ಪುಸ್ತಕದ ಶೀರ್ಷಿಕೆ: ಜೀವ ಜಾತ್ರೆ
ಪುಸ್ತಕದ ಲೇಖಕರು: ಮೌನೇಶ್ ಬಡಿಗೇರ್.
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸಿದ್ದೇಶ್. ಎಂ. ಆರ್.
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಭಾವಗಳಿಂದ ' ಜೀವ' ಪಡೆದು... ಸಮಯವನ್ನು ಸಮಯದಲ್ಲಿ ಹುಡುಕುವ ' ಜಾತ್ರೆ '...... ' ಜೀವ ಜಾತ್ರೆ' ' ಕಾದಂಬರಿ ' ಗಳ ಓದಿ ಅದರ ಬಗ್ಗೆ ಯೋಚಿಸಿ ಬರೆಯುವಷ್ಟು ಅನುಭವ - ಜ್ಞಾನ ನನಗೇ ಅಥವಾ ನನ್ನ ವಯಸ್ಸಿಗೂ ಇಲ್ಲಾ... ಆದರೆ, ಅನುಭವ ಗಳನ್ನ್ನು ಪದಗಳಲ್ಲಿ ಹಂಚಬಹುದಲ್ಲಾ... ಎಂಬ ಪುಟ್ಟ ಆಶಯ ದೊಂದಿಗೆ ' ಜೀವ - ಜಾತ್ರೆ ' ಯ ಬಗ್ಗೆ ನನ್ನ ಅನಿಸಿಕಾ ಬರಹ. ಎಷ್ಟೋ ಬಾರಿ ಈ ಮಾತನ್ನು ಕೇಳಿರುತ್ತೇವೆ - ಓದಿರುತ್ತೇವೆ ಈ ಪೀಳಿಗೆ ಮಕ್ಕಳಲ್ಲಿ ಯುವಕ-ಯುವತಿಯರಲ್ಲಿ ಓದುವ ಹವ್ಯಾಸ ಕುಂಠಿತ ಗೊಂಡಿದೆ, ಸಾಹಿತ್ಯ ವನ್ನು ಪ್ರಜ್ಞಾಪೂರ್ವಕವಾಗಿ ಮರೆಯುತ್ತಿರುವ ಅಪಾಯಕಾರಿ ವರ್ಗದತ್ತ ಈಗಿನ ಪೀಳಿಗೆ ಸಾಗುತ್ತಿದೆ ಎಂಬ ಮಾತುಗಳನ್ನು ಸಾಕಷ್ಟು ಹಿರಿಯರು ಹೇಳಿದ್ದಾರೆ, ಬರೆದಿದ್ದಾರೆ. ಈಗಿನ ಪೀಳಿಗೆಯ ಜೀವಿಯಾಗಿ, ಹವ್ಯಾಸಿ ಓದುಗನಾಗಿ . ನನ್ನ ವೈಯಕ್ತಿಕ ಅನಿಸಿಕೆ ಅಥವಾ ಪ್ರಶ್ನೇ ಏನೆಂದರೆ???.. ನಮಗೇ ಅಂಗೈ ಯಲ್ಲೇ ಆಕಾಶ ತೋರಿಸೋ ತಂತ್ರಜ್ಞಾನ ಗಳು, ಮನ ತುಂಬಿಸಿ ರಂಜಿಸೋಸಿನಿಮಾಗಳು, ವೆಬ್ - ಸರಣಿ, ಇತ್ಯಾದಿಗಳು ನಮ್ಮನ್ನು ಇನ್ನಿಲ್ಲದಂತೆ ಸೂಜಿಗಲ್ಲಿನ ಹಾಗೆ ಸೆಳೆಯುತ್ತಿರಬೇಕಾದರೆ, ನಾವು ಅನಿವಾರ್ಯವಾಗಿ ಬಿಡುವಿನ - ಮನೋ ಉಲ್ಲಾಸಕ್ಕಾಗಿ ಫೋನ್, ಸಿನಿಮಾ, ಇನ್ನಿತರಕ್ಕೆ ಹತ್ತಿರವಾದವು. ಪುಸ್ತಕಗಳಿಂದ ದೂರವಾದೆವು. ಆದರೆ??? ಪುಸ್ತಕಗಳ ಓದಿನಿಂದ ಸಿಗುವ ಮಾಯಾ - ಅನುಭವ, ಭಾವ - ರಸಗಳ ಸಂತಸ, ಸಿನಿಮಾ - ವೆಬ್ ಸರಣಿ ಅಥವಾ ಇತರ ಮಾಧ್ಯಮಗಳಿಂದ ಸಿಗುತ್ತವೆಯಾ?? ಎಂದು ಕೇಳಿದರೆ ??? ಅದಕ್ಕೆ ನನ್ನ ಏಕಮೇವ ಉತ್ತರ ' ಇಲ್ಲ ' ಎಂದು ಖಡಾ - ಖಂಡಿತವಾಗಿ ಒಬ್ಬ ಓದುಗನಾಗಿ ಹೇಳಬಹುದು. (*ವೈಯಕ್ತಿಕ್ಕ ಅಭಿಪ್ರಾಯ)... ಆದರೆ! ತಂತ್ರಜ್ಞಾನ ಮಾಧ್ಯಮವನ್ನು ಮೀರಿ ನಮ್ಮನ್ನು ಸೆಳೆದು ಆಕರ್ಷಿಸುವಂತಹ ಸಾಹಿತ್ಯ- ಉತ್ಪನ್ನ ಇದೆಯೇ???... ಈ ಪ್ರಶ್ನೆಯನ್ನು ಕೇಳುತ್ತಿಲ್ಲ!!! ಹುಡುಕುತ್ತಿದ್ದೇವೆ!!!!!.. ಆ ಹುಡುಕಾಟದಲ್ಲಿ ಸಿಕ್ಕ ಒಂದು ಕೃತಿ ' ಜೀವಜಾತ್ರೆ' ' ಜೀವ ಜಾತ್ರೆ' ಯ ಬಗ್ಗೆ ಒಂದು ವಾಕ್ಯದಲ್ಲಿ ಹೇಳಬಹುದು, ಹಾಗೆ ಕಥೆಯ ಎಳೆಯನ್ನೋ, ಇಷ್ಟವಾದ ಕಥೆಯ ಭಾಗವನ್ನು ಹೇಳಿದರೆ ಅದು ಮುಂದಿನ ಓದುಗನ ಅನುಭವ - ಭಂಗಕ್ಕೆ ಕಾರಣವಾಗಬಹುದು... ಹೌದು, ಪ್ರತಿಕ್ಷಣ ಅಚ್ಚರಿಗೊಳಿಸುತ್ತಾ ಸಾಗುವ ' ಕೌಶಿಕ್ ' ನ ಬದುಕು ಸಮಯದಿಂದ - ಸಮಯಕ್ಕೆ ಸಾಗುವ ' ಯಾತ್ರೆಯ ' ಅನುಭವವೇ ಒಂದು ರೋಚಕ. ಇದನ್ನು ಸಂಪೂರ್ಣ ಓದಿಯೇ ಅನುಭವಿಸ ಬೇಕೆಂದು ಸವಿನಯ ಸಲಹೆ , ಕೋರಿಕೆ. ಲೇಖಕರೇ ಹೇಳಿರುವಂತೆ,... ' ಅನುಭವವು ಸ್ಮೃತ್ತಿ ಯಲ್ಲಿದ್ದರೆ ಅದಕ್ಕೆ ಹೆಚ್ಚು ಮೌಲ್ಯ.! ' ಜೀವ ಜಾತ್ರೆ ' ಯಾ ಅನುಭವವು ಸದಾ ಸ್ಮೃತಿಯಲ್ಲಿ ಇದ್ದು ಕಾಡಬಹುದಂತ ಒಂದು ಕಲ್ಪನಾ -ದೃಶ್ಯ-ಕಾವ್ಯ.. ಇಲ್ಲಿ ಸಮಯದೊಂದಿಗೆ ಸಾಗುತ್ತಾ ಹುಟ್ಟಿನಾ ಕಾರ್ಯಕಾರಣ ಕಂಡುಕೊಳ್ಳುವ ಸಮಯದ ಪಯಣ. ' ಜೀವ ಜಾತ್ರೆ' ಯಲ್ಲಿ ಕೌಶಿಕ ನ 'ಯಾತ್ರೆ ' ಯಾ ಕಾರ್ಯೋದ್ದೇಶವಾದರೂ ಯಾವುದು? ಏನು? ... ಸಮಯದ - ಚಕ್ರ ಕಂಡುಕೊಳ್ಳುವ ಆಶಯವೇ?? ತನ್ನವರ! ಜನ್ಮ ಕಾರಣ ವಿಧಿಯನ್ನು ಅರಿಯುವ, ಅರಿತು ವಿರಕ್ತನಾಗುವಾ, ಜೀವನ ಮುಕ್ತಿ ಕಾರ್ಯ ಕಾರಣವಾ???!!!!! ಹೀಗೆ ಕೊನೆ ಪುಟ ಓದಿ ