Submission 1806

ಪುಸ್ತಕದ ಶೀರ್ಷಿಕೆ: ನಿನ್ನೆಯಿಂದ ದೇವರಿಲ್ಲ

ಪುಸ್ತಕದ ಲೇಖಕರು: ವಿಷ್ಣು ಭಟ್ ಹೊಸ್ಮನೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಕುಂಬಾರ ಮಂಜುಳ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಈ ಪುಸ್ತಕವು ಹದಿನಾಲ್ಕು ಕಥೆಗಳನ್ನು ಒಳಗೊಂಡಿದೆ. ಎಲ್ಲಾ ಕಥೆಗಳು ಅಂತ್ಯವನ್ನು ಹೊಂದಿಲ್ಲವಾದರೂ ಮುಂದೆ ಏನಾಯಿತೋ ಎನ್ನುವಂತ ಕುತೂಹಲವನ್ನು ಹೊತ್ತಿವೆ. ಮೊದಲನೆಯದಾಗಿ "ಸರಳ ಲೆಕ್ಕಾಚಾರ " ಮಾಡಿದ ಕೆಲಸವನ್ನೇ ಮಾಡಿ ಬೇಸತ್ತಿದ್ದ ಪರಮೇಶ, ಕಂಪನಿಯ ಮುಂದೆ ಇದ್ದ ಮರ ಕಡಿಸಿ ಬೇರೆ ಕೆಲಸಕ್ಕೆ ಆಸೆ ಪಡುತ್ತಾನೆ. ಮರವನ್ನು ಕಡಿಸಿದ ನಂತರ ಬೇರೆ ಕೆಲಸ ಸಿಗದೇ ತನ್ನ ಗುಡಿಸುವ ಕೆಲಸವೂ ಹೋಗಿ ನೊಂದುಕೊಳ್ಳುತ್ತಾನೆ. ಇದನ್ನೇ ಬಂಡವಾಳ ಮಾಡಿಕೊಂಡ ನಿಶಿತ್ ಅದೇ ಕಂಪನಿಯಲ್ಲಿ ಗಾರ್ಡನ್ ಮಾಡಿಕೊಡಲು ಎರಡು ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುವುದು ಕಂಪನಿಯವರ ಮೂರ್ಖತನ ತೋರಿಸುತ್ತದೆ. ಇದರಲ್ಲಿರುವ ಇನ್ನೊಂದು ಕಥೆ "ನನ್ನ ಎದೆಯ ಭಾರ" ಇದರಲ್ಲಿ ಮಕ್ಕಳಿಲ್ಲದೆ ವಂಶ ಉಳಿಯುವುದಿಲ್ಲ ಎಂಬ ಒತ್ತಾಸೆಗೆ ಮದುವೆ ಆಗುತ್ತಾರೆ ಶಾಲೆಯ ಮೇಷ್ಟ್ರು ಒಬ್ಬರು. ಆದರೆ ಎಷ್ಟೇ ವರ್ಷ ಕಳೆದರು ಮಕ್ಕಳಾಗುವುದಿಲ್ಲ, ದೇವರಿಗೆ ಹರಕೆ ಸಲ್ಲಿಸಿದರು ಮಕ್ಕಳು ಆಗದೆ ಇದ್ದಾಗ ಹೆಂಡತಿಯೇ ಎರಡನೇ ಮದುವೆ ಮಾಡಿಸಿ ಮನೆಗೊಂದು ಮಗು ಬರುತ್ತದೆ. ಆದರೆ ಮೇಷ್ಟ್ರು ಮಗುವಿಗಿಂತ ತನ್ನ ಮೊದಲನೇ ಹೆಂಡತಿಯನ್ನು ಹೆಚ್ಚು ಪ್ರೀತಿಸುತ್ತಿರುವುದು ಕಾಣುತ್ತದೆ. ಶಿರ್ಷಿಕೆಯೇ ಹೇಳುವಂತೆ ಮತ್ತೊಂದು ಕಥೆ "ನಿನ್ನೆಯಿಂದ ದೇವರಿಲ್ಲ " ಸ್ಟಾಲಿನ್ ಎಂಬ ಹುಡುಗ ಲೀನಾ ಎಂಬ ಹುಡುಗಿಯನ್ನು ಮದುವೆ ಆಗಿ ಮನೆ ಅಳಿಯನಾಗಿ ಹೋಗುತ್ತಾನೆ. ಹೂವಿನ ವ್ಯವಹಾರದಲ್ಲಿ ಸಾಕಷ್ಟು ಸಂಪಾದಿಸುತ್ತಿದ್ದೂ ಸ್ಟಾಲಿನ್ ಗೆ ನಿಧಾನವಾಗಿ ಅಹಂಕಾರ ಶುರುವಾಗುವುದು.