ಪುಸ್ತಕದ ಶೀರ್ಷಿಕೆ: ದ್ವೈತ
ಪುಸ್ತಕದ ಲೇಖಕರು: ರಾಘವ್ ವಿಶ್ವಾಸಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಜ್ಯೋತಿ ಉಮೇಶ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
" ದ್ವೈತ ". ಇದು ಒಂದು ಹಲವು ನಿಗೂಢತೆಗಳ ಒಳಗೊಂಡ ಒಂದು ರೋಚಕ ಕಥೆ... ಈ ಕಥೆಯ ಕಥಾನಾಯಕ ರಾಜೀವ್ ವರ್ಮಾ... ಒಬ್ಬ ಪ್ರಸಿದ್ಧ ಕಾದಂಬರಿಕಾರ.. ಒಂದು ಹೊಸ ಕಾದಂಬರಿ ಬರೆಯಲು ಶುರು ಮಾಡುತ್ತಾರೆ... ಅದನ್ನು ತನ್ನ ಸ್ನೇಹಿತರಿಗೆ ಮತ್ತು ದಿವಂಗತ ಹೆಂಡತಿ ಲಾವಣ್ಯ ಳಿಗೆ ಸಮರ್ಪಿಸುತ್ತಾರೆ... ಆದರೆ ಅವರಿಗೆ ಈ ಕಾದಂಬರಿ ನನ್ನ ಕೊನೆಯ ಕಾದಂಬರಿ ಆಗಬಹುದಾ ಅಥವಾ ಇದನ್ನೇ ತನಗೆ ಪೂರ್ಣಗೊಳಿಸಲು ಆಗುವುದೋ? ಇಲ್ಲವೋ? ಎಂಬ ಅನುಮಾನ ಇತ್ತು .. ಏಕೆಂದರೆ ಕಲ್ಪಿತ ಕಥೆಯಲ್ಲದೆ ನೈಜತೆಗೆ ಸಂಬಂದಿಸಿದ ಕಥೆಯಾಗಿತ್ತು ... ಆರ್ ವಿ ಅವರು ಒಬ್ಬ ವಿಭಿನ್ನ ರೀತಿಯ ಕಾದಂಬರಿಕಾರರಾಗಿದ್ದು ಎಲ್ಲರೂ ಪಾತ್ರಗಳ ಕಲ್ಪಿಸಿ ಬರೆದರೆ ಇವರು ಆ ಪಾತ್ರಗಳ ಸ್ವತಃ ಅನುಭವಿಸಿ ನೈಜವಾಗಿ ಬರೆಯುತ್ತಿದ್ದರು. " ಎಲ್ಲರೂ ಕೂತಲ್ಲೇ ಕಲ್ಪನೆಗೆ ಜೀವ ಕೊಟ್ಟರೆ ಅದು ಕಥೆ ಆಗುತ್ತದೆಯೇ ಹೊರತೂ ದಂತಕಥೆಯಾಗಲ್ಲ " ಇದು ಆರ್ ವಿ ಅವರ ಅಭಿಪ್ರಾಯವಾಗಿತ್ತು... ಈ ಕಥೆಯ ಮತ್ತೂಂದು ಮುಖ್ಯ ಪಾತ್ರ "ಪರಶು ರಾಮ್" .. ಆರ್ ವಿ ಅವರ ಅಪ್ಪಟ ಅಭಿಮಾನಿ.. ಅವರ ಕಥೆಗಳೆಂದರೆ ಅವನಿಗೊಂದು ರೀತಿ ಹುಚ್ಚು ಅಭಿಮಾನ ಎಂದರೂ ತಪ್ಪಾಗಲಾರದು.. ಪರಶು ಆರ್ ವಿ ಅವರ ಹಸ್ತಾಕ್ಷರ ಪಡೆದಿದ್ದರೂ ಒಮ್ಮೆಯಾದರೂ ಅವರ ಜೊತೆ ಮುಖತಃ ಭೇಟಿಯಾಗಿ ಮಾತನಾಡಬೇಕೆಂಬುದು ಅವನ ಆಸೆಯಾಗಿತ್ತು .. ಆದರೆ ಅವರ ಅಕಾಲಿಕ ಸಾವಿನಿಂದ ಅವನ ಆಸೆ ಹಾಗೆಯೇ ಉಳಿದು ಬಿಟ್ಟಿತು ಎನ್ನುವ ಬೇಸರದಲ್ಲಿ ಇರುವಾಗ ಅವನ ಗೆಳೆಯರು ಅವನನ್ನು ಆರ್ ವಿ ಅವರ ಸಮಾಧಿಯ ಬಳಿ ಕರೆದು ಕೊಂಡು ಹೋಗುವರು.. ಆದರೆ ಅಲ್ಲಿ ಅವರ ಶವ ಇರುವುದಿಲ್ಲ .. ಆದರೆ ಅವರ ಕೊನೆಯ ಕಾದಂಬರಿ "ದೈತ " ಪುಸ್ತಕ ಇರುತ್ತದೆ.. ಈ ವಿಷಯ ಪರಶುವಿನಿದ ಮುಚ್ಚಿಟ್ಟು ವಾಪಸ್ಸು ಕರೆತಂದುಬಿಡುತ್ತಾರೆ.. ಆದರೆ ಅಸಲಿ ಕಥೆ ಶುರುವಾಗುವುದೇ ಅಲ್ಲಿ .. ಅಲ್ಲಿದ್ದ ಪುಸ್ತಕ ಪರಶುವಿನ ಮನೆಯಲ್ಲಿ ಇರುತ್ತದೆ.. ಇದರಿಂದ ಅವನು ಸಾಕಷ್ಟು ಮಾನಸಿಕ ತೊಳಲಾಟ, ಗೊಂದಲ, ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುವನು... ಇದರಿಂದ ಇದರಿಂದ ಹೊರತರಲು ಅವನ ಸ್ನೇಹಿತರು ಹಾಗೆ ಅವನ ಕಾಲೇಜಿನ ಪ್ರಿನ್ಸಿಪಾಲ್ ಫಾದರ್ ಫರ್ನಾಂಡಿಸ್ ಸಾಕಷ್ಟು ಪ್ರಯತ್ನ ಪಡುವರು.. ಅದರಲ್ಲಿ ಎಷ್ಟು ಯಶಸ್ವಿ ಆಗುವರು ಎನ್ನುವುದ ತಿಳಿಯಬೇಕಾದರೆ ಖಂಡಿತ ಪುಸ್ತಕ ಓದಲೇ ಬೇಕು .... ಇದಿಷ್ಟೇ ಅಲ್ಲದೆ ಆರ್ ವಿ ಅವರು ತಮ್ಮ ದ್ವೈತ ಕಾದಂಬರಿ ಬರೆಯಲು ಸ್ವತಃ ತಾವೇ ಮನೋರೋಗಿಯಾಗಿ ಇರಲು ಬಯಸಿ ಒಂದು ಆಸ್ಪತ್ರೆಗೆ ಹೋಗುತ್ತಾರೆ .. ಅಲ್ಲಿ ಮನೋರೋಗದ ಬಗ್ಗೆ ಅದಕ್ಕೆ ಕಾರಣಗಳು , ತಿಳಿದು ಕೊಳ್ಳುತ್ತಾರೆ... ಆ ಆಸ್ಪತ್ರೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ, ತಿಳಿದುಕೊಳ್ಳುತ್ತಾರೆ... ಇದರಿಂದ ಅವರಿಗೆ ಏನಾದರೂ ಸಮಸ್ಯೆ ಉಂಟಾಯಿತ ? ಇಲ್ಲವಾ ? ಅಲ್ಲಿನ ಸಿಬ್ಬಂದಿ Dr. ನವೀನ್ ಹಾಗೂ Dr. ಹೇಮಂತ್... ಹಾಗೆಯೇ ಪೊಲೀಸ್ ಅಧಿಕಾರಿ ಗೌರೀಶ್ ಪಾತ್ರಗಳ ಮೂಲಕ ಯಾರು ಹೊರ ಕಾಣುವಷ್ಟು ಒಳ್ಳೆಯವರು ಇರುವುದಿಲ್ಲ.. ಗೋಮುಖ ವ್ಯಾಘ್ರರೂ ಇರುತ್ತಾರೆ ಎನ್ನುವುದನ್ನು ವಿವರಿಸಿದ್ದಾರೆ.. ಎಷ್ಟೇ ಜಾಗರೂಕತೆಯಿಂದ ತಪ್ಪುಗಳ ಮಾಡಿದರು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ... ಇದೆಲ್ಲದರ ನಡುವೆ ನಿಜಕ್ಕೂ ಆರ್ ವಿ ಅವರು ಸತ್ತದಾದರೂ ಹೇಗೆ ? ಕೊಲೆಯೋ ? ಆತ್ಮ ಹತ್ಯೆಯೋ? ಪರಶುವಿಗೆ ಇದ್ದ ಸಮಸ್ಯೆ ಪರಿಹಾರ ಆಯ್ತಾ? ಇಲ್ಲವಾ? ಇದೆಲ್ಲವನ್ನೂ ನಾನು ಹೇಳುವುದಕ್ಕಿಂತ ನೀವೇ ಪುಸ್ತಕವನ್ನು ಕೊಂಡು ಓದಿ .... "ದ್ವೈತ" ಇದರ ಕರ್ತೃ ರಾಘವ್ ವಿಶ್ವಾಸಿ... ಈ ಪುಸ್ತಕ ಬಿಡುಗಡೆಯಾದ ಹೊಸತರಲ್ಲಿಯೇ ಓದಿದ್ದೆ ಆದರೆ ವಿಮರ್ಶೆ ಮಾಡೋಕೆ ಆಗ ಗೊತ್ತಿರಲಿಲ್ಲ.. ಈಗ ಪ್ರಯತ್ನ ಮಾಡಿರುವೆ.. ನಿಜಕ್ಕೂ ಒಂದು ಅದ್ಭುತ ಕಥಾ ಹಂದರದ ಪುಸ್ತಕ... ಕೊಂಡು ಓದಿ ಅಭಿಪ್ರಾಯ ಹಂಚಿಕೊಳ್ಳಿ...
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ನನಗೆ ಇದನ್ನ ಓದಿದಾಗ ಮನದಲ್ಲಿ ಉಳಿದ ಪಾತ್ರಗಳು ಒಂದು ರಾಜೀವ್ ವರ್ಮಾ ಮತ್ತೊಂದು ಪರಶು.....
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಮನೋವೈಜ್ಞಾನಿಕ ಕಥೆ ಇಷ್ಟಪಡುವವರಿಗೆ...
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.