಂದು, ಅವನನ್ನು ಕರೆದೊಯ್ದು, ಒಂದು ಕೊರಕಲಿನಲ್ಲಿ ಬೀಳಿಸಿ ಗಾಯ ಮಾಡಿತೆಂದು ಹೇಳಿದ. ದೆವ್ವ ಕಾಡುಕೋಳಿ ರೂಪದಲ್ಲಿ ಬಂದು ತೊಂದರೆ ಕೊಟ್ಟಿತೆಂದು ಹೇಳುತ್ತಾನೆ. ಆ ಕಾಡುಕೋಳಿ ನಿಜಕ್ಕೂ ದೆವ್ವನ? ಅದರ ರಹಸ್ಯ ಏನು ತಿಳಿದಾಗ ಪ್ರಕೃತಿ ವಿಸ್ಮಯ ನಮ್ಮನ್ನು ಚಕಿತಗೊಳಿಸುತ್ತವೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಕನ್ನಡ ಪುಸ್ತಕ ಪ್ರಿಯರಿಗೆ, ಪ್ರಕೃತಿಯ ವಿಸ್ಮಯಗಳ ಬಗ್ಗೆ ಪ್ರಾಣಿಗಳ ಬಗ್ಗೆ ನಿಮಗೊಂದಿಷ್ಟು ಕುತೂಹಲ ಇದ್ದರೆ ಸಾಕು ಈ ಪುಸ್ತಕ ನಿಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಕೆಲವು ಬೈಗುಳದ ಪದಗಳನ್ನು ಉಪಯೋಗಿಸಲಾಗಿದೆ ಎನ್ನುವ ವಿಚಾರ ಒಂದನ್ನು ಬಿಟ್ಟರೆ, ಹಾಸ್ಯ ಪ್ರಿಯರಿಗೂ ಇದು ತುಂಬಾ ಇಷ್ಟವಾಗುತ್ತದೆ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.