Submission 1660

ಪುಸ್ತಕದ ಶೀರ್ಷಿಕೆ: ಚಂದವಳ್ಳಿಯ ತೋಟ

ಪುಸ್ತಕದ ಲೇಖಕರು: ತ. ರಾ. ಸು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಚೈತ್ರ ರಮೇಶ್ ಖೇತಗೌಡರ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಚಂದವಳ್ಳಿಯ ಶಾಮಣ್ಣನು ಲೇಖಕರಾದ ತ. ರಾ. ಸು. ಅವರನ್ನು ರಾಮಿ ಎಂದು ಕರೆಯುತ್ತಿದ್ದರು.ಪ್ರತಿಸಲ ನವರಾತ್ರಿಗೆಂದು ಶಾಮಣ್ಣ ರಾಮಿಯ ಮನೆಯಲ್ಲಿ ತಂಗುತ್ತಿದ್ದನು. ರಾಮಿಯನ್ನು ಚಂದವಳ್ಳಿಯ ಸ್ವರ್ಗವನ್ನು ವರ್ಣಿಸಿ ಅಲ್ಲಿಗೆ ಕರೆಯುತ್ತಿದ್ದನು. ಆದರೆ ರಾಮಿ ಏನಾದರೊಂದು ನೆಪಮಾಡಿ ತಪ್ಪಿಸಿಕೊಳ್ಳುತ್ತಿದ್ದನು. ಆದರೆ ಈ ಸಲ ಚಂದವಳ್ಳಿಯ ನೋಡಲು ಹೊರಟನು. ಅಲ್ಲಿ ಶಿವನಂಜೇಗೌಡ ಆ ಊರಿನ ಗೌಡ. ಅವನೆಂದರೆ ಹಳ್ಳಿಯ ಜನರೆಲ್ಲಾ ನಡುಗುತ್ತಿದ್ದರು. ಆದರೆ ಅವರಿಗೆ ಬೇಕು ಬೇಡಗಳನ್ನೆಲ್ಲ ತನ್ನ ಸ್ವಂತ ಮಕ್ಕಳಂತೆ ಯಾರಿಗೂ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದನು. ಸಾಕಷ್ಟು ಆಸ್ತಿ ಪಾಸ್ತಿ, ಆಳುಕಾಳುಗಳಿಂದ ಮನೆತನ ಸಂಪದ್ಭರಿತವಾಗಿದ್ದು ಆರಂಕಣಗಳಿಂದ ಕೂಡಿತ್ತು. ಆದರೆ ಕರಿಯಪ್ಪ, ಸುಬ್ಬಾಭಟ್ಟ, ತಿಪ್ಪಾರೆಡ್ಡಿ ಯವರ ಒಳಸಂಚು, ದ್ವೇಷಾಸೂಯೆಗಳಿಂದ ಇಡೀ ಮನೆತನವೇ ನುಚ್ಚುನೂರಾಗಿ ಶಿವನಂಜೇಗೌಡ ಹುಚ್ಚನಂತಾದನು. ಶಿವನಂಜೇಗೌಡನ ಆಪ್ತಮಿತ್ರ ನರಹರಪ್ಪ. ಅಂದರೆ ಶಾಮಣ್ಣನ ತಂದೆ ನರಹರಪ್ಪ. ಕರಿಯಪ್ಪ ಆ ಊರಿನ ಪಂಚಾಯತಿಯಲ್ಲಿ ಶಿವನಂಜೇಗೌಡ ಅಪಮಾನ ಮಾಡಿದನೆಂದು ಹಾಗೂ ಊರಿಂದ ಹೊರಹಾಕಿದನೆಂದು ಅವನ ಮೇಲೆ ಸೇಡುತೀರಿಸಿಕೊಳ್ಳಲು ಪಕ್ಕದೂರಿನ ತಿಪ್ಪಾರೆಡ್ಡಿಯ ಆಶ್ರಯ ಪಡೆದು ಕೋರ್ಟ್ ಕೇಸು ಅಂತ ಗೌಡ ಹಾಗೂ ಊರಿನ ಜನರನ್ನು ಅಲೆಸಿ ತನ್ನ ಆಸ್ತಿಯನ್ನು ಪಡೆದುಕೊಂಡು ಮತ್ತೆ ಹಳ್ಳಿಗೆ ಕಾಲಿಟ್ಟ. ಊರಿಗೆ ಒಳ್ಳೆಯ ಜೋಯಿಸರಿರಬೇಕೆಂದು ಸುಬ್ಬಾಭಟ್ಟ ಹಾಗೂ ಅವನ ಕುಟುಂಬವನ್ನು