Submission 1728

ಪುಸ್ತಕದ ಶೀರ್ಷಿಕೆ: ಅವನೇಕೆ ಕೊಲೆಯಾದ.

ಪುಸ್ತಕದ ಲೇಖಕರು: ಎನ್ ನರಸಿಂಹಯ್ಯ.

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪ್ರವೀಣ್ ಕೆ ಎನ್.

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 3.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಚೆಲುವಯ್ಯ ಎಂಬ ಸಾಮಾನ್ಯ ಗುಮಾಸ್ತನು ಕೊಲೆಯಾಗಿರುತ್ತಾನೆ, ಮಧುಸೂದನ ಎಂಬ ಪತ್ತೇದಾರನು ಈ ಪ್ರಕರಣದ ಸಂಬಂಧ ಹೆಚ್ಚು ತಲೆ ಕೆಡಿಸಿಕೊಂಡು ಪತ್ತೆ ಹಚ್ಚಲು ಹೊರಡುತ್ತಾನೆ, ಪತ್ತೇದಾರಿ ಕೆಲಸಕ್ಕೆ ಸೇರಿ ಆದಾಗ್ಗೆ ಕೇವಲ ಒಂದುವರೆ ತಿಂಗಳು ಆಗಿರುತ್ತದೆ ಅಷ್ಟೇ. ಮಧುಸೂದನು ಮೊದಲಿಗೆ ಚೆಲುವಯ್ಯ ಕೆಲಸ ಮಾಡಿಕೊಂಡಿದ್ದ ಬೈಯ್ಯಣ್ಣನಾಯಕನ ಮೇಲೆ ಅನುಮಾನ ಪಟ್ಟು ತನಿಖೆ ನಡೆಸಲು ಶುರುಮಾಡುತ್ತಾನೆ, ಅವನು ಹೇಳಿಕೆ ನೀಡಿ ವಾಪಸಾಗುವನು, ಜಾನಕಿ ಎಂಬ ಪಾತ್ರದಾರಿಯ ಆಗಮನವಾಗುತ್ತದೆ ಆಕೆಯು ಪರಜಾತಿಯವನಾದ ಕೊದಂಡರಾಮನ ಜೊತೆ ಪ್ರೀತಿಯಲ್ಲಿ ಬಿದ್ದಿರುವ ವಿಷಯ ಜಾನಕಿಯ ಮನೆಯವರಿಗೆ ತಿಳಿಯುತ್ತದೆ , ಕೊದಂಡರಾಮನ ತಂದೆ ಪಟ್ಟಾಬಯ್ಯ ವಸುದೇವನ ಮೇಲಿನ ದ್ವೇಷದಿಂದ ಜಾನಕಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಬಂದ ಸಂಬಂಧಗಳನ್ನು ಮುರಿದುಹಾಕುತ್ತಿರುತ್ತಾನೆ ಈ ವಿಷಯ ತಿಳಿದ ವಸುದೇವನು ಅನಾಥನಾದ ಚೆಲುವಯ್ಯನಿಗೆ ಕೊಟ್ಟು ತರಾತುರಿಯಲ್ಲಿ ಮದುವೆ ಮಾಡಿರಿರುತ್ತಾನೆ, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಮಧುಸೂದನ ಅವರ ಹಿಂದೆ ಪತ್ತೇದಾರಿ ಕಾವಲುಗಾರರನ್ನು ಹಿಂಬಾಲಿಸಲು ಬಿಟ್ಟಿರುತ್ತಾನೆ, ಕೊಲೆ ನೆಡೆದು ಏಳೆಂಟು ದಿನ ಕಳೆಯಿತು, ಜಾನಕಿ ಯಾಗಲಿ ಅಥವಾ ಅವಳ ಪ್ರಿಯಕರ ಕೊದಂಡರಾಮನಾಗಲಿ ಚೆಲುವಯ್ಯನ ಕೊಲೆಗೆ ಕಾರಣರಲ್ಲ ಎಂದು ತಿಳಿದು, ಮಧುಸೂದನ ಚಿಂತಿಸುತ್ತಾ ಕುಳಿತಿರಲು ಅಷ್ಟರಲ್ಲಿ ಇನ್ ಸ್ಪೆಕ್ಟರ್ ಮುದ್ದುಕೃಷ್ಣ ಬಂದು ಕೊಲೆಗಾರನ ಪತ್ತೆಯಾಗಿದೆ ಎಂದಾಗ ಮಧುಸೂದನ ಆಶ್ಚರ್ಯದಿಂದ ಕೇಳುತ್ತಾನೆ, ಆಗ ಮುದ್ದುಕೃಷ್ಣ ಆ ಚೆಲುವಯ್ಯ ಕೆಲಸ ಮಾಡಿಕೊಂಡಿದ್ದ, ಗೋದಾಮಿನ ಮಾಲೀಕ ಬೈಯ್ಯಣ್ಣನಾಯಕನೆ ಕೊಲೆಗಾರ ಆತನ ಆತಂರಿಕ ಕಳ್ಳ ವ್ಯವಹಾರ ಚೆಲುವಯ್ಯನಿಗೆ ತಿಳಿದಿತ್ತು, ಜನರ ಬಳಿ ಹೇಳಿಬಿಡುತ್ತಾನೆ ಎಂದು ಭಾವಿಸಿ ಕೊಲೆ ಮಾಡಿಸಿದ್ದಾನೆ,ಹಾಗೂ ಅವನ ಪರಮ ವೈರಿಯಾದ ಗುರುಶಾಂತಪ್ಪನ ಬಳಿ ಕೆಲಸಕ್ಕೆ ಸೇರಿದ್ದ, ಕೊಪವು ಇತ್ತು,ತನ್ನ ಮೇಲೆ ಅನುಮಾನ ಬಾರದಂತೆ ದೂರದ ಊರಿನ ಅವನ ಭಾಮೈದ ಸೊಮ್ಲನಾಯಕನಿಗೆ ಹೇಳಿ ಕೊಲೆ ಮಾಡಿಸಿದ್ದಾನೆ, ನನಗೂ ಆ ಇಬ್ಬರನ್ನೂ ದಸ್ತಗಿರಿ ಮಾಡಿದಾಗ ತಿಳಿಯಿತು ಎಂದನು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಸ್ಮರಣೀಯ ಪಾತ್ರಗಳು-ಚೆಲುವಯ್ಯ, ಜಾನಕಿ ,ವಸುದೇವ, ಪಟ್ಟಾಬಯ್ಯ, ಕೊಂದಡರಾಮ ,ಬೈಯಣ್ಣನಾಯಕ ,ಸೊಮ್ಲನಾಯಕ , ಪತ್ತೇದಾರಿ ಮಧುಸೂದನ ಗಂಗೇಗೌಡ. ಇನ್ಸ್ಪೆಕ್ಟರ್ ಮುದ್ದುಕೃಷ್ಣ. ಆಳವಾಗಿ ಪ್ರಭಾವ ಬೀರಿದ ಒಂದೆರಡು ಸಾಲು -ಕಂಡ ಪುರುಷನಿಗೆ ಕಣ್ಣಿಕ್ಕುವಳಿಗೆ ಗಂಡನ ಕಳೆವುದೆ ಸಾಕ್ಷಿ ❗ ಪುಂಡತನದಿ ಪರಸ್ತ್ರೀಯರ ಪುಡುಕುವಗೆ ಹೆಂಡಿರು ಕಳಿವುದೆ ಸಾಕ್ಷಿ ❗❗.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

3
Votes
74
Views
8 Months
Since posted

Voting Closed!

Scroll to Top