Submission 1804

ಪುಸ್ತಕದ ಶೀರ್ಷಿಕೆ: ಆರದಿರಲಿ ಬೆಳಕು

ಪುಸ್ತಕದ ಲೇಖಕರು: ಮಹಾದೇವ ಬಸರಕೋಡ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: Shobha rangu yelanduru

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಪುಸ್ತಕವನ್ನು ಓದುವ ಅಭ್ಯಾಸ ನನಗಿರಲಿಲ್ಲ. ನಾನು ಓದಿದ ಮೊದಲ ಪುಸ್ತಕ. ನನ್ನ ಗುರುಗಳಿಂದ ಉಡುಗೊರೆಯಾಗಿ ಬಂದ ಮೊದಲ ಪುಸ್ತಕ. ಮುಂದಿನ ಪುಟಗಳಲ್ಲಿ ಕೌತುಕವನ್ನು ಅಡಗಿಸಿಕೊಂಡಿರುವ ಪುಸ್ತಕ. ಜೀವನಾಮೃತ ಚಿಂತನೆಗಳನ್ನು ಒಳಗೊಂಡಿದೆ. ಆರದಿರಲಿ ಬೆಳಕು ಎಲ್ಲರ ಬದುಕಿನಲ್ಲಿಯೂ ನವ ಚೈತನ್ಯವನ್ನು ನೀಡುತ್ತದೆ.ಮುಖಪುಟದಲ್ಲೇ ಆಕರ್ಷಿಸುವ ಪುಸ್ತಕ. ಇನ್ನೂ ಪರಿವಿಡಿಯಂತೂ ಅಬ್ಬಬ್ಬಾ! ಇಡೀ ಬದುಕಿನ ಚಿತ್ರಣವನ್ನೇ ಒಳಗೊಂಡಿದೆ. ಪರಿವಿಡಿಯೇ ಹೀಗಿರುವಾಗ ಇನ್ನು ಮುಂದೆ ಹೇಗಿರಬಹುದು ಎಂಬ ಕುತೂಹಲವನ್ನು ಹೆಚ್ಚಿಸುತ್ತದೆ. ಆರದಿರಲಿ ಬೆಳಕು ಪುಸ್ತಕ ಬದುಕಿನ ಪಥವನ್ನು ಬದಲಿಸುವ ಪುಸ್ತಕ. ಆಲೋಚನೆಯ ಮಿತಿಯನ್ನು ಉತ್ತುಂಗಕ್ಕೆ ಕರೆದೊಯ್ಯುವ ಪುಸ್ತಕ. ಪುಸ್ತಕದಲ್ಲಿರುವ ಉದಾಹರಣೆ ಸಣ್ಣ ಸಣ್ಣ ಕಥೆಗಳು ನಮ್ಮ ಬದುಕಿನಲ್ಲಿ ಬರುವ ಸಂಗತಿಗಳಾಗಿವೆ. ಜೀವನದ ಅನುಕ್ಷಣದ ಸನ್ನಿವೇಶದಲ್ಲಿ ಹೇಗೆ ವರ್ತಿಸಬೇಕೆಂದು ಕಲಿಸುವ ಪುಸ್ತಕ. ಪುಸ್ತಕದಲ್ಲಿರುವ ಒಂದೊಂದು ಸಾಲುಗಳು ಮುತ್ತುಗಳನ್ನು ಪೋಣಿಸಿದಂತೆ ಅತ್ಯದ್ಭುತವಾಗಿವೆ. ನಕರಾತ್ಮಕ ಯೋಚನೆಗಳನ್ನು ದೂರಸರಿಸಿ ಸಕಾರಾತ್ಮಕ ಚಿಂತನೆಗಳು ಸನಿಹಕ್ಕೆ ಬರುವಂತೆ ಮಾಡುತ್ತದೆ. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವ ಪುಸ್ತಕ. ಈ ಪುಸ್ತಕದ ಬಗ್ಗೆ ನನ್ನದೊಂದು ಕವನ ನನ್ನ ಬೇಸರವ ಮರೆಸುವುದು ನನಗೆ ಭಯವಾದಾಗ ಧೈರ್ಯ ನೀಡುವುದು ಒಂಟಿತನ ಕಾಡಿದಾಗ ನಾನಿರುವೆ ಎನ್ನುವುದು ಏ ಪುಸ್ತಕವೇ ಯಾರು ಇರದ ಸಮಯದಲ್ಲಿ ನೀನೇಕೆ ನನ್ನ ಬಳಿ ಇರುವೆ ಯಾರೇ ಕೈಬಿಟ್ಟರು ನೀ ನನ್ನ ಜೊತೆ ಇರುವೆ ನಿನ್ನ ಕಂಡ ನನ್ನ ಕಣ್ಣುಗಳು ತಂಪು ನಿನ್ನ ಸ್ಪರ್ಶಿಸಿದ ನನ್ನ ಕೈಗಳು ಕೆಂಪು ಏಕಾಂತವ ಬಯಸುತ್ತಿರುವೆ ನಾನೀಗ ಮುಖಪುಟದಲ್ಲೇ ಕಣ್ಮನ ಸೆಳೆಯುವೆ ನೀನಾಗ ಏ ಪುಸ್ತಕವೇ ನೀನೇ ಹೇಳು ನಾ ಒಂಟಿಯಾಗಿರಲು ನೀನೇಕೆ ಜೊತೆಗಿರುವೆ ನನ್ನ ಸಹಪಾಠಿಯಾಗಿರುವ ಸ್ನೇಹಿತ ಆತ್ಮಸ್ಥೈರ್ಯ ತುಂಬವ ನಾಡಿ ಬಡಿತ ಸದಾ ನನ್ನೊಂದಿಗೆ ಇರುವೆ ಶಾಶ್ವತ ನನ್ನಯ ನೆಚ್ಚಿನ ಪುಸ್ತಕವಾಗಿರುವೆ ಖಂಡಿತ ಹೀಗೆ ಎಲ್ಲರ ಬದುಕಿನಲ್ಲಿಯೂ ಆರದಿರಲಿ ಬೆಳಕು ಪ್ರಜ್ವಲಿಸುತ್ತಿರಲಿ ಅಂತರಂಗದಲ್ಲಿ. ಈ ಪುಸ್ತಕವು ಬದುಕಿನ ಅತಿ ದೊಡ್ಡ ಪಾಠವನ್ನು ಕಲಿಸುತ್ತದೆ. ಬದುಕನ್ನು ನೋಡುವ ದೃಷ್ಟಿಕೋನವನ್ನು ಬದಲಿಸುತ್ತದೆ. ಸವಾಲುಗಳನ್ನು ಎದುರಿಸುವ ಆಲೋಚನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಮನೆಯಲ್ಲಿ ದೇವರ ಕೋಣೆ ಇರುವಂತೆ ಒಂದು ಗ್ರಂಥಾಲಯವಿದ್ದರೆ ಆ ಮನೆ ಸ್ವರ್ಗದಂತೆ. ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ. ಈ ಪುಸ್ತಕದ ಬಗ್ಗೆ ಹೇಳಲು ಸ್ಥಳಾವಕಾಶ ಸಾಲದು, ಪದಪುಂಜ ಸಾಲದು ಅಷ್ಟು ಸೊಗಸಾದ ಅರ್ಥಪೂರ್ಣವಾದ ಪುಸ್ತಕವಾಗಿದೆ. ಆರದಿರಲಿ ಬೆಳಕು ಪುಸ್ತಕ ಬರೆದ ಮಹದೇವ ಬಸರಕೋಡರವರಿಗೆ ಧನ್ಯವಾದಗಳು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

7
Votes
85
Views
7 Months
Since posted

Voting Closed!

Scroll to Top