ಚಂದವಳ್ಳಿಗೆ ತಂದು ಗದ್ದೆ, ದನಕರ ಎಲ್ಲ ಅನುಕೂಲ ಮಾಡಿದ್ದನು ಗೌಡ. ಆದರೂ ಅವರ ದಾಹ ಅಷ್ಟಿಷ್ಟಲ್ಲ. ಎಷ್ಟು ಕೊಟ್ಟರೂ ಸಾಲದು ಹೆಂಡತಿ ಜಲಜಾಕ್ಷಮ್ಮನಿಗೆ. ನರಹರಪ್ಪನ ಹೆಂಡತಿ ಬೈದಿದ್ದರಿಂದ ಅವರೂ ಕೂಡ ಕತ್ತಿಮಸೆಯುತ್ತಿದ್ದರು. ಗೌಡನ ಹೆಂಡತಿ ಹಾಗೂ ನರಹರಪ್ಪನ ಹೆಂಡತಿಗೆ ಜಗಳ ತಂದಿಟ್ಟಿದ್ದರಿಂದ ಶಿವನಂಜೇಗೌಡ ಮನೆಗೆ ಹೋಗಿ ತಾಕೀತು ಮಾಡಿದ್ದನು. ಆಗಿನಿಂದ ಮೇಲೆ ಒಳ್ಳೆಯವರಂತೆ ನಟಿಸಿ ದ್ವೇಷದ ಕಿಡಿಕಾರುತ್ತಿದ್ದರು. ತಿಪ್ಪಾರೆಡ್ಡಿ ಪಕ್ಕದೂರಿನವನಾಗಿದ್ದು ಸುತ್ತಲೆಲ್ಲ ಹರಡಿದ್ದ ಗೌಡನ ದೊಡ್ಡಸ್ತಿಕೆ ಕಂಡು ಉರಿಯುತ್ತಿದ್ದನು.ಯಾವಾಗಲೂ ಅವನನ್ನು ಕೆಡವಿ ತಾನು ಹೆಸರುಮಾಡಬೇಕೆಂದು ಕಾಯುತ್ತಿದ್ದನು. ಶಿವನಂಜೇಗೌಡ ಊರಿನ ಜನರಿಗೆ ಒಳ್ಳೆಯದಾಗಲೆಂದು ತನ್ನ ತೋಟವನ್ನು ಊರಿನವರಿಗೆ ಬಿಟ್ಟುಕೊಡಲು ನಿರ್ಧರಿಸಿದನು. ಆದರೆ ಜೋಯಿಸರು ಅಲ್ಲಿ ಬೆಳೆ ಬರುವುದಿಲ್ಲ ಎಂದಾಗ ನರಹರಪ್ಪನಿಗೆ ತನ್ನ ತೋಟ ಕೊಟ್ಟು ಅವನ ತೋಟವನ್ನು ಊರಿನವರಿಗೆ ಬಿಟ್ಟು ತೆಂಗಿನ ಸಸಿ, ಹಣ್ಣು ಹಂಪಲಗಳ ಸಸಿಗಳನ್ನು ನೆಡಿಸಿ ಅದು ಚಂದವಳ್ಳಿಯ ಸ್ವರ್ಗವಾಗಿ ಹೊರಹೊಮ್ಮಿತು. ಗೌಡನಿಗೆ ಹನುಮಪ್ಪ, ರಾಮಯ್ಯ ಎಂಬಿಬ್ಬರು ಮಕ್ಕಳು.ಪುಟ್ಟತಾಯಮ್ಮ ಇವರ ತಾಯಿ.ಹನುಮಪ್ಪ ಗೌಡನ ಕೈಯಲ್ಲಿ ಹೊಲದ ಕೆಲಸದಲ್ಲಿ ನುರಿತಿದ್ದನು ಆದರೆ ರಾಮಯ್ಯ ಚಿಕ್ಕವನೆಂದು ಅವನಿಗೆ ಗದ್ದೆ ಕೆಲಸ ಕಲಿಸಲಿಲ್ಲ. ರಾಮಯ್ಯ ಕರಿಯಪ್ಪ ಹಾಗೂ ಸುಬ್ಬಾಭಟ್ಟನ ಸ್ನೇಹ ಬೆಳೆಸಿ ಇಸ್ಪೀಟ್ ಆಡಲು ಕಲಿತನು. ಅಪ್ಪನ ಪಿತ್ತ ನೆತ್ತಿಗೇರಿ ಅವನಿಗೆ ಬೈದು ಮದುವೆ ಮಾಡಿದರು. ಹನುಮಪ್ಪನ ಹೆಂಡತಿ ಚೆನ್ನವ್ವ ಅವನನ್ನು ಮಗನ ಹಾಗೆ ನೋಡಿಕೊಳ್ಳುತ್ತಿದ್ದಳು. ಗುಣದಲ್ಲಿ ಅತ್ತೆ ಸೊಸೆ ಊರಿಗೂರೇ ಹೊಗಳುವಂತಹ ಗುಣವುಳ್ಳವರಾಗಿದ್ದರು.ರಾಮಯ್ಯನ ಹೆಂಡತಿ ಸುಂದರಿಯಾಗಿದ್ದು ಆದರೆ ಅಷ್ಟೇ ಸೊಕ್ಕುಳ್ಳ ದುರಹಂಕಾರಿಯಾಗಿದ್ದಳು. ಹಾಗೆಯೇ ದಿನಕ್ಕೊಂದು ಜಗಳ ಮಾಡಿ ಮನೆ ಒಡೆದು ಬೇರೆಯಾದಳು. ಗೌಡನ ಜಂಘಾಬಲವೇ ಉಡುಗಿಹೋಯಿತು.ಇದೇ ಕೊರಗಿನಲ್ಲಿ ಪುಟ್ಟತಾಯವ್ವ ಜೀವ ತ್ಯಜಿಸಿದಳು.ಎಲ್ಲ ಆಸ್ತಿಯನ್ನು ಹಾಗೂ ಸ್ವರ್ಗದಂತಹ ತೋಟವನ್ನು ಊರವರಿಗೆ ಬಿಡದೆ ತಾನೇ ಪಡೆದುಕೊಂಡನು. ದಿನಕಳೆದಂತೆ ರಾಮಯ್ಯನ ಕುಡಿತ, ಇಸ್ಪೀಟ್ ಪರಿವಾರಕ್ಕೆ ಹಣವೆಲ್ಲ ಖರ್ಚಾಗುತ್ತ ಬಂದಿತು. ಲಕ್ಷ್ಮೀ ತನಗೆ ಮಕ್ಕಳಿಲ್ಲವೆಂದು ಹನುಮಪ್ಪನ ಮಗನನ್ನು ವಿಷ ಹಾಕಿಸಿ ಕೊಂದಳು. ಇದನ್ನು ಕೇಳಿದ ಹನುಮಪ್ಪ ಅಡ್ಡ ಬಂದ ರಾಮಯ್ಯನ ತಲೆ ಸೀಳಿದನು. ಇದನ್ನು ಕೇಳಿದ ಗೌಡನು ಹುಚ್ಚನಾದನು. ರಾಮಯ್ಯನ ಆಸ್ತಿ ಹಾಗೂ ಹೆಂಡತಿ ಕರಿಯಪ್ಪನ ಆಸ್ತಿಯಾದಳು.ಹನುಮಪ್ಪ ಜೈಲು ಸೇರಿ ಕೊರಗಿ ಕೊರಗಿ ಸತ್ತನು. ಸುಬ್ಬಾಭಟ್ಟನು ಊರುಬಿಟ್ಟು ನರಳಿ ಸತ್ತನು. ಆಸ್ತಿಯೆಲ್ಲ ಕರಿಯಪ್ಪನು ತೆಗೆದುಕೊಂಡು ತಾನೇ ದರ್ಪದಿಂದ ಮೆರೆಯುತ್ತಿದ್ದಾನೆ. ಚಂದವಳ್ಳಿ ಸ್ವರ್ಗದಿಂದ ಸ್ಮಶಾನವಾಗಿ, ಹಾಳುಕೊಂಪೆಯಾಗಿ ನಿಂತಿದೆ. ಶ್ಯಾಮಣ್ಣ ಗೌಡನನ್ನು ತನ್ನಲ್ಲಿಯೇ ಇರಿಸಿಕೊಂಡು ಉಪಚರಿಸುತ್ತಾನೆ. ಇದನ್ನೆಲ್ಲ ಕೇಳಿದ ರಾಮಿಯ ಮನಸ್ಸು ಕರಾಳವಾಗಿ ತನ್ನೂರಿನತ್ತ ನಡೆಯುತ್ತಾನೆ. ಇಲ್ಲಿ ಲೇಖಕರು ಗೌಡನ ಕಥೆಯಲ್ಲಿ ಒಂದೊಂದು ವಿಷಯವನ್ನು ಕುತೂಹಲ ಹುಟ್ಟಿಸುವಂತೆ ಹಾಗೂ ತಾನೇ ಅಲ್ಲಿದ್ದು ಅದನ್ನು ಅನುಭವಿಸಿದಂತೆ ಸರಳವಾಗಿ ವಿವರಿಸಿದ್ದಾರೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಶಿವನಂಜೇಗೌಡನು ಊರಿನ ಜನರ ಏಳಿಗೆಗಾಗಿ ಹಾಗೂ ಅವರ ಒಳಿತಿಗಾಗಿ ತನ್ನ ಆಸ್ತಿ ಪಾಸ್ತಿ ತ್ಯಜಿಸಿದರೂ ಕೂಡ ಕರಿಯಪ್ಪನಂಥ ದುಷ್ಟರ ಕೈಗೆ ಸಿಕ್ಕು ಇಡೀ ಊರಿಗೆ ಊರೇ ಹಾಳು ಕೊಂಪೆಯಾಯಿತು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

38
Votes
232
Views
8 Months
Since posted

Voting Closed!

Scroll to Top