Submission 1740

ಪುಸ್ತಕದ ಶೀರ್ಷಿಕೆ: ಘಾಚರ್ ಘೋಚರ್

ಪುಸ್ತಕದ ಲೇಖಕರು: ವಿವೇಕ ಶಾನಭಾಗ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಬಾಬುನಾಯ್ಕ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ವಿವೇಕ ಶಾನಭಾಗ ಅವರ ಬಹು ಜನಪ್ರಿಯ ಕಾದಂಬರಿಗಳಲ್ಲಿ ಘಾಚರ್ ಘೋಚರ್ ಕಾದಂಬರಿಯು ವಸ್ತು ಹಾಗೂ ನಿರೂಪಣಾ ಶೈಲಿಯಿಂದ ಭಿನ್ನವಾಗಿದ್ದು ಈ ಕಾದಂಬರಿಗೆ ಬಹುಬೇಗ ಓದಿಸಿಕೊಳ್ಳುವ ಗುಣವಿದೆ. ಮಹಾನಗರಗಳಲ್ಲಿ ವಾಸಿಸುತ್ತಿರುವ ಮನುಷ್ಯ ನಗರೀಕರಣ ಜಾಗತೀಕರಣ ಅಭಿವೃದ್ಧಿ ಎಂಬ ಅವಸರದ ಭರಾಟೆಯಲ್ಲಿ ಸಾಗುತ್ತಿರುವ ಮನುಷ್ಯನ ಭಾವ ವಲಯವನ್ನು ಸೂಕ್ಷ್ಮವಾಗಿ ಎಳೆ ಎಳೆಯಾಗಿ ಈ ಕಾದಂಬರಿ ಅಭಿವ್ಯಕ್ತಿಸಿದೆ. ಮನುಷ್ಯನಿಗೆ ದುಡಿಮೆ ಅವಶ್ಯಕತೆ ಹಾಗೂ ಅನಿವಾರ್ಯತೆಯನ್ನ ಮನಮುಟ್ಟುವಂತೆ ಚಿತ್ರಿಸುವುದರ ಜೊತೆಗೆ ಮತ್ತೊಬ್ಬರ ಮೇಲೆ ಅವಲಂಬಿತರಾದಾಗ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಸೂಕ್ಷ್ಮತೆಯನ್ನು ತೆರೆದಿಟ್ಟಿದೆ ಕಾದಂಬರಿಯ ಕಥಾನಾಯಕ ಆತನ ತಾಯಿ ಕುಮುದ ಅಕ್ಕ ಮಾಲತಿ ಹೆಂಡತಿ ಅನಿತಾ ಚಿಕ್ಕಪ್ಪ ವೆಂಕಟಚಲ ಶಾಸ್ತ್ರಿ ಈ ಪ್ರತಿಯೊಂದು ಪಾತ್ರಗಳು ನಮ್ಮ ನಡುವೆ ಜೀವಂತವಾಗಿ ಸಾಗುತ್ತಿವೆಯೇನೋ ಎಂಬ ಅನುಭವ ಮೂಡಿಸುತ್ತದೆ. ವೆಂಕಟಾಚಲಶಾಸ್ತ್ರಿ ಮದುವೆಯಾಗದೆ ಒಂದು ಹೆಣ್ಣಿನೊಂದಿಗಿನ ಸಂಬಂಧವನ್ನು ಎಲ್ಲೂ ಮುಕ್ತವಾಗಿ ಹೇಳಿಕೊಳ್ಳದ ಸಂದಿಗ್ಧ ಸಂದರ್ಭ. ಕುಮುದಾ ವೆಂಕಟಚಲ ಪ್ರೀತಿಸಿದ ಹೆಂಗಸನ್ನ ಬಯ್ಯುವಾಗ ಅನಿತಾ ಹೇಳುವ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತು ನಿಜವಾದ ಸ್ತ್ರೀವಾದ ಧೋರಣೆಗಳು ಅಲ್ಲಲ್ಲಿ ವ್ಯಕ್ತವಾಗಿವೆ. ಬದುಕನ್ನ ಅನಿತಾ ನೋಡುವ ರೀತಿ ಕುಮುದಾ ಮತ್ತು ಮಾಲತಿ ಜೀವಿಸುವ ಕ್ರಮಗಳ ವಿಭಿನ್ನ ಆಯಾಮಗಳನ್ನು ದರ್ಶಿಸುತ್ತವೆ. ಮದುವೆ ಕೆಲಸ ಈ ವಿಚಾರಗಳನ್ನು ಅನಿತಾ ನೋಡುವ ಕ್ರಮಕ್ಕೂ ಮಾಲತಿ ಅವುಗಳನ್ನು ನೋಡುವ ಕ್ರಮಕ್ಕೂ ಇರುವ ಭಿನ್ನತೆಯನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ. ವೆಂಕಟಾಚಲನೆ ಕುಟುಂಬದ ಆರ್ಥಿಕ ಬೆನ್ನೆಲುವಾದ್ದರಿಂದ ಆತನನ್ನು ಪ್ರಶ್ನಿಸಲು ಇಡೀ ಕುಟುಂಬ ಹಿಂಜರಿಯುವ ರೀತಿ ಅವರ ಹಂಗಿನಲ್ಲಿ ಬದುಕುತ್ತಿದ್ದೇವೆ ಎಂಬ ದ್ವಂದ್ವ ನಿಲುವು ಅವರ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುವಲ್ಲಿ ಮನುಷ್ಯ ಹಿಂಜರಿಯುವ ರೀತಿ ಇಲ್ಲಿ ನಮಗೆ ಕಾಣಿಸುತ್ತದೆ. ಹಾಗೂ ಮನುಷ್ಯನ ಮನಸ್ಸಿನ ಒಳತೋಟಿಯೂ ಸೇರಿದಂತೆ ಪ್ರೇಮ. ಕಾಮ. ನಗರೀಕರಣದ ಯಾಂತ್ರಿಕತೆ ಸಂಬಂಧಗಳ ಬಗೆಗೆ ಮನುಷ್ಯ ತಾಳುವ ಪಲ್ಲಟ ಇವೆಲ್ಲವೂ ಮನಮುಟ್ಟುವಂತೆ ಚಿತ್ರಿತವಾಗಿದೆ . ಅನಿವಾರ್ಯತೆಯನ್ನು ಬಯಕೆಯಂತೆ ತೋರಿಸಿಕೊಳ್ಳುವುದು ಕುಟುಂಬದ ಒಂದು ಶಕ್ತಿ ಎಂದು ಹೇಳುವ ಕಥಾನಾಯಕನ ಮಾತು ಮನುಷ್ಯ ಸಂಸಾರ ಕುಟುಂಬ ಎಂಬ ಜಂಜಾಟದಲ್ಲಿ ತನ್ನ ಬದುಕಿನ ಸ್ವಾತಂತ್ರ್ಯವನ್ನು ಪಡೆಯುತ್ತಿಲ್ಲ ಎಂಬುದು ಒಂದು ನೆಲೆಯಾದರೆ ತನ್ನ ಕುಟುಂಬಕ್ಕಾಗಿ ತಾನು ಹೇಗೆ ಬೇಕಾದರೂ ಬದಲಾಗಬಲ್ಲ ಶಕ್ತಿ ಮನುಷ್ಯನಿಗೆ ಇದೆ ಎಂಬುದನ್ನು ಸಹ ಆ ಸಾಲು ಧ್ವನಿಸುತ್ತದೆ. ಆಧುನಿಕರಣದ ಭರಾಟೆಯಲ್ಲಿ ಹೋಟೆಲ್ ಗಳು ಬದಲಾದ ಸ್ಥಿತಿಯ ಚಿತ್ರಣಗಳು ಸೇರಿದಂತೆ ವಿನ್ಸೆಂಟ್ ಹೇಳುವಂತೆ ಎಲ್ಲರ ಮನೆಯ ದೋಸೆ ತೂತು ಸರ್ ಎಂಬ ಮಾತು ಮನುಷ್ಯ ತನ್ನ ಅಂತರಂಗವನ್ನು ಪ್ರಶ್ನಿಸಿಕೊಳ್ಳದೆ ಬರೀ ಬೇರೆಯವರ ಬಗ್ಗೆ ಮಾತನಾಡುವ ‌ರೀತಿ. ಮನೆ ಚಿಕ್ಕದಿದ್ದರೂ ಮನಸ್ಸು ದೊಡ್ಡದಾಗಿರಬೇಕು ಕೂಡೂ ಕುಟುಂಬ. ಮನುಷ್ಯ ಸದಾ ಹಪಪಿಸುವಂತದ್ದು ತನ್ನ ಕುಟುಂಬದೊಂದಿಗೆ ಬೆರೆಯುವ. ಪ್ರೀತಿಯಿಂದ ಸಂಭಾಷಣೆ ಆರೈಕೆಗಳೆ ಹೊರತು ಹಣ ಆಸ್ತಿಯಲ್ಲ. ಕಥಾನಾಯಕನ ತಂದೆಯ ಆದರ್ಶದವು ಬೇರೆಯವರಿಗೆ ಆಸ್ತಿಯನ್ನು ದಾನಮಾಡುವನು ಎಂಬ ಆತಂಕ ಭಯ ನಮಗೆಲ್ಲಿ ಮುಳ್ಳಾಗುವುದು ಎಂಬ ಕಥಾನಾಯಕನ ಅತಂತ್ರಆಲೋಚನೆಗಳು ಇಲ್ಲಿವೆ. ಇಲ್ಲಿ ಕೆಲವು ಪಾತ್ರಗಳ ಬಗ್ಗೆ ಇಂಥದ್ದೇ ಸರಿ ನಿರ್ಧಾರ ಎಂದು ಒಮ್ಮೆಲೇ ಹೇಳಲಾಗುವುದಿಲ್ಲ ಏಕೆಂದರೆ ಆಧುನಿಕತೆಯಲ್ಲಿ ಮನುಷ್ಯನಿಗೆ ತನ್ನ ಬಗ್ಗೆ ಸ್ಪಷ್ಟತೆಯ ಅರಿವಿಲ್ಲ ಎಂಬುದನ್ನು ಮಾಲತಿ ಕಥಾನಾಯಕರ ಪಾತ್ರದ ಮೂಲಕ ನಮಗೆ ತಿಳಿಸುತ್ತಿದ್ದಾರೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

17
Votes
161
Views
7 Months
Since posted

Voting Closed!

Scroll to Top