ಒಂದು ದಿನ ಅವನ ಹೂವಿನ ವ್ಯಾಪಾರ ನಿಂತೇ ಹೋಯಿತು.ಎಲ್ಲಿ ನೋಡಿದರೂ ಯಾರು ಕೊಳ್ಳುವವರಿಲ್ಲ, ದೇವರಿಗೆ ಕೊಟ್ಟ ಹೂಗಳು ಹಾಗೆ ಇದ್ದವು, ಎಲ್ಲಿಯೂ ಯಾರು ಇಲ್ಲದನ್ನು ನೋಡಿದವನಿಗೆ ವಾಮನ ಎಂಬ ಭಟ್ಟರು"ನಿನ್ನೆಯಿಂದ ದೇವರಿಲ್ಲವಂತೆ"! ಎಂದು ಹೇಳುತ್ತಾನೆ. ಅವನ ಅಹಂಕಾರಕ್ಕೆ ಬಿದ್ದ ಪೆಟ್ಟು ಇದಾಗಿರಬಹುದು. ಅವನ ಮುಂದಿನ ಜೀವನ,ಹಣಕಾಸಿನ ವ್ಯವಹಾರ ಅವುಗಳನ್ನು ನೆನೆದು ನೊಂದುಕೊಳ್ಳುತ್ತಾನೆ. ಪುಸ್ತಕವನ್ನು ಒಮ್ಮೆ ಓದಿದ ಕೂಡಲೇ ಎಲ್ಲವೂ ತಿಳಿಯುವುದಿಲ್ಲ, ಅರ್ಥ ಆಗುವುದು ಇಲ್ಲ. ಅರ್ಥ ಆಗುವಲ್ಲಿಯವರೆಗೆ ಓದಿದರೆ ಚಂದ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಪುಸ್ತಕದಲ್ಲಿ ನನ್ನನ್ನು ಕಾಡಿದ ಕಥೆ ಎಂದರೆ "ಕಡುಮೋಹದ ಮೌನ" ದೊಡ್ಡಪ್ಪನ ವ್ಯವಹಾರದ ಮೋಸದ ಬುದ್ದಿಯಿಂದ ಮೌನವಾದ ತಮ್ಮ-ಅವನ ಹೆಂಡತಿ,ಕೊನೆಗೆ ತಮ್ಮ ತೀರಿಹೋದ ಬಳಿಕ ಅವನ ಹೆಂಡತಿ ಅವಳ ತವರು ಮನೆಗೆ ಹೋಗುತ್ತಾಳೆ. ಅವಳ ಮಗ ದೊಡ್ಡಪ್ಪನ ಬುದ್ದಿ ಗೊತ್ತಿಲ್ಲದೇ ಅಪ್ಪ-ಅಮ್ಮನನ್ನು ದ್ವೇಷಿಸುತ್ತಾ ದೊಡ್ಡಪ್ಪನ ಆಶ್ರಯದಲ್ಲಿ ಬೆಳೆಯುತ್ತಾನೆ. ದೊಡ್ಡಪ್ಪನ ಮೋಸದ ಬಗ್ಗೆ ಅರಿವಾದಾಗ ನೊಂದುಕೊಂಡು ಅದೇ ಮನೆಯಲ್ಲಿ ಅವನು ಮೌನವಾಗುವುದು ತುಂಬಾ ಬೇಸರದ ಸಂಗತಿ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಎಲ್ಲಾ ವಿಧದ ಓದುಗರಿಗೆ -ಮಕ್ಕಳು, ಸಣ್ಣಕತೆ ಇಷ್ಟ ಪಡುವವರಿಗೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

15
Votes
144
Views
8 Months
Since posted

Voting Closed!

Scroll to Top