Submission 1780

ಪುಸ್ತಕದ ಶೀರ್ಷಿಕೆ: ನೆರಳಿಗಂಟಿದ ಭಾವ

ಪುಸ್ತಕದ ಲೇಖಕರು: ಸವಿತಾ ಮುದ್ಗಲ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಬಲವಂತ.ಸಿ.ಮೋರಟಗಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 3.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಸರಳ ಮತ್ತು ಸ್ನೇಹಜೀವಿಯಾದ ಸಹೋದರಿ ಶ್ರೀಮತಿ ಸವಿತಾ ಮುದ್ಗಲ್ ಅವರು ನನಗೆ ಅವರ ಸಾಮಾಜಿಕ ಕಾಳಜಿಯುಳ್ಳ ಬರಹದ ಮೂಲಕ ನನಗೆ ಮುಖಪುಸ್ತಕದಲ್ಲಿ ಪರಿಚಯವಾದ ನನ್ನ ಆತ್ಮೀಯ ವಲಯದಲ್ಲಿರುವ ನನ್ನ ನೆಚ್ಚಿನ ಬರವಸೆಯ ಕವಯಿತ್ರಿ.ಅವರ ಮೊದಲ ಕವನ ಸಂಕಲನ "ನೆರಳಿಗಂಟಿದ ಭಾವ" ನಾನು ಓದಿದಾಗ ನನಗೆ ಕೃತಿಯ ಬಗ್ಗೆ ಒಂದೆರಡು ಮಾತುಗಳು ಹೇಳಬೇಕಿನಿಸಿತು, ಬರಹ ರೂಪದಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿರುವೆ. ‌ ಮೊದಲನೆಯದಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ ಸಹೋದರಿ ಸವಿತಾ ಅವರಿಗೆ ಗೌರವಪೂರ್ವಕ ಅಭಿನಂದನೆಗಳು. ನೆರಳಿಗಂಟಿದ ಭಾವ ಒಂದು ಸುಂದರವಾದ ಮುಖಪುಟ ಹೊಂದಿರುವ ಸುಮಾರು "೮೪" ವಿಭಿನ್ನ ವಿಷಯ ಮತ್ತು ವಿಚಾರಗಳನ್ನು ಹೊಂದಿರುವ ಕೃತಿಯಾಗಿದೆ. ಕವಯಿತ್ರಿ ತಮ್ಮ ಕೃತಿಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿವಿಧ ಕವನಗಳ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಬಹುದಾಗಿದೆ.ಕನ್ನಡ ಭಾಷೆಯ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿರುವ ಕವಯಿತ್ರಿ ಅನವರತ, ಪುನರ್ಜನ್ಮ,ಕನ್ನಡಮ್ಮ,ಎಂದೆಂದಿಗೂ ನೀ ಕನ್ನಡವಾಗಿರು, ಕರ್ನಾಟಕ ಶಿಲ್ಪಕಲೆಯ ಗತವೈಭವ,ಲಿಪಿಗಳ ರಾಣಿ ಕನ್ನಡ ಮೊದಲಾದ ಕವನಗಳಲ್ಲಿ ತಮ್ಮ ತಾಯ್ನಾಡಿನ ಗೌರವವನ್ನು ಹಾಡಿ ಹೊಗಳಿದ್ದಾರೆ.ಕನ್ನಡ ಭಾಷೆಯ ಹಿರಿಮೆಯನ್ನು ಹಿರಿದಾಗಿಸಿದ್ದಾರೆ. ಒಬ್ಬ ಸಂಪನ್ನ ಗೃಹಿಣಿಯಾದ ಕವಯಿತ್ರಿ ಸಂಸಾರದ ಏಳು ಬೀಳುಗಳನ್ನು, ಪ್ರೀತಿ ಪ್ರೇಮವನ್ನು ಸಹಜವಾಗಿ ಚಿತ್ರಿಸಿದ್ದಾರೆ, "ಹೊಲದಲ್ಲಿ ಕೂತು ಊಟ ಮಾಡುತ ಮನಸಿನ ದುಗುಡವೆಲ್ಲ ದೂರದೂಡತ" ಎನ್ನುವ ಮೂಲಕ ಸಹಬಾಳ್ವೆಯ ಸಂದೇಶವನ್ನು ಸಾರಿದ್ದಾರೆ. "ದೇಶ ಕಾಯುವ ಪ್ರತಿಯೊಬ್ಬ ಸೈನಿಕ ದೇವರೆಂದು" ಹೆಮ್ಮೆಯಿಂದ ಕವಯಿತ್ರಿ "ದೇಶ ಕಾಯುವ ಧೀಮಂತ ಯೋಧ" ಕವನದ ಮೂಲಕ ವೀರಯೋಧರಿಗೆ ನಮನಗಳನ್ನು ಸಲ್ಲಿಸುತ್ತ ತಮ್ಮ ದೇಶಪ್ರೇಮವನ್ನು ಮೆರೆದಿದ್ದಾರೆ. ‌‌. "ನೆರಳಿಗಂಟಿದ ಭಾವ" ಕವನ ಸಂಕಲನವು ತಾಯಿಯ ತಾಯ್ತತನದ ವಾತ್ಸಲ್ಯ,ಮಮತೆ, ಮಮಕಾರ, ಸ್ತ್ರೀ ಮನದ ವೇದನೆ, ತುಡಿತಗಳ ತಾಕಲಾಟವನ್ನು ವಿಶ್ಲೇಷಿಸುವ ಸರಳವಾದ ಪದಗಳಿಂದ ಕೂಡಿದ ಸೊಗಸಾದ ಭಾವನೆಗಳ ಹಂದರವಾಗಿದೆ. ಕವಯಿತ್ರಿ ಸವಿತಾ ಅವರು ಮನುಷ್ಯನ ಸ್ವಾರ್ಥ, ಬೂಟಾಟಿಕೆ,ನಕಲಿತನ,ಕಪಟ ಮತ್ತು ವಂಚನೆಯನ್ನು ಖಂಡಿಸುವ ಪ್ರಯತ್ನ ಮಾಡಿದ್ದಾರೆ,ಜೊತೆಗೆ ಜೀವನ ಉಲ್ಲಾಸ,ಸಂತಸ ಮತ್ತು ಸಂಭ್ರಮವನ್ನು ಸಹಜವಾಗಿ ಹಲವು ಕವನಗಳ ಮೂಲಕ ಆನಂದಿಸಿದ್ದಾರೆ. ಸಾಮಾಜಿಕ ಕಾಳಜಿ ಮತ್ತು ಕಳಿಕಳಿಯನ್ನು ಕವಯಿತ್ರಿ ತಮ್ಮ ಈ ಕವನಗಳ ಮೂಲಕ ಹೇಳಿ ತಮ್ಮ ಜವಾಬ್ದಾರಿಯನ್ನು ನಿಭಾಸುವಲ್ಲಿ ಯಶಸ್ವಿಯಾಗಿದ್ದಾರೆ. "ಕುರುಡು ಕಾಂಚಾಣ ಕುಣಿಯಲು ನಿತ್ಯವು ಮನ ಮಿಡಿದಿದೆ ಹಿಡಿಯಲು ಅನುದಿನವು ಕಾಣದ ಕಡಲಿಗೆ ಹಂಬಲಿಸಿದೆ ಮನವು ಕತ್ತಲ ಹಾದಿಯಲ್ಲಿ ಬೆಳಕಿನ ಹುಡುಕಾಟವು" ಎಂದು ಕವಯಿತ್ರಿ ವಾಮಮಾರ್ಗದ ಸಂಪಾದನೆಯನ್ನು ನಯವಾಗಿ ತಿರಸ್ಕರಿಸಿದ್ದಾರೆ. ‌ಸಮಾನತೆ, ಸಂಸಾರದಲ್ಲಿ ಸಾಮರಸ್ಯ, ಸಾಮಾಜಿಕ ಮೌಲ್ಯಗಳು,ದೈವಿಗುಣ,ಬದುಕಿನ ಪಾಠಗಳು, ಪ್ರೀತಿಯ ಹರವು ಮೊದಲಾದ ವಿಷಯಗಳು ಕವನ ಸಂಕಲನದ ಮುಖ್ಯ ವಿಷಯಗಳೆಂದರೂ ತಪ್ಪಾಗಲಾರದು.ಸಹಬಾಳ್ವೆಯ ಸೂಕ್ಷ್ಮತೆ, ಭಾವೈಕ್ಯತೆ, ನಾಡು ನುಡಿ ಪ್ರೇಮ, ತಾರತಮ್ಯವನ್ನು ತಿದ್ದುವ ಭಾವ ಹಂಬಲ ಕವಯಿತ್ರಿ ಮನದಲ್ಲಿ ಕವನಗಳಾಗಿ ಮಿಡಿದಿವೆ. ಸಮಾಜ,ನಾಡು, ನುಡಿ ಮತ್ತು ಭಾವೈಕ್ಯತೆಯ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಕವಯಿತ್ರಿ ಬರವಣಿಗೆಯ ಶೈಲಿಯನ್ನು ಮತ್ತು ಪದಗಳ ಜೋಡಣೆಯಲ್ಲಿ ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡು ಮುಂದುವರೆದರೆ ಅವರು ಸಾಹಿತ್ಯ ನೆಲೆ ಇನ್ನೂ ಗಟ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ‌ಕವಯಿತ್ರಿ ತಮ್ಮ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಒಂದು ಉತ್ತಮವಾದ ಸಾಮಾಜಿಕ ಕಳಕಳಿಯುಳ್ಳ ಕೃತಿಯನ್ನು ಓದುಗರಿಗೆ ಸಮರ್ಪಿಸಿದ್ದಾರೆ. "ನೆರಳಿಗಂಟಿದ ಭಾವ" ಕೃತಿಯನ್ನು ಕೊಂಡು ಓದುವುದರ ಮೂಲಕ ಕವಯಿತ್ರಿಯನ್ನು ಪ್ರೋತ್ಸಾಹಿಸೋಣ ,ಸಹೋದರಿಯಿಂದ ಇನ್ನಷ್ಟು ಕೃತಿಗಳು ನಾಡಿಗೆ ಸಮರ್ಪಣೆಯಾಗಲೆಂದು ಮನಃಪೂರ್ವಕವಾಗಿ ಹಾರೈಸುವೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

20
Votes
140
Views
7 Months
Since posted

Voting Closed!

Scroll to Top