Submission 1808

ಪುಸ್ತಕದ ಶೀರ್ಷಿಕೆ: ಕಾಣದ ಸುಂದರಿ

ಪುಸ್ತಕದ ಲೇಖಕರು: ಬೀಚಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಮಾರುತಿ ಯಲ್ಲಪ್ಪ ಪೂಜೇರ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕನ್ನಡದ ಹಾಸ್ಯ ಬ್ರಹ್ಮ, ಹಾಸ್ಯ ಬರಹಗಾರ ರಾಯಸಂ ಬೀಮಸೇನರಾವ ಅರ್ಥಾತ್‌ ಬಳ್ಳಾರಿ ಬೀಚಿ ವೆಂದು ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ. ಬೀಚಿಯವರು ತಮ್ಮ ತಿಳಿ ಹಾಸ್ಯ ಬರಹದ ಮೂಲಕ ಸತ್ಯವನ್ನು ಬೆತ್ತಲೆ ಮಾಡಿ ನಿಲ್ಲಿಸಿದವರು. ಸಮಾಜದಲ್ಲಿ ನಡೆಯುತ್ತಿರುವ ದೊಡ್ಡವರ ಸಣ್ಣತನವನ್ನು, ಸಣ್ಣವರ ದೊಡ್ಡತನವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿವರು. ಹಾಗೂ ತಿಮ್ಮನ ತಲೆ ಮೂಲಕ ಹಾಸ್ಯ ಬರಹಗಾರೆಂದು ಪ್ರಸಿದ್ಧರಾಗಿದ್ದಾರೆ. ಬೀಚಿಯವರ ಕಾಣದ ಸುಂದರಿ ಕೃತಿಯನ್ನು ಓದಿದಾಗ ಕಾಣದ ಸುಂದರಿ ಕಾಣದಾಗೆ ಕಾಡಿದಳು ದೆವ್ವಾಗಿ, ಭೂತಾಗಿ, ಪಿಶಾಚಿಯಾಗಿ. ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಬೀಚಿಯವರು ಒಂದು ಹೆಣ್ಣು ಭೂತದ ಮೂಲಕ ಭೂತ ಕನ್ನಡಿಯಾಗಿ ಅನಾವರಣಗೊಳಿಸಿದ್ದಾರೆ. ಕಾಣದ ಸುಂದರಿ ಹೆಸರಿಗೆ ತಕ್ಕ ಸುಂದರಿಯಾಗಿದ್ದಳು, ಆದರೆ ಅವಳ ಜೀವನವೆಲ್ಲಾ ಬರೀ ಕುರೂಪವಾಗಿತ್ತು. ನರಕಯಾತನೆಯಾಗಿತ್ತು. ಒಡ ಹುಟ್ಟಿದ ಅಣ್ಣ ತತ್ವವು ಇಲ್ಲದ, ಜ್ಞಾನವೂ ಇಲ್ಲದ, ತತ್ವಜ್ಞಾನಿ ಪ್ರೊಫೆಸರನಾಗಿ ತಂಗಿಯ ಜೀವನಕ್ಕೆ ಹಣದ ಆಸೆಗಾಗಿ ಕೊಳ್ಳಿ ಇಡುತ್ತಾನೆ. ಆಡುವ ವಯಸ್ಸಿನಲ್ಲಿಯೆ ಕಾರಿನ ಆಸೆಗಾಗಿ ಸುಂದರಿಯನ್ನು ಕಾಮಪಿಶಾಚಿಯಾದ ದೇಸಾಯಿಯವರ ಐವತ್ತು ರೂಪಾಯಿಗೆ ಕೊಂಡ ತಂದ ದತ್ತು ಮಗ ರುಕ್ಮಾಂಗದನೆಗೆ ಮದುವೆ ಮಾಡಿಕೊಡುತ್ತಾನೆ. ಹುಡುಗನ ದಿವ್ಯಚರಿತೆ ಸರಿಯಾಗಿಲ್ಲೆಂದು ಸುಂದರಿಯ ತಂದೆ ಆಕ್ಷೇಪ ವ್ಯಕ್ತಪಡಿಸಿದರು ಅಣ್ಣ ಹಣದಾಸೆಗಾಗಿ, ಕಾರಿನ ಆಸೆಗಾಗಿ ತಂಗಿಯನ್ನು ಮದುವೆ ಮಾಡಿ ಕೊಡುವುದು ಸುಂದರಿ ಜೀವನ ಕಟುಕನ ಕೈಗೆ ಕುರಿಮರಿ ಕೊಟ್ಟಂತ ಆಗುತ್ತದೆ. ಕಾಮ ಪಿಶಾಚಿಯಾದ ಮಾವ ದೇಸಾಯಿ ಮಹಾರಾಣಿಯಂತಹ ಮಡದಿ ಮನೆಯಲ್ಲಿದ್ದರು ಕಸ ಗುಡಿಸವ ಒಡ್ಡರ ಬೀಮಿ ಮತ್ತು ಪಟ್ಟದ ಸೂಳೆ ಪ್ಯಾರಿಯನ್ನು, ಮಗಳು ಸಮನಾದ ಮಗನ ಹೆಂಡತಿ ಸೊಸೆ ಸುಂದರಿಯನ್ನು ಪತಿವೃತಿಯಾಗುವ ಮುನ್ನವೆ ಸ್ವಾಹಾ ಮಾಡಿ ಬಿಡುತ್ತಾನೆ. ಸುಂದರಿ ಜೀವನವನ್ನು ಹಾಳು ಮಾಡಿ ಬಿಡುತ್ತಾನೆ. ಮಾವ ದೇಸಾಯಿ ದೆಸೆಯಿಂದಾಗಿ ಹಗಲು ಮಾವನಿಗೆ ರಾತ್ರಿ ಗಂಡನಿಗೆ ಸೆರಗು ಹಾಸುವ ಪರಿಸ್ಥಿತಿ ಒದಗಿ ಬರುತ್ತದೆ. ಹೆಸರಿಗಷ್ಟೆ ತಾಳಿಕಟ್ಟಿದ ಗಂಡನಾದ ರುಕ್ಮಾಂಗದ ಹಾಗೂ ಸುಂದರಿಯನ್ನು ಮಗಳಂತೆ ಕಂಡ ಅವಳ ಅತ್ತೆ ಭಾಗ್ಯಲಕ್ಷಮ್ಮ ಸೊಸೆ ಮತ್ತು ಗಂಡನ ಹಾದರ ನೋಡಿ ಅವಳನ್ನು ಮನೆಬಿಟ್ಟು ಹೊರಗೆ ಹಾಕುತ್ತಾಳೆ. ಸುಂದರಿಗೆ ಗತಿ ಇಲ್ಲದವರಿಗೆ ಗಂಗಾವತಿಯೆ ಗತಿ ಅನ್ನುವಾಗೆ ಸುಂದರಿ ಮರಳಿ ತವರು ಮನೆಗೆ ಬರುತ್ತಾಳೆ. ಅಲ್ಲಿ ಅಣ್ಣ ಶ್ರೀಪಾದಾಚಾರ್ಯ ಅತ್ತಿಗೆ ವಸುಂಧರಾದೇವಿ ತಿರಸ್ಕಾರದಿಂದ ನೋಡುತ್ತಾರೆ. ಒಂದು ಸಲ ಗಂಡ ಎನಿಸಿಕೊಂಡವನು ನೆಶೆಯಲ್ಲಿ ಬಂದು ಗಂಡನ ಮನೆಗೆ ಕರೆದುಕೊಂಡು ಹೋಗುತ್ತೆನೆಂದು ಸಬೂಬು ಹೇಳೆ ತನ್ನ ಕಾಮ ವಾಂಚಲ್ಯವನ್ನು ತೀರಿಸಿಕೊಂಡು ಸುಂದರಿ ಮಡಿಲಲ್ಲಿ ಬೀಜ ಬಿತ್ತಿ ಹೋಗುತ್ತಾನೆ. ಅಲ್ಲಿಂದ ಸುಂದರಿ ಜೀವನ ಕಷ್ಟದ ಕಡಲಿಗೆ ನುಗ್ಗುತ್ತದೆ. ಮಗಳ ಮಾನಕ್ಕೆ ಹೆದರಿದ ತಂದೆ ಕಾಶಿಗೆ ಹೋಗಿ ಕೈಲಾಸವಾಸಿಯಾಗುತ್ತಾರೆ. ಬೀದಿಗೆ ಬಿದ್ದ ಸುಂದರಿ ಅನಾಥೆಯಾಗುತ್ತಾಳೆ. ಮಡಿಲಲ್ಲಿ ಲಕ್ಷ್ಮೀ ಅನ್ನೋ ಮಗಳನ್ನು ಇಟಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಪುಟ್ಟಮ್ಮ ಕಾಪಾಡಿ ಮಗಳಂತೆ ನೋಡಿಕೊಳ್ಳುತ್ತಾಳೆ. ಇದರಿಂದ ಮಡಿವಂತ ಸಮಾಜ ನರಸಿಂಹ ಹಾಗೂ ಪುಟ್ಟಮ್ಮರ ಪೌರೋಹಿತ್ಯ ಕಸಿದುಕೊಂಡು ಬಹಿಷ್ಕಾರ ಹಾಕಿದ್ದು ನೋಡಿ ಸುಂದರಿ ತನ್ನಿಂದ ಇವರಿಗೆ ಕಷ್ಟ ಒದಗಿತೆಂದು ರಾತ್ರೋರಾತ್ರಿ ಮನೆ ಬಿಟ್ಟು ಹೋಗುತ್ತಾಳೆ. ಪೊಲೀಸ್ ಬೆನ್ನಟ್ಟಿದಾಗ ಕುಡುಕ ಕವಿ ಮನೆ ಹೊಕ್ಕಾಗ ಜನ ನೀತಿಗೆ ಮಾತ್ರ ಗಂಡ ಹೆಂಡತಿ ಯಂತೆ ಇರುತ್ತಾರೆ. ಅವನು ಕಾಯಿಲೆ ಬಿದ್ದು ಸತ್ತ ನಂತರ ಲೋಕಾಬಿಯಂತಹ ದುಷ್ಟ ದುರಳನ ಕಣ್ಣಿಗೆ ಬಿದ್ದು ಇತ್ತ ತವರು ಮನೆ ಆಶ್ರಯ ಇಲ್ಲದೇ, ಅತ್ತ ಗಂಡನ ಮನೆಯ ಆಶ್ರಯ ಇಲ್ಲದೆ ಬೀದಿಗೆ ಬಿದ್ದು, ಮತ್ತೊಮ್ಮೆ ಗರ್ಭಿಣಿಯಾಗುವ ಲಕ್ಷಣ ಕಂಡು ಬಂದಾಗ ಮಡಿವಂತಿಕೆಯ ಸಮಾಜಕ್ಕೆ ಹೆದರಿ ಸಾವನ್ನು ಒಪ್ಪತ್ತಾಳೆ. ತನ್ನ ಆಸೆ ಆಕಾಂಕ್ಷೆ ಈಡೇರದೆ ಜೀವಂತ ಇದ್ದಾಗ ನಗದೇ ಇರುವ ಸುಂದರಿ ದೆವ್ವಾಗಿ ಪಿಶಾಚಿಯಾಗಿ ನಕ್ಕು ನಲಿಯುತ್ತಾಳೆ. ಮಗಳು ಲಕ್ಷ್ಮೀಯನ್ನು ದುರಳರಿಂದ ಉಳಿಸಿಕೊಳ್ಳಬೆಕೆಂದು ಪ್ರಯತ್ನಿಸಿದರು ಅವಳು ಕೂಡಾ ಲೋಕಾಬಿಯ ಕೈಗೆ ಸಿಕ್ಕು ಸಾವನ್ನು ಒಪ್ಪುತ್ತಾಳೆ. ಬೀಚಿಯವರು ತಮ್ಮ ಹಾಸ್ಯದ ಮೂಲಕವೇ ಭೂತದ ಮೂಲಕ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಬಹಳ ಮಾರ್ಮಿಕವಾಗಿ, ವಿಡಂಬನೆ ಮೂಲಕ ಕಾಣದ ಸುಂದರಿ ಕೃತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಕಾಣದ ಸುಂದರಿ ಯಂತಹ ಇನ್ನೂ ಎಷ್ಟೋ ಹೆಣ್ಣು ಮಕ್ಕಳು ದೇಸಾಯಿಯಂತ ಲೋಕಾಭಿಯಂತಹ ವ್ಯಕ್ತಿಗಳ ತೆವಲಿಗೆ ಬಲಿಯಾಗುತ್ತಿದ್ದಾರೆ. ಸೆರೆ ಕುಡಿಯುವ ಆಸೆಗಾಗಿ ತಂದೆ ಜೊತೆಗೆ ಮಲಗು ಅಂತೇಳುವ ಷಂಡಗಂಡ, ಧನಧಾಹಿ ಅಣ್ಣ ಅತ್ತಿಗೆ, ವ್ಯಭಿಚಾರಣೆಗೆ ನೂಕುವ ಲೋಕಾಭಿ ಮತ್ತು ಸೀತಮ್ಮನ ಪಾತ್ರಗಳು ಸುಂದರಿಯ ಮೇಲೆ ಪೈಶಾಚಿಕವಾಗಿ ನಡೆದುಕೊಳ್ಳುತ್ತೇವೆ. ಅವಳ ಮೇಲೆ ಕರಾಳ ನರ್ತನ ಗೈಯುತ್ತೇವೆ. ಶೇಷಮ್ಮ, ಪುಟ್ಟಮ್ಮ, ಭಾಗ್ಯಮ್ಮ ಕುಡುಕ ಕವಿ ಯಂತಹ ಪಾತ್ರಗಳು ಮಾನವೀಯತೆ ಪ್ರತೀಕವಾಗಿ ದೈವತ್ವದಂತೆ ಕಂಗೊಳಿಸುತ್ತೇವೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
160
Views
7 Months
Since posted

Voting Closed!

Scroll to Top