ಪುಸ್ತಕದ ಶೀರ್ಷಿಕೆ: ಕದರಡಕೆ
ಪುಸ್ತಕದ ಲೇಖಕರು: ಕುವೆಂಪು
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ರಕ್ಷಿತ ಗೌಡ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನನ್ನ ದೈವಮಾನವ ಕುವೆಂಪುರವರ ಕವನ ಸಂಕಲನ, ಕದರಡಕೆ ಇದು ಕೇವಲ ಕವಿತೆಗಳ ಸಂಗ್ರಹವಲ್ಲ- ಓದುಗರ ಮನಸಿನಲ್ಲಿ ನಿಧಾನವಾಗಿ ಬೆಳಗುವ ದೀಪದಂತ ಭಾವ ನೀಡುತ್ತದೆ. ಇದರಲ್ಲಿನ ಪ್ರತಿಯೊಂದು ಕವಿತೆಯೂ ಕಷ್ಟ, ಕಲಹ, ಗದ್ದಲಗಳಿಂದ ಸುತ್ತುವರೆದ ಜೀವನದಲ್ಲಿ ಹೃದಯವನ್ನು ಸ್ಪರ್ಶಸಿತು. ಇದರಲ್ಲಿನ ಕವಿತೆಗಳಲ್ಲಿ ಪ್ರಕೃತಿ ಕೇವಲ ಕಲ್ಪನೆಯಲ್ಲಿ ಅಲ್ಲ,ಅದು ಕವಿಗೆ ನಿಜ ಸಂಗಾತಿ, ಸ್ನೇಹಿತ, ಗುರು ಎಲ್ಲವೂ ಆಗಿದೆ. ಬೆಳಗಿನ ನಿಶ್ಶಬ್ದತೆ, ಕಾಡಿನ ಗಾಳಿ, ಬೆಟ್ಟದ ಮೇಲಿನ ಮಂಜು—ಇವೆಲ್ಲ ಕುವೆಂಪುರವರ ಸಾಲುಗಳಲ್ಲಿ ಅವರ ಪ್ರಕೃತಿಪ್ರೇಮವನ್ನು ಪ್ರತಿನಿಧಿಸುತ್ತವೆ. ಕೆಲವೊಮ್ಮೆ ಕವಿತೆ ಓದುವಾಗ ನಾನು ಕೂಡ ಕಾಡಿನ ಮಧ್ಯದಲ್ಲಿ ನಿಂತಿರುವಂತೆ, ಮರಗಳ ಜೊತೆ ಮಾತಾನಾಡುತ್ತಿರುವಂತೆ ಭಾಸವಾಗುತ್ತದೆ. ಪ್ರಕೃತಿಯೊಂದಿಗಿನ ಈ ಹೊಂದಾಣಿಕೆ ನನ್ನನ್ನು ಒಂದು ಶಾಂತವಾದ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ""ಮಾನವೀಯತೆ"" ಈ ಕದರಡಕೆಯ ಇನ್ನೊಂದು ದೊಡ್ಡ ಬಲವಾಗಿದೆ. ಸಾಮಾನ್ಯ ಜನರ ಜೀವನವನ್ನು ಕುವೆಂಪು ಅಪಾರ ಗೌರವದಿಂದ ಬರೆದು ಅವರ ನೋವಿನಲ್ಲಿ ನಾಜುಕು, ಮತ್ತು ಅವರ ಹೋರಾಟದಲ್ಲಿ ಸೌಂದರ್ಯ ಕಂಡುಕೊಳ್ಳುವರು. ಓದುಗಳಾಗಿ ನಾನು ಈ ಕವಿತೆಗಳನ್ನು ಓದಿದಾಗ, ಜೀವನದ ಮಹತ್ವವು ದೊಡ್ಡ ಘಟನೆಗಳಲ್ಲಿ ಅಲ್ಲ. ಚಿಕ್ಕ ಅನುಭವಗಳಲ್ಲಿ, ಮೌನ ಕ್ಷಣಗಳಲ್ಲಿ, ಹೃದಯದ ಮಿಂಚಿನಲ್ಲಿ ಅಡಗಿದೆ ಎಂಬುದನ್ನು ಮತ್ತೆ ಅರಿತುಕೊಂಡೆ. ಕುವೆಂಪುರವರ ಭಾಷೆ ಇಲ್ಲಿ ಅದ್ಭುತವಾಗಿ ಸರಳವಾಗಿದೆ. ಯಾವುದೇ ಅತಿರಂಜನೆ ಇಲ್ಲ, ಗಂಭೀರ ಶಬ್ದಗಳ ಪ್ರದರ್ಶನ ಇಲ್ಲ. ಸರಳ ಪದಗಳಲ್ಲಿ ಗಾಢ ಅರ್ಥವನ್ನು ಕಟ್ಟುವ ಕಲೆ ಅವರದು. ಇದರಿಂದ ಕದರಡಕೆ ಓದುವ ಆಸಕ್ತಿ ಹೆಚ್ಚಿಸಿ, ಮನಸಿಗೆ ಹತ್ತಿರವಾಯಿತು. ಕವಿತೆ ಹಾಗೂ ಓದುಗನ ನಡುವೆ ಯಾವುದೇ ಅಂತರ ಉಳಿಯುವುದಿಲ್ಲ, ಕವಿಯ ಮಾತುಗಳು ನೇರವಾಗಿ ಮನಸ್ಸಿಗೆ ಬಂದು ಸೇರಿದವು. ಈ ಪುಸ್ತಕದಲ್ಲಿ ‘ವಿಶ್ವಮಾನವ’ ತತ್ವದ ಬೀಜಗಳು, ಮನುಷ್ಯನ ಮೌಲ್ಯಗಳನ್ನು ಮರುಪರಿಶೀಲಿಸುವ ಆಲೋಚನೆ, ಪ್ರಕೃತಿ-ಮನುಷ್ಯರ ಏಕತೆಯ ಭಾವಗಳು ಹಲವಾರು ಕವಿತೆಗಳ ಹಿಂದೆ ಮೌನವಾಗಿ ನಿಂತಿವೆ. ಓದುಗನಾಗಿ, ನಾನು ಈ ಸಂಕಲನವನ್ನು ಓದಿದ ನಂತರ, ಜೀವನವನ್ನು ನೋಡುವ ದೃಷ್ಟಿಯಲ್ಲಿ ಸ್ವಲ್ಪ ನಾಜೂಕು, ಸ್ವಲ್ಪ ಮಮತೆ, ಸ್ವಲ್ಪ ಆಂತರಿಕ ಶಾಂತಿ ಹೆಚ್ಚಾದಂತೆ ಅನುಭವವಾಗಿದೆ. ಒಟ್ಟಿನಲ್ಲಿ ಕದರಡಕೆ ನನಗೆ ಕೇವಲ ಪುಸ್ತಕವಾಗಿರಲಿಲ್ಲ; ಅದು ಒಂದು ಅನುಭವ. ವ್ಯಸ್ತ ಜೀವನದ ಮಧ್ಯೆ ಕ್ಷಣಕಾಲ ನಿಲ್ಲಿಸಿ ಮೌನವನ್ನು ಕೇಳುವ ಕಲೆಯನ್ನು ಇದು ನನಗೆ ನೆನಪಿಸಿತು. ಕುವೆಂಪು ಹೇಳದೇ ಹೇಳುವ ಕವಿ ಅವರ ಸಾಲುಗಳು ಹೃದಯಕ್ಕೆ ತಾಕಿದ ಮೇಲೆ, ಅವು ಅಲ್ಲಿ ದೀರ್ಘಕಾಲ ಮೃದುವಾಗಿ ಹೊಳೆಯುತ್ತವೆ. ಕದರಡಕೆ ಅಂತಹ ಮಿನುಗುಗಳನ್ನು ತುಂಬಿಕೊಂಡಿರುವ ಸಂಕಲನ ಎಂಬುದು ನನ್ನ ಮನದ ಮಾತು
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಚಂದ್ರೋದಯ ಎಂಬ ಕವಿತೆ ಚಂದ್ರೋದಯವಾಯ್ತು🤍 ಪೃಥ್ವಿಯ ಮುಖ ಸ್ವರ್ಗದ ಮುಖವಾಯ್ತು; ಜ್ಯೋತಿಸುಂದರ ಸುಖವಾಯ್ತು! ಸಾಮಾನ್ಯತೆ ಸುರವೈಭವವಾಯ್ತು; ರಜನಿಯ ಜ್ಯೋತ್ಸಾ ದಿವವಾಯ್ತು ; ರಸನಿಧಿ ಜಗದೀಶನ ದಯವಾಯ್ತು, ಸಮಸ್ತ ಸೃಷ್ಟಿಗೆ ಜಯವಾಯ್ತು; ಚಂದ್ರೋದಯವಾಯ್ತು!
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.