Submission 1915

ಪುಸ್ತಕದ ಶೀರ್ಷಿಕೆ: BITTI

ಪುಸ್ತಕದ ಲೇಖಕರು: ಎಸ್.ಎಲ್. ಭೈರಪ್ಪ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪದ್ಮ ಉಮರ್ಜಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಎಸ್.ಎಲ್. ಭೈರಪ್ಪನವರ ಆತ್ಮಚರಿತ್ರೆಯ `ಭಿತ್ತಿ``ಯ ಕುರಿತು ವಿರ್ಮಶೆ ಪ್ರಖ್ಯಾತ ಕಾದಂಬರಿಗಾರರಾದ ಶ್ರೀಯುತ ಎಸ್.ಎಲ್.ಭೈರಪ್ಪನವರ ಆತ್ಮಚರಿತ್ರೆ ಓದಿದಾಗ ವಿಸ್ಮಯ ಮೂಡಿದ್ದು ನಿಜ. ಶಿಲೆಯೊಂದು ಶಿಲ್ಪವಾಗಬೇಕಾದರೆ ಉಳಿಪೆಟ್ಟುಗಳು ಬೇಕು ನಿಜ. ಆದರೆ ಈ ಉಳಿಪೆಟ್ಟುಗಳು ಶಿಲ್ಪವಾಗುವಂತಹ ಪೆಟ್ಟುಗಳಲ್ಲ, ಶಿಲೆಯನ್ನೇ ಛಿದ್ರಗೊಳಿಸುವಂತಹವು ಎಂಬುದನ್ನು ಎಸ್.ಎಲ್.ಭೈರಪ್ಪನವರ ``ಭಿತ್ತಿ`` ಕಾದಂಬರಿಯು ಬಿಂಬಿಸುತ್ತದೆ. ಭೈರಪ್ಪನವರ ಬಾಲ್ಯವಂತೂ ಮುಳ್ಳಿನಹಾಸಿಗೆಯಂತಿತ್ತು. ತಾಯಿಯ ಮಮತೆಯೊಂದೇ ಮುಳ್ಳುಗುತ್ತಿರುವವನಿಗೆ ಹುಲ್ಲುಕಡ್ಡಿಯ ಆಸರೆಯಾದರೂ, ಬೇಜಾಬ್ದರಿ, ಅಯೋಗ್ಯ, ಅನರ್ಹ ತಂದೆಯ ಮಗನಾಗಿ, ಹುಟ್ಟಿನಿಂದಲೇ ಬದುಕಿನ ವಿಕೃತಮುಖವನ್ನು ಸೋದರಮಾವನಿಂದ ನೋಡುತ್ತಾ ಬೆಳೆದವನಿಗೆ ಶಾರದೆಯ ಕೃಪೆಯೇ ವರದಾನವಾಗಿದ್ದು ನಿಜ. ತಾಯಿ ಸತ್ತರೂ ಸೋದರಮಾವನಿರಬೇಕು ಎಂಬ ವಾತ್ಸಲ್ಯದ ವಾಕ್ಯಕ್ಕೆ ವಿರೋಧವಾಗಿ ಸೋದರಮಾವನ ಹೊಡೆತಗಳು ಒಳ್ಳೆಯ ಕೆಲಸಗಳಿಗೂ ಕೂಡಾ ಅಂದರೆ ಈಜು ಹೊಡೆದದ್ದು ತಪ್ಪು, ಅವರ ತಾಯಿ ತನ್ನ ಮಗನ ಗುರುದಕ್ಷಿಣಿಯಾಗಿ ಕೊಟ್ಟಿದ್ದನ್ನು ಗುರುಗಳಿಗೆ ನೀಡದೇ ತಾನೇ ಗುಳುಂ ಎನ್ನಿಸಿದ ಸೋದರಮಾವ, ತಾನು ಮಾಡಿದ ತಪ್ಪಿಗೂ ಏನೂ ಅರಿಯದ ಪುಟ್ಟ ಹುಡುಗ ಗುಡಿಯಲ್ಲಿ ಮಾವನ ಅನೈತಿಕತೆಯನ್ನು ನೋಡಿದ್ದಕ್ಕೆ ಹೊಡೆದು, ಬಡಿದು, ಹೆದರಿಕೆಯಿಂದ ಆದ ಗಲೀಜನ್ನು ಆ ಹುಡುಗನ ಕೈಯಲ್ಲೇ ತೊಳಿಸಿದ್ದು, ಅಮಾನವೀಯತೆಯ ಸಂಕೇತ. ದೇವರಿಗೆ ತನ್ನ ಮಾವ ಸತ್ತುಹೋಗಲಿ ಎಂದು ಬೇಡಿಕೊಂಡಾಗ, ದೇವರ ಬಲಗಡೆಯಿಂದ ಹೂವು ಬಿದ್ದು, ತನ್ನ ಮಾವ ಗೊಟಕ್ ಎಂದಿರಬೇಕೆAದು ಮನೆಗೆ ಬಂದಾಗ, ಮವ ಸಾಯದೇ ಇರುವುದ ಕಂಡು ದೇವರ ಮೇಲಿಟ್ಟ ನಂಬಿಕೆಯೇ ಹೊರಟುಹೋಯಿತು. ವಿದ್ಯೆಗೆ ವಿಘ್ನಗಳೆಷ್ಟೇ ಬಂದರೂ ಸರಸ್ವತಿಯ ಅನುಗ್ರಹ ಭೈರಪ್ಪನ ಮೇಲಿದ್ದು, ಮಿಲಟರಿ ಸೇರಲು ಹೋಗಿ ಇದುದ್ದನ್ನು ಇಲಿ ಕಚ್ಚಿಕೊಂಡು ಹೋಯಿತು ಎಂಬAತೆ ಬರೀ ಕಹಿಅನುಭವಗಳು ಬಾಳಿನ ಸಂತಸವನ್ನು ನುಂಗಿಹಾಕಿದವು. ಉಣ್ಣಲು ಹೊಟ್ಟೆತುಂಬ ಊಟವಿಲ್ಲ, ತೊಡಲು ಬಟ್ಟೆಯಿಲ್ಲ, ತಲೆಯ ಮೇಲೆ ಛತ್ತಿಲ್ಲ, ಈ ಎಲ್ಲ ಇಲ್ಲಗಳ ನಡುವೆಯೇ ರಕ್ತಸಂಬAಧಿಗಳ ಸಾವು, ಅಕ್ಕ, ಅಣ್ಣ, ತಾಯಿ ಇದ್ದ ಒಬ್ಬ ತಂಗಿಯ ಹೊಣೆಗಾರಿಕೆಯನ್ನೂ ಹೊತ್ತುಕೊಂಡು ಶಿಕ್ಷಣಕ್ಕೆಂದು ಕೂಡಿಟ್ಟ ಹಣವನ್ನು ಜನ್ಮಕೊಟ್ಟ ತಂದೆಯೇ ತನ್ನ ಯಾವ ಮಕ್ಕಳ ಬದುಕಿನ ಭವಿಷ್ಯದ ಕುರಿತೂ ಕಿಂಚಿತ್ತೂ ಚಿಂತೆಯಿಲ್ಲದೇ, ``ನಾನು ನಿನ್ನನ್ನು ಹುಟ್ಟಿಸಿದೇ ದೊಡ್ಡ ಘನಧಾರಿ ಕೆಲಸವೆಂಬAತೆ ವಾರಾನ್ನ ಮಾಡಲು ಮಗ ಜನಿವಾರ ಹಾಕಿಕೊಂಡರೆ ಹೆಚ್ಚಿನ ವಾರಾನ್ನಕ್ಕೆ ಮಹತ್ವ ದೊರೆಯುತ್ತದೆ ಎಂದುಕೊAಡು ಭಿಕ್ಷಾನ್ನ ತಂದು ಉಣ್ಣುವ ಮಗನ ಪಾಲಿನದನ್ನೇ ಕಸಿದುಕೊಂಡು ಉಣ್ಣುವ ತಂದೆ ನಿಜ ತಂದೆಯಲ್ಲ, ಅದೂ ಅಲ್ಲದೇ ಅದನ್ನು ವಿರೋಧಿಸಿದಕ್ಕೆ ಅವನು ವಾರನ್ನ ಮಾಡುವ ಮನೆಗೆ ಹೋಗಿ ಅವನ ಮುಂಜಿವೆಯಾಗಿಲ್ಲವೆAದು ಹೇಳಿ ಉಣ್ಣುವ ಅನ್ನಕ್ಕೂ ಕೊಕ್ಕೆ ಹಾಕಿ, ಕೊನೆಗೆ ಭೈರಪ್ಪ ತಾನು ಕೂಡಿಟ್ಟ ಹಣದಲ್ಲೇ ಮುಂಜೀವಿಗೆ ಸೊದರಮಾವ ಮತ್ತು ಅತ್ತೆಗೆ ಹಣ ಒಪ್ಪಿಸಿದಾಗ ಅದೇ ಹಣದಲ್ಲೂ ತಾವು ಹೊಸಬಟ್ಟೆ ತೆಗೆದುಕೊಂಡಿದ್ದು, ತೀರಾ ಕೆಳಮಟ್ಟದ ಯೋಚನೆಯ ಸುತ್ತಲಿನವರಿಂದ ಎನನ್ನೂ ನಿರೀಕ್ಷಿಸದೇ ದೇವರು ತೋರಿದ ಹಾದಿಯಲ್ಲಿ ಯಾವ, ಯಾರ ಮಾರ್ಗದರ್ಶನವೂ ಇರದೇ ಬಾಳದೋಣಿ ಎಳೆದೊಡೆ ಸಾಗಿ, ಪಾಲಿಗೆ ಬಂದುದೇ ಪಂಚಾಮೃತವೆAದಕೊAಡು ರಾಣೇಬೆನ್ನೂರಿನಲ್ಲಿ ಮಾಣಿಯಾಗಿ ಕೆಲಸಮಾಡಿದಾಗ ಸಿಕ್ಕ ಕಹಿಅನುಭವಗಳು, ಸಿನಿಮಾಟಾಕೀಜಿನಲ್ಲಿ ಹತ್ತಾರು ಬಾರಿ ನೋಡಿದ ಸಿನಿಮಾಗಳನ್ನು ಸುಂದರವಾಗಿ ಕಥೆಗಳನ್ನು ಹೆಣೆದು ಎಲ್ಲರ ಮನ ರಂಜಿಸಿದರಿAದ ಸಿಕ್ಕ ಟೆಂಗಿನಕಾಯಿಯನ್ನು ಮಾರಿದ ಹಣದಿಂದ ಜೀವನೋಪಾಯಕ್ಕೆ ದಾರಿ ಮಾಡಿಕೊಂಡು, ಮನೆಗೆ ಹೋದಾಗ ತಂದೆಯ ತಾಯಿ ಅಜ್ಜಿ ಕೂಡಾ ನಿನ್ನ ತಂಗಿಯ ಯೋಗಕ್ಷೇಮದ ಹೊಣೆ ನಿನ್ನದೇ ಎಂದಾಗ, ಮತ್ತು ನಿನ್ನ ತಾಯಿಯ ಶ್ರಾದ್ಧವನ್ನು ಮಾಡುವುದು ನಿನ್ನ ಧರ್ಮವೆಂದು ಒತ್ತಡ ಹೇರಿದಾಗ, ಇದ್ದ ಒಂದು ಬಟ್ಟೆಯನ್ನು ಒಗೆದುಹಾಕಿದಾಗ, ಅದನ್ನು ಕೂಡಾ ಕಳ್ಳನೊಬ್ಬ ಕದ್ದುಕೊಂಡ ಹೋದಾಗ, ಹೊರಗೆ ಬರಲು ಬಟ್ಟೆಯ ಇಲ್ಲದ್ದು ಬದುಕುಕಿನ ಕರಾಳ ಮೊಗವನ್ನು ಚಿತ್ರಿಸಿದ್ದಾರೆ. ರೋಸಿಹೋದ ಮನಸ್ಸು ಅದನ್ನೇ ತಮ್ಮ ಕಾದಂಬರಿಗಳಲ್ಲಿ ವೈಚಾರಿಕವಾಗಿ ಲಿಖಿತರೂಪ ಕೊಟ್ಟಿದ್ದಾರೆ. ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸಲ್ಲಿಸಿದ ಸೇವೆಯು ಅಮೋಘವಾದುದು. ಮುಂದೆ ಗುಜರಾತದಲ್ಲಿ ನೌಕರಿ ಮಾಡುತ್ತಾ, ಹೊಟ್ಟೆಪಾಡಿನೊಂದಿಗೆ ಸಾರಸ್ವತಲೋಕವನ್ನೇ ಶ್ರೀಮಂತಗೊಳಿಸಿದ ಕತೆ ಕಾದಂಬರಿಗಳು ಗತಜನ್ಮ (೧೯೫೫) ಮತ್ತೆರೆಡು ಕತೆಗಳು, ಭೀಮಕಾಯ-೧೯೫೮, ಬೆಳಕು ಮೂಡಿತು-೧೯೫೯ ಧರ್ಮಶ್ರೀ, ದೂರಸರಿದರು, ಮತದಾನ, ವಂಶವಕ್ಷ, ಜಲಪಾತ, ನಾಯಿನೆರಳು, ತಬ್ಬಲಿಯು ನೀನಾದೆ ಮಗನೇ, ಗೃಹಭಂಗ, ನಿರಾಕರಣ, ಗ್ರಹಣ, ದಾಟು,ಅನ್ವೇಷಣೆ, ಪರ್ವ,ನೆಲೆ, ಸಾಕ್ಷಿ, ಅಂಚು, ತಂತು, ಸಾರ್ಥ,ಮಂದ್ರ, ಆವರಣ, ಕವಲು ಮುಂತಾದ ಕಥೆಗಳನ್ನು ಬೇರೆ ಬೇರೆ ದೇಶಗಳನ್ನು ಸುತ್ತಿದಾಗ ಕಂಡುAಡ ಸಿಹಿಕಹಿಗಳನ್ನು ಓದುಗ ರಸಿಕರಿಗೆ ಉಣಬಡಿಸಿದ ಪರಿ ಅಚ್ಚರಿಪಡುವಂತಹದ್ದು. ತಮ್ಮಗಾದ ವೇದನೆ ವ್ಯಥೆ, ಸಂಕಟಗಳನ್ನೇ ಬರಹವನ್ನಾಗಿಸಿದ ಬರಹ ಬ್ರಹ್ಮರೆಂಬುದರಲ್ಲಿ ಎರಡು ಮಾತಿಲ್ಲ. ಹೇಳುವವರಿಲ್ಲದ ಕೇಳುವವರಿಲ್ಲದ ಒಂಟಿ ಬದುಕಿನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಾಗ, ಇಂತಹ ಅಪರೂಪದ ವ್ಯಕ್ತಿಯಿಂದ ಆಗಬೇಕಾದ ಕೆಲಸ ಬಹಳವಿದೆ ಎಂದರಿತ್ತ ಭಗವಂತನು ಅವರ ತಲೆಯಲ್ಲಿ ಅತ್ಯದ್ಭುತವಾದ ಮೆದುಳನಿಟ್ಟು, ``ದೇಶ ಸುತ್ತು ಕೋಶ ಓದು`` ಎಂಬ ಗಾದೆಯ ಎರಡನ್ನೂ ಸಾಧಿಸಿ, ತಂಗಿಯ ಬಾಳಿಗೂ ಅನೇಕ ಬಾರಿ ಬೆಳಕು ತೂರಿದ ಭಾಸ್ಕರರಾಗಿದ್ದರು ಎಂಬುದು ಸುಳ್ಳಲ್ಲ. ಸನ್ಯಾಸಿಗಳೊಂದಿಗೂ ತಿರುಗಾಡಿ ಅದು ವ್ಯರ್ಥವೆನಿಸಿದಾಗ ಅವರಿಗೆ ಎಲ್ಲ ಜಂಜಾಟಗಳ ನಡುವೆ ತೃಪ್ತಿ ಸಿಕ್ಕಿದ್ದು ಅಧ್ಯಯನದಿಂದ ಮಾತ್ರ, ಓದಿದ ಓದನ್ನು ತಮ್ಮಲ್ಲಿಯೇ ಗುಪ್ತವಾಗಿಟ್ಟುಕೊಳ್ಳದೇ ತಾವು ಮರೆಯಾದರೂ ತಮ್ಮ ಛಾಯೆ ಮರೆಯಾಗದಂತೆ ಕೃತಿಗಳನ್ನು ಕನ್ನಡ ಕಣಜಗಳಿಗೆ ಧಾರೆಯೆರೆದಿದ್ದಾರೆ. ``ಬದುಕಿನ ಮುಖಪುಟ ಮತ್ತು ಕೊನೆಯ ಪುಟದ ನಡುವೆ ಇರುವ ಪುಟದಲ್ಲಿರುವ ಒಟ್ಟು ಸಾರಾಂಶವೇ ವ್ಯಕ್ತಿತ್ವವೇ ಆದರೂ ಪ್ರತಿಪುಟವು ಮೌಲ್ಯಯುತವಾದಾಗಲೇ ಪುಸ್ತಕದ ಬೆಲೆ ಹೆಚ್ಚು`` ಎಂಬುದನ್ನು ಅರಿತುಕೊಂಡವರು. ಲೇಖಕನಿಗೆ ಇರಬೇಕಾದ ವಿಶಿಷ್ಟ ದೃಷ್ಟಿಕೋನವನ್ನು ಬೆಳೆಸಿಕೊಂಡವರು. ತಾವು ಕಟ್ಟಿಕೊಂಡ ಬಾಳಬುತ್ತಿಯ ಸೊ ̈ಗನ್ನು ಸಕಲರಿಗೂ ನೀಡಿದ ಇವರ ``ಭಿತ್ತಿ`` ಕಾದಂಬರಿಯು ಸುದೀರ್ಘವಾಗಿದ್ದು ಓದುಗನನ್ನು ಓದುವಲ್ಲಿ ಮೋಡಿ ಮಾಡುತ್ತದೆ. ಸಾಹಿತ್ಯಭಂಡಾರದ ಸಹಕಾರವನ್ನು ಮನಸ್ಸಾರೆ ಕೊಂಡಾಡಿದ್ದಾರೆ. ಈ ಪುಸ್ತಕದ ವಿಮರ್ಶೆಗೆ ಐದನೂರು ಏನೇನೂ ಸಾಕಾಗಲಾರವೆಂದು ನನ್ನ ವೈಯಕ್ತಿಕ ಅನಿಸಿಕೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಯುವಜನತೆಗೆ ಉತ್ತಮ ಮಾರ್ಗದರ್ಶಿ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

0
Votes
93
Views
7 Months
Since posted

Voting Closed!

Scroll to Top