Submission 1784

ಪುಸ್ತಕದ ಶೀರ್ಷಿಕೆ: ಅವಳು ಬದುಕ ಕಲಿಸಿದವಳು

ಪುಸ್ತಕದ ಲೇಖಕರು: ಅರ್ಜುನ್ ದೇವಲಾದಕೆರೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಮಮತಾ ಕೃಷ್ಣ ಮೂರ್ತಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಇಂದಿನ ಯುವ ಸಮೂಹ ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಪ್ರೀತಿ-ವಿಫಲತೆ, ನಿರಾಶೆ, ಮಾನಸಿಕ ಒತ್ತಡ, ಒಂಟಿತನ, ಸಮಾಜದ ನಿರ್ಲಕ್ಷ್ಯ-ಇವೆಲ್ಲವೂ ಅತ್ಯಂತ ಗಂಭೀರ ಸಮಸ್ಯೆಗಳು. ಕೇವಲ 'ಪ್ರೀತಿ ಹೋಯಿತು' ಎಂಬ ಕಾರಣಕ್ಕೆ ಜೀವನದ ಅರ್ಥವೇ ನಶಿಸುವ ತಲೆಮಾರನ್ನು ನಾವು ಕಾಣುತ್ತಿದ್ದೇವೆ. ಇದೇ ಸಂದರ್ಭದಲ್ಲಿ “ಅವಳು ಬದುಕ ಕಲಿಸಿದವಳು" ಕಾದಂಬರಿ ಒಂದು ವಿಷಯ ಮಾತ್ರ ಹೇಳುವುದಿಲ್ಲ-ಬದುಕು ಪ್ರೀತಿಗಿಂತ ದೊಡ್ಡದು, ಮಾನವೀಯತೆ ನೋವಿಗಿಂತ ದೊಡ್ಡದು, ಬದುಕು ಮುರಿದ ಜಾಗದಲ್ಲೇ ಪುನಃ ಕಟ್ಟಿಕೊಳ್ಳಬಹುದು ಎಂಬ ತತ್ವವನ್ನು ಬಲವಾಗಿ ಹೊರಹಾಕುತ್ತದೆ. ಕಾದಂಬರಿಯ ಮೂಲವೆಂದರೆ ನೈಜ ಘಟನೆ. ಇದು ಬದುಕಿನ ನಿಜವಾದ ಧ್ವನಿ. ಕೃತಿಯಲ್ಲಿ ಪಾತ್ರಗಳು ಹೆಸರಿಲ್ಲ. 'ಅವನು', 'ಅವಳು' ಮತ್ತು 'ಅವರು'. ಈ ಹೆಸರಿಲ್ಲದ ಕೃತಿಯೇ ಮೊದಲ ದೊಡ್ಡ ವಿಶೇಷತೆ. ಓದುಗನಿಗೆ ಪಾತ್ರಗಳ ಜಾಗದಲ್ಲಿ ತನ್ನ ಮನಸ್ಸನ್ನೇ ಮೆರಯುವ ಅವಕಾಶವನ್ನು ಕೊಡುತ್ತದೆ. ಕಾದಂಬರಿಯ ಕೇಂದ್ರದಲ್ಲಿರುವ ನಾಯಕ ಜೀವನದಲ್ಲಿ ಎರಡು ಬಾರಿ ಪ್ರೀತಿಯಲ್ಲಿ ಮೋಸ ಅನುಭವಿಸುತ್ತಾನೆ. ಅವನ ಭಾವನೆ ಕುಸಿಯುತ್ತದೆ, ಆತ್ಮವಿಶ್ವಾಸ ಕುಗ್ಗುತ್ತದೆ, ಜೀವನಕ್ಕೆ ಬಣ್ಣವಿಲ್ಲದಂತೆ ಕಾಣಿಸುತ್ತದೆ. ಈ ಹಂತದಲ್ಲಿ ಪುಸ್ತಕವು ಸಾಮಾನ್ಯ ಪ್ರೇಮಕಥೆಗಳ ಸಂಪ್ರದಾಯವನ್ನು ಮುರಿಯುತ್ತದೆ. ಇಲ್ಲಿ ನಾಯಕನು ದುರಂತ ಅಂತ್ಯವನ್ನು ಆರಿಸಿಕೊಳ್ಳುವುದಿಲ್ಲ; ಆತ್ಮಹತ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಬದಲಿಗೆ, ಬದುಕಿನ ಹೊಡೆತಗಳಿಂದಲೇ ಬದುಕು ಕಲಿಯಲು ತೀರ್ಮಾನಿಸುತ್ತಾನೆ. ನಾಯಕನ ಮನಸ್ಥಿತಿ ಅತ್ಯಂತ ನೈಜವಾಗಿ ಹಿಡಿದಿಟ್ಟಿದೆ: ಪ್ರೀತಿ ಕಳೆದು ಹೋದ ನೋವು ಮೋಸವಾದ ತೀವ್ರತೆಯ ಕಹಿ ಸ್ನೇಹಿತರ ನಿರ್ಲಕ್ಷ್ಯ ಕುಟುಂಬದ ಅಸಹಾಯಕತೆ ಕೆಲಸ-ಹಣಕಾಸಿನ ಅಭಾವ ಹಸಿವು ಮತ್ತು ದಾರಿದ್ರ ಈ ಅಂಶಗಳನ್ನು ಲೇಖಕರು ಕೇವಲ ಕಥೆಯ ಸನ್ನಿವೇಶಗಳಾಗಿ ನೀಡದೆ, ಮನುಷ್ಯನ ಬದುಕನ್ನು ಒಳಗೆಳೆದು ಒಡೆದು ಹಾಕುವ ಶಕ್ತಿಯಾಗಿ ಬಿಂಬಿಸಿದ್ದಾರೆ. ನಾಯಕನು ತನ್ನೊಳಗಿನ ಕತ್ತಲೆಗೆ ಬಲಿಯಾಗುವ ಬದಲು, ಅದನ್ನೇ ಬೆಳಕಿನ ಮೂಲವನ್ನಾಗಿ ಮಾಡಿಕೊಳ್ಳುವ ಪ್ರಯತ್ನ ಇಡುವುದು ಕಾದಂಬರಿಯ ಮೌಲ್ಯ. ಪಾತ್ರಗಳಿಗೆ ಹೆಸರಿಲ್ಲದಿರುವುದು ಕಾದಂಬರಿಯ ಅತ್ಯುತ್ತಮ ಸಾಹಿತ್ಯತಂತ್ರ. ಪಾತ್ರಗಳು ಜಾತಿ-ಧರ್ಮ-ಸ್ಥಳ-ವರ್ಗಗಳಿಂದ ಮುಕ್ತವಾಗಿವೆ ಮನುಷ್ಯನ ಮೂಲ ಹೃದಯ, ಭಾವನೆ, ನೋವು ಎನ್ನುವ ಅಂಶಗಳೇ ಮುಖ್ಯವಾಗುತ್ತವೆ. ಓದುಗನು 'ನಾನೇ ಈ ಕಥೆಯ ಪಾತ್ರ' ಎಂದಂತೆ ಅನುಭವಿಸುತ್ತಾನೆ. ಇದು ಕೃತಿಯನ್ನು ಕೇವಲ ಒಂದು ವ್ಯಕ್ತಿಯ ಪ್ರೇಮಕಥೆಯಾಗಿರದೆ, ಒಂದು ಪೀಳಿಗೆಯ ಬದುಕಿನ ನಿಜವಾದ ಚಿತ್ರಣ! ಕಾದಂಬರಿಯ ಬಹುಮುಖ್ಯ ಪಾತ್ರ-ನಂದಾ, ಮಂಗಳಮುಖಿ. ಸಾಹಿತ್ಯದಲ್ಲಿ ಮಂಗಳಮುಖಿಗಳನ್ನು ಅಧಪತನದ ಪಾತ್ರಗಳಲ್ಲಿ, ಅಥವಾ ದಯೆಗಾಗಿ ತೋರಿಸುವ ಪಾತ್ರಗಳಲ್ಲಿ ಮಾತ್ರ ಕಾಣುತ್ತೇವೆ. ಆದರೆ ಇಲ್ಲಿ ನಂದಾಳ ಪಾತ್ರ ಸಂಪೂರ್ಣ ವಿಭಿನ್ನ. ಅವಳು ಸಮಾಜದಲ್ಲಿ ತಳ್ಳಲ್ಪಟ್ಟಿದ್ದರೂ-ಬದುಕಿನ ತಳದಲ್ಲಿ ಮಣ್ಣು ಮುಟ್ಟಬೇಕಾದರೂ-ಹೃದಯದಲ್ಲಿ ಮನುಷ್ಯತ್ವ ಉಳಿಸಿಕೊಂಡಿರುವ ವ್ಯಕ್ತಿ. ಬದುಕಿನೊಂದಿಗೆ ಮನುಷ್ಯನ ಹೋರಾಟ ನಾಯಕನ ಮರುಜನ್ಮ ನಾಯಕನು ಪ್ರತಿದಿನದ ಸಣ್ಣ-ಸಣ್ಣ ನೋವಿನೊಳಗಿಂದಲೇ ತನ್ನ ಬದುಕನ್ನು ಪುನಃ ನಿರ್ಮಿಸಿಕೊಳ್ಳುತ್ತಾನೆ.ಮೊದಲು ಬದುಕಲು ಕಾರಣ ಹುಡುಕಬೇಕು ನಂತರ ಬದುಕಲು ಸಾಮರ್ಥ್ಯ ಕಟ್ಟಿಕೊಳ್ಳಬೇಕು ನೋವನ್ನೇ ಗುರುವಾಗಿ ಸ್ವೀಕರಿಸಬೇಕು,ಜೀವನವನ್ನು ಹೊಸ ದೃಷ್ಟಿಯಿಂದ ನೋಡಬೇಕು ಮಾನವೀಯ ಸಂಬಂಧಗಳ ಮೌಲ್ಯ ಅರಿತುಕೊಳ್ಳಬೇಕು ಸಾಹಿತ್ಯದಲ್ಲಿ ನೋವಿನ ನಂತರ "ಜೀವನ ಬದಲಾಗಿದೆ" ಎಂದು ಹೇಳುವುದು ಸುಲಭ.ಆದರೆ ಇಲ್ಲಿ ಅದು ನೈಜವಾಗಿ ಕಂಡುಬರುತ್ತದೆ- ಬಾಳಿನಲ್ಲಿ ನೋವನ್ನೇ ಬಲವನ್ನಾಗಿ ಮಾಡಿಕೊಂಡವನು ಮತ್ತೆ ಬದುಕಿನ ದೇವಾಲಯಕ್ಕೆ ಹಿಂತಿರುಗುವ ದೃಶ್ಯ ಓದುಗರ ಮನಸ್ಸಿಗೆ ಬೇರೂರುತ್ತದೆ. ಸಮಾಜ ಬದಲಾಗಬೇಕಾದರೂ, ಮೊದಲು ಬದಲಾಗಬೇಕಾದದ್ದು ಮನುಷ್ಯನ ಮನಸ್ಸು. ಓದುಗನು ಪುಸ್ತಕ ಮುಚ್ಚಿದ ಬಳಿಕವೂ ಕಥೆ ಮನಸ್ಸಿನಲ್ಲಿ ಜೀವಿಸಬೇಕು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಯುವಜನತೆ ಓದಲೇಬೇಕಾದ ಒಂದು ಸತ್ಯ ಘಟನೆ ಆಧಾರಿತ ಪ್ರೇಮ ಕಥೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
94
Views
7 Months
Since posted

Voting Closed!

Scroll to Top