ಪುಸ್ತಕದ ಶೀರ್ಷಿಕೆ: ಕಾನೂನು ಹೆಗ್ಗಡತಿ
ಪುಸ್ತಕದ ಲೇಖಕರು: ಕುವೆಂಪು
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶುಭಾ ರಾಘವೇಂದ್ರ ರಾಯ್ಕರ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಕಾನೂನು ಹೆಗ್ಗಡತಿ ಲೇಖಕರು: ಕುವೆಂಪು ೧೯೩೬ ರಲ್ಲಿ ಪ್ರಕಟವಾದ ಈ ಕಾದಂಬರಿ ಕೇವಲ ಒಂದು ಕುಟುಂಬದ ಕಥೆಯಲ್ಲ , ಅದು ಮಲೆನಾಡಿನ ಜೀವನ. ಅಂದಿನ ಸಮಾಜದ ಅಧಿಕಾರ, ಲಿಂಗ ತಾರತಮ್ಯ , ಮನುಷ್ಯನ ಒಳಗಿನ ತೊಳಲಾಟಗಳನ್ನು ಇಂದಿನ ಸಮಾಜಕ್ಕೆ ಪರಿಚಯಿಸುವ ಒಂದು ಅದ್ಭುತವಾದ ಕ್ರೃತಿ. ಈ ಕ್ರೃತಿ ಕುವೆಂಪುರವರ ವಿಶ್ವಮಾನವ ತತ್ವವನ್ನು ಪ್ರತಿನಿಧಿಸುತ್ತದೆ. ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರ "ಕುಂದುರವ್ವ" .ಈ ಪಾತ್ರ ತುಂಬಾ ಬುದ್ಧಿವಂತೆ, ಸ್ವಾತಂತ್ರ ಮನೋಭಾವ, ಧೈರ್ಯ ವಂತೆ, ಜೊತೆಗೆ ಕರುಣೆ ಕೂಡ ಹೊಂದಿರುವ ಒಂದು ವಿಶಿಷ್ಟ ಪಾತ್ರ. ಪಿತೃ ಪ್ರಧಾನ ಸಮಾಜದಲ್ಲಿ ಜೊತೆಗೆ ಊಳಿಗಮಾನ್ಯ ಪದ್ಧತಿ ಒಳಗೊಂಡ ಸಮಾಜದಲ್ಲಿ ಪುರುಷ ಪ್ರಾಧಾನ್ಯತೆಯನ್ನೂ ಹಾಗೆ ಸಂಪ್ರದಾಯಗಳನ್ನು ಆಕೆ ವಿರೋಧಿಸಿದ ರೀತಿ ತುಂಬಾ ಸೂಕ್ಷ್ಮ ಮತ್ತು ಗಮನಾರ್ಹವಾಗಿದೆ.ಈ ಪಾತ್ರವನ್ನು ಕುವೆಂಪು ಅವರು ನವಮಹಿಳೆಯ ರೀತಿ ಚಿತ್ರಿಸಿದ್ದಾರೆ.ಹಾಗೂ ಆಗಿನ ಕಾಲಘಟ್ಟದಲ್ಲಿ ಮಹಿಳೆಯರ ಶೋಷಣೆಯ ವಿರುದ್ಧದ ಧ್ವನಿಯಾಗಿ ಕಾಣಬಹುದು.ಆದರೆ ಯಲ್ಲೂ ಕೂಡ ಈ ಪಾತ್ರ ಬಂಡಾಯಗಾರ್ತಿಯಾಗಿ, ಅಥವಾ ಹೋರಾಟದ ಪ್ರಖರತೆಯಾಗಿ ಪ್ರತಿಭಟಿಸಿಲ್ಲ.ಬದಲಾಗಿ ಆಕೆ ಸಂಪ್ರದಾಯದ ಚೌಕಟ್ಟಿನಲ್ಲಿ ಇದ್ದುಕೊಂಡು ತನ್ನ ವ್ಯಕ್ತಿತ್ವವನ್ನು ಹಾಗೆ ಸ್ವಾತಂತ್ರ್ಯವನ್ನು ಸ್ಥಾಪಿಸಿಕೊಳ್ಳುತ್ತಾಳೆ. ಆಕೆಯ ಧೈರ್ಯ , ಧ್ರಡನಿರ್ಧಾರ, ಹಳೆ ಸಂಪ್ರದಾಯ ಮತ್ತು ಹೊಸ ಮೌಲ್ಯಗಳ ನಡುವಿನ ತಿಕ್ಕಾಟದ ಬದಲಾವಣೆಯ ಕಿಡಿಯಾಗಿ ಚಿತ್ರಿತವಾಗಿದೆ. ಇನ್ನೊಂದು ಬಹುಮುಖ್ಯ ಪಾತ್ರ "ಚಂದ್ರೇಗೌಡ" ಈ ಪಾತ್ರದ ಮೂಲಕ ಅಹಂಕಾರ, ಅಧಿಕಾರ ದಾಹಿ, ಜಮೀನ್ದಾರಿ ಪದ್ಧತಿಯ ದರ್ಪವನ್ನು ಹಾಗೆ ಅಮಾನವೀಯತೆಯನ್ನು, ಕಣ್ಣಿಗೆ ಕಟ್ಟುವಂತೆ ವ್ಯಕ್ತಪಡಿಸಿದ್ದಾರೆ.ಶೋಷಣೆ ನಡೆಸುವ ವ್ಯವಸ್ಥೆಯ ಪ್ರತಿರೂಪವೇ ಈ ಪಾತ್ರ. ಇನ್ನು ಶೋಷಿತ ವರ್ಗವನ್ನು ಪ್ರತಿನಿಧಿಸುವ ಶೋಷಣೆಗೆ ಒಳಗಾದ ಪಾತ್ರ "ಹೂವಯ್ಯ". ಕೆಳವರ್ಗದ ಜನರನ್ನು ಅಥವಾ ಕೆಲಸಕ್ಕೆ ಇರುವವರನ್ನು ಹೇಗೆ ದುಡಿಯುವ ಜೀತದಾಳುಗಳಂತೆ ಬಳಸಲಾಗುತ್ತದೆ ಮತ್ತು ಮುಗ್ಧ, ಪ್ರಾಮಾಣಿಕ ಹಾಗೂ ಅಸಹಾಯಕತೆಯನ್ನು ಈ ಪಾತ್ರ ಪ್ರತಿನಿಧಿಸುತ್ತದೆ. "ಸುಬ್ಬಮ್ಮ'" ನ ಪಾತ್ರ ಧ್ವನಿಎತ್ತಲಾಗದೇ, ದಬ್ಬಾಳಿಕೆಯನ್ನು , ಸಂಪ್ರದಾಯದ ಹೆಸರಲ್ಲಿ ನಡೆದ ಶೋಷಣೆಯನ್ನು ಅನುಭವಿಸಿ, ಸಂಪ್ರದಾಯಕ್ಕೆ ಕಟ್ಟುಬಿದ್ದು ಶರಣಾಗಿ, ನೋವು ನುಂಗಿಕೊಂಡು ಬದುಕುವ ಮಹಿಳೆಯರನ್ನು ಪ್ರತಿನಿಧಿಸುತ್ತದೆ. ಒಟ್ಟಾರೆಯಾಗಿ ಈ ಕಾದಂಬರಿ ಸಾಮಾಜಿಕ ಸಂಘರ್ಷಗಳು ಮಿತಿಮೀರಿದಾಗ ಹೇಗೆ ಅದರ ಅಂತ್ಯ ಪ್ರಾರಂಭವಾಗುತ್ತದೆ ಎಂಬುದನ್ನು ತಿಳಿಸಿದಂತಿದೆ. ಜಾತಿ, ಧರ್ಮ, ಲಿಂಗ, ಭೇದವಿಲ್ಲದೆ ಮನುಷ್ಯರನ್ನು ಮಾನವೀಯತೆಯಿಂದ ಕಾಣುವ ಕುವೆಂಪು ಅವರ ವಿಶ್ವಮಾನವ ತತ್ವವನ್ನೇ ಈ ಕಾದಂಬರಿ ಎತ್ತಿ ಹಿಡಿಯುತ್ತದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಈ ಕಾದಂಬರಿಯಲ್ಲಿ ಮುಖ್ಯವಾಗಿ ಸ್ಥಳೀಯ ಭೌಗೋಳಿಕ ವ್ಯವಸ್ಥೆಯನ್ನು ,ಅಲ್ಲಿನ ಜನರ ಜೀವನ ಶೈಲಿ,ಭಾಷಾ ವೈವಿಧ್ಯ, ಉಡುಪುಗಳನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ. ಕುಂದುರವ್ವ ಪಾತ್ರದ ಶೋಷಣೆಯ ವಿರುದ್ಧ ಧ್ವನಿಯಾಗಿ ಕೆಲಸ ಮಾಡುವ ವೈಖರಿ ತುಂಬಾ ಮನಮುಟ್ಟುವಂತಿದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಈಗಿನ ಸಮಾಜಕ್ಕೆ ಈ ಕಾದಂಬರಿ ಸಾಮಾಜಿಕ ಬದಲಾವಣೆ ಬಯಸುವವರಿಗೆ ಸೂಕ್ತವೆನಿಸುತ್ತದೆ. ಕೆಲವು ಪರಿಸ್ಥಿತಿಗಳು ಹಾಗೂ ಕೆಲವು ಮನಸ್ಥಿತಿ ಗಳಲ್ಲಿ ಸಂಪ್ರದಾಯದ ಚೌಕಟ್ಟನ್ನೂಮೀರಿ, ಜಾತಿ, ಧರ್ಮ, ರೀತಿ ನೀತಿಗಳನ್ನು ಬದಿಗಿಟ್ಟು ಯೋಚಿಸುವ ಅಗತ್ಯವಿದೆ.ಮಾನವೀಯ ಮೌಲ್ಯಗಳ ಬಗ್ಗೆ ತಿಳಿಯಲು ಆಸಕ್ತಿ ಇರುವ ವ್ಯಕ್ತಿಗಳು ಈ ಕಾದಂಬರಿ ಓದುವುದು ಸೂಕ್ತ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.