Submission 1666

ಪುಸ್ತಕದ ಶೀರ್ಷಿಕೆ: ಬೆಟ್ಟದ ಜೀವ

ಪುಸ್ತಕದ ಲೇಖಕರು: ಕೋಟ ಶಿವರಾಮ ಕಾರಂತ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಚಿರಂಜೀತ್ ಯು ಎಸ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ವ್ಯಕ್ತಿಯನ್ನು ಪ್ರತಿನಿಧಿಸುವುದು ಆತ್ಮವೋ?? ಆಯ್ಕೆಗಳೋ?? ಸ್ವಭಾವವೋ?? ಅನುಭವವೋ?? ಆದರೆ ಪ್ರತಿ ಜೀವಿಯನ್ನು ಪ್ರತಿನಿಧಿಸಲು ಆಯಾ ಸನ್ನಿವೇಶಕ್ಕೆ ತಕ್ಕಂತೆ ಇವುಗಳಲ್ಯವುಧೋ ಒಂದು ಒಡಲಾಳದಿಂದ ಪುಟಿದೆದ್ದು ಬಿಡುತ್ತದೆ. ಬದುಕಿರುವ ವರೆಗೂ ನಮ್ಮನೆ ಭಾವಿ ನೀರು, ನನ್ ತೋಟ, ನನ್ ಗದ್ದೆ ಎಂದು ಬಡಿದಾಡುವವನಿಗೆ ಬಾವಿಯಾಳದಲ್ಲಿರುವ ನೀರ ಸೆಲೆ ಸುತ್ತಲಿನ ಎಲ್ಲಾ ಭಾವಿಗಳಿಗೂ ಒಂದೇ ಎಂಬ ಪರಿವಿಗೇ ಬರುವುದಿಲ್ಲ. ಅದೆಲ್ಲ ಅವರವರ ಭಾವನೆ ಚಿಂತನೆಗಳ ಪರಿಮಿತಿಯ ಹೊರಗಿನವುಗಳಾಗಿ. ಮನುಷ್ಯ ಮಾನಸಿಕ ವಿಕಲಚೇತನನಾಗುತ್ತಾನೆ. ಜೀವವೇ ಇಲ್ಲದ ಗುಡಿ,ಬಂಡೆ ಇತ್ಯಾದಿಗಳನ್ನು ತನ್ನದೂ ನನ್ನದೆಂದು ಆದಿಪತ್ಯ ಸಾದಿಸುವವನು ತನ್ನವರನ್ನೇ ತುಚ್ಛವಾಗಿಯೂ ಜಡವಾಗಿಯೂ ಕಂಡು ಒಂದು ದಿನ ನೆಲ ಸೇರಿ ಬಿಡುತ್ತಾನೆ. ಇಂತದೇ ಒಂದು ಬದುಕಿನ ವಿಲಕ್ಷಣ ದಿಟ ಸತ್ಯಗಳ ಸುಳಿಯಲ್ಲಿ ಸುತ್ತುವ ಕತೆಯೇ " ಬೆಟ್ಟದ ಜೀವ ". ಗೋಪಾಲಯ್ಯ ಶಂಕರಿಯರ ನಡುವಿನ ನಲ್ಮೆ – ಬಾಳ್ಮೆಗಳ ನಡುವೆ ಸುತ್ತಿ , ತೋಟ–ಗದ್ದೆ ಹಸಿರು ಪೈರುಗಳನ್ನೆಲ್ಲ ಸುತ್ತಿ, ಪ್ರಕೃತಿ ಮತ್ತು ಮನುಷ್ಯನ ನಡುವೆ ಹಿತಶತೃ ಒಡನಾಟಗಳನ್ನೆಲ್ಲ ಗಿರಕಿ ಹೊಡೆಯುವ ಲೇಖಕ ಮನಸು, ಓದುಗನ ಮನದಲ್ಲಿ ಮಲೆನಾಡ ಮಲೆಗಳ ಅಚ್ಚಳಿಯದ ಚಿತ್ರಣವೊಂದನ್ನು ಸೃಜಿಸುತ್ತದೆ. ಲೇಖಕ ಮನಸ್ಸು ದಣಿದು ರಾತ್ರಿಗತ್ತಲ ಜೊಂಪು ತೀರಲು ಗೋಪಾಲಯ್ಯರ ಮನೆಗೆ ಬಂದಾಗ "ಇದು ನಮ್ಮ ಮಣಿಯದ್ಧೆ ಪ್ರಾಯ, ರೂಪ" ಎಂದು ಮಗನ ತಂದೆ ತಾಯಿಗಳ ನಡುವಿನ ದೂರದ ಮಧ್ಯೆಯೂ ಆಂತರ್ಯದ ಹತ್ತಿರತನವನ್ನು, ಅನೇಕರ ಪ್ರತಿ ಹೋಲಿಕೆಯಾಲ್ಲಿಯೂ ನಮ್ಮವರನ್ನೇ ಕಾಣುವ ಮನುಜ ಸಹಜ ಬುದ್ಧಿಯನ್ನು ಚಿತ್ರಿಸುತ್ತ, ಕಳಂಜಿಮಲೆಯ ಇಲರೊಳು ಬೆರೆವ ಲೇಖಕ ಮನಸು ಮಲೆನಾಡ ಪಚ್ಚೆ ಚಿತ್ತಾರವನ್ನು ಓದುಗರ ಮನಸಿನಲ್ಲಿ ಚಿತ್ರಿಸಿ ಬಿಡುತ್ತಾರೆ. ಮಾಣಿ ಇದ್ದು ಹೋದ ಜಾಗದಲ್ಲೆಲ್ಲ ಉಸಿರಾಡಿ ಕೊನೆಗೆ ಊರು ಬಿಟ್ಟು ಪಂಜಕ್ಕೆ ಬೀಳ್ಕೊಡುವ ಹೊತ್ತಿಗೆ ಲೇಖಕ ಮನ ಮಾಣಿಯಾಗಿರುತ್ತದೆ. ಎರಡನೆಯ ಬಾರಿಗೆ ಪುತ್ರವಿಯೋಗಕ್ಕೆ ಸಜ್ಜಾಗುವ ಸಂದರ್ಭ ಗೋಪಾಲಯ್ಯ ದಂಪತಿಗಳಿಗೆ. ಹೀಗೆ ಅಭೂತವಾಗಿ ನಾಡು,ಕಾಡು,ನೆಲ,ಜಲಗಳೊಳಗಿರುವ ಬ್ರಾತೃತ್ವ ಅವನ್ನೆಲ್ಲ ಸೇವಿಸುವ ಮನುಷ್ಯನಿಗೂ ಅತೀವವಾಗಿದ್ದರೂ ಯಾವುದೋ ಕಾಣದ ಕುದುರೆಯೊಡಗಿನ ಕೃತಕ ಆಸೆಗಳ ಬೆನ್ನೇರಿ, ಲೋಕ ಸುತ್ತುವ ನಮಗೆ ಮನೆಯಲ್ಲಿಯೇ ಇದ್ದ ಕೊಳಗಟ್ಟಲೇ ಸಂತೋಷ ನಿರ್ಲಕ್ಷವಾಗುತ್ತದೆ. ಹೀಗೆ ಮಾನವ ಸಂಬಂಧಗಳ ವಿವಿಧ ಮಜಲುಗಳನ್ನು ಅರಹುವ ಬೆಟ್ಟದ ಜೀವ, ನೂರಾರು ವರ್ಷ ಕಳೆದರು ನಿರಂತರವಾಗಿರುವ ಅನಂತ ಕೃತಿ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಗೋಪಾಲಯ್ಯ ದಂಪತಿಗಳು ಲೇಖಕರನ್ನು ಕಂಡು ಅವರನ್ನು ತಮ್ಮ ಮಗನಿಗೆ ಹೋಲಿಸಿಕೊಂಡಾಗ ಮಾನವನ ಸುಪ್ತ ಮನಸ್ಸಿನ ಒಂದು ಕಡು ಭಾವನೆ ವ್ಯಕ್ತವಾಗುತ್ತದೆ. ನಾವು ಎಲ್ಲರಲ್ಲಿಯೂ ನಮಗೆ ಪ್ರಿಯವಾದದ್ದನು,ನಮಗೆ ಹಿತವಾದದ್ದನ್ನೇ ಹುಡುಕ ಹೊರಡುತ್ತೇವೆ. ಕಳೆದು ಹೋದ ಭೂತದ ಅಭಿವ್ಯಕ್ತಿಯನ್ನು ಈಗಷ್ಟೇ ಹುಟ್ಟಿದ ವರ್ತಮಾನದಲ್ಲಿ ಹುಡುಕುವ ನಮ್ಮ ಚಾಡಿ ಸಾಮಾನ್ಯ ಸನ್ನಿವೇಶಗಳಲ್ಲಿ ಬಹು ಸಹಜವಾದರು. ಮೂಲದಲ್ಲಿ ನಾವು ನಮ್ಮ ಪ್ರಿಯತೆಗಾಗಿ ಮತ್ತೊಬ್ಬರಸಾಜತೆಯನ್ನು ಕೊಲ್ಲುವುದು ಸಮಂಜಸವಲ್ಲವೆನಿಸುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಕೃತಿಯನ್ನು ನಾನು ಇಂತವರಿಗೆ ಎಂದು ಸೀಮಿತಗೊಳಿಸಲಿಚ್ಚಿಸುವುದಿಲ್ಲ, ಈ ಪುಸ್ತಕ ಜಾಗತಿಕ. ಎಲ್ಲರಿಗೂ ಓದುತ್ತಾ ಹೋದಂತೆ ಆತ್ಮೀಯವಾಗುತ್ತಾ ಕೊನೆಗೊಮ್ಮೆ ತನ್ನ ಛಾಯೆಯನ್ನು ಪ್ರತಿಯೊಬ್ಬರಲ್ಲಿಯೂ ಉಳಿಸಿ ಹೋಗುತ್ತದೆ. ಆದರಿಂದ "ಬೆಟ್ಟದ ಜೀವ" ಓದುವ ಮೊದಲು ಹಾಗೂ ನಂತರ ವ್ಯಕ್ತಿ ಅದೇ ವ್ಯಕ್ತಿಯಾಗಿ ಉಳಿಯುತ್ತಾನೆ ಎಂದು ನಾನು ನಂಬುವುದಿಲ್ಲ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

19
Votes
174
Views
7 Months
Since posted

Voting Closed!

Scroll to Top