ಪುಸ್ತಕದ ಶೀರ್ಷಿಕೆ: ಜೋತಯ್ಯನ ಬಿದಿರು ಬುಟ್ಟಿ
ಪುಸ್ತಕದ ಲೇಖಕರು: ತೇಜಸ್ವಿನಿ ಹೆಗಡೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶ್ರದ್ಧಾ ಹೆಗಡೆ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಕೆಲವು ಪುಸ್ತಕಗಳೇ ಹಾಗೆ. ಅಲ್ಲಲ್ಲಿ ಮುಗುಳ್ನಗೆ, ನಿಟ್ಟುಸಿರು, ಅಲ್ಲೆಲ್ಲೋ ಒಂದು ವಿಷಾದ, ಹಾಗೆ ಸ್ವಲ್ಪ ಹೊತ್ತು ಕಣ್ಮುಚ್ಚಿ ಕುಳಿತುಕೊಳ್ಳುವುದು ಈ ಥರಹದ ಅನುಭವವನ್ನು ನೀಡುತ್ತವೆ. ಅಂಥಹ ಅಪರೂಪದ ಪುಸ್ತಕಗಳಲ್ಲಿ ತೇಜಸ್ವಿನಿ ಹೆಗಡೆಯವರ ಜೋತಯ್ಯನ ಬಿದಿರು ಬುಟ್ಟಿಯೂ ಒಂದು ಅನ್ನುವುದು ಖುಷಿಯ ವಿಚಾರ. ಈ ಪುಸ್ತಕದಲ್ಲಿರುವ ಕಥೆಗಳಲ್ಲಿ ಕಾಣಲು ಸಿಗುವ ರತ್ನಮ್ಮನಿರಬಹುದು, ವಾರಿಜಳಿರಬಹುದು ಅಥವಾ ಸುಮರಂಥಾ ಹೆಣ್ಣುಮಕ್ಕಳು ಪಟ್ಟ ಕಷ್ಟಗಳನ್ನು ಕೇವಲ ಸ್ತ್ರೀ ಶೋಷಣೆ ಅನ್ನುವ ಬೊಬ್ಬೆಯಾಗಿಸದೆ, ಸಮಾಜದ ಕರಾಳ ಮುಖವನ್ನು ನಯವಾಗಿ ಆದರೆ ಚುಚ್ಚುವಂತೆ ಎಲ್ಲರ ಮುಂದೆ ಬಿಚ್ಚಿಟ್ಟು ಯೋಚಿಸುವಂತೆ ಮಾಡುವ ರೀತಿ ನಿಜವಾಗಿಯೂ ಇಷ್ಟವಾಯಿತು. ನಮ್ಮವರೇ ಅನಿಸಿಕೊಂಡವರೂ ಕೂಡಾ ಸಮಾಜದ ಅರ್ಥವಿಲ್ಲದ ಕಟ್ಟುಪಾಡಿಗೆ ಹೆದರಿ ಹೇಗೆ ನಮ್ಮ ಬದುಕನ್ನು ನಮಗೆ ಬೇಕಾದಂತೆ ಕಟ್ಟಿಕೊಳ್ಳದಂತೆ ಓಲೈಸುತ್ತಾರೆ ಎಂದು ರತ್ನಗಂಧಾ ಕಥೆ ಓದುವಾಗ ಮತ್ತೆ ಮತ್ತೆ ಅನಿಸಿದ್ದು. ಸಮಾಜದಲ್ಲಿನ ತೊಂದರೆಗಳನ್ನು ಬರಿಯ ಹೆಣ್ಣುಮಕ್ಕಳ ಕಷ್ಟಗಳಿಗೇ ಮಾತ್ರ ಸೀಮಿತ ಮಾಡದೆ ಜೋತಯ್ಯನಂತವರು ಮಕ್ಕಳ ಖುಷಿಗಾಗಿ ಹೆಣಗುವ ರೀತಿಯನ್ನೂ, ಶಿಷ್ಯರ ಒಳಿತಿಗಾಗಿ ಚಡಪಡಿಸುವ, ತ್ಯಾಗ ಮಾಡುವ, ಕಷ್ಟ ಪಡುವ ಮಾತೃಹೃದಯದ ಗುರುವನ್ನೂ ನಮ್ಮ ಮುಂದಿಟ್ಟಿದ್ದಾರೆ. ಹಾಗೆ ವೃಥಾ ಅಪವಾದ ಎದುರಿಸುವ ರಾಜೀವನಂತವರ ಪರಿಚಯವನ್ನೂ ಮಾಡುತ್ತಾ , ಸಂಕುಚಿತ ಮನಸ್ಸುಗಳು ಪುರುಷರನ್ನೂ ಆಡಿಕೊಳ್ಳದೇ ಬಿಡದು ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಹಾಗೆಂದು ಈ ಪುಸ್ತಕ ಬರೀ ತೊಂದರೆಗಳ ವಿರುದ್ಧ ಮಾತ್ರವೇ ಮಾತನಾಡುತ್ತಿರುವ ಕ್ರಾಂತಿಕಾರಿಯಂತೆ ಅನಿಸುವುದಿಲ್ಲ. ಇಲ್ಲಿರುವ ಅಜ್ಜಿ ಮೊಮ್ಮಕ್ಕಳ ಮಾತುಕತೆ, ನಿಷ್ಕಲ್ಮಶ ಪ್ರೀತಿ, ಸಂಬಂಧಗಳ ನಡುವೆ ಇರಲೇಬೇಕೆನಿಸುವ ಹುಸಿಮುನಿಸು, ಗುರು-ಶಿಷ್ಯರ ಆತ್ಮೀಯ ಬಾಂಧವ್ಯ, ಅಕ್ಕ-ತಂಗಿಯರ ನಂಟು, ಹಳೆಯ ಸ್ನೇಹವನ್ನು ವರ್ಷಗಟ್ಟಲೆ ನೆನಪಿಟ್ಟುಕೊಂಡು ಸಂಭ್ರಮಿಸುವುದು.. ಇದೆಲ್ಲಾ ನಮ್ಮಲ್ಲಿರುವ ಸವಿ ನೆನಪುಗಳನ್ನು , ನಮಗಾಗಿರುವ ಸಿಹಿ ಅನುಭವಗಳನ್ನು ಕೆರಳಿಸಿ ಆಗಾಗ ಮುಖದಲ್ಲಿ ನಗು ಮೂಡಿಸುತ್ತಿರುತ್ತವೆ. ಇಲ್ಲಿ ಕೆಲವಷ್ಟು ಕಥೆಗಳನ್ನು ಚಂದದ ಪದ್ಯದ ಸಾಲಿನಿಂದ ಪ್ರಾರಂಭಿಸಿದ್ದಾರೆ. ಹಾಗೆ ಕಥೆ ಸಾಗುತ್ತಾ ಸಾಗುತ್ತಾ ಎಲ್ಲಾ ಎಳೆಗಳೂ ಪದ್ಯದ ಸಾಲುಗಳಿಗೇ ಬಂದು ಸೇರಿದಂತೆ ಅನಿಸುತ್ತದೆ. ಒಂದೇ ಪುಸ್ತಕ ಓದುತ್ತಿರುವಾಗ ನಮ್ಮಲ್ಲಿ ಹೀಗೆ ಎಲ್ಲಾ ರೀತಿಯ ಭಾವನೆಗಳು ಹುಟ್ಟಿ ಜೊತೆಗೆ ಒಂದೊಳ್ಳೆ ಚಿಂತನೆಗೂ ನಾವು ಇಳಿಯುವಂತೆ ಅನಿಸುವುದು ವಿಶಿಷ್ಟ ಅನುಭವ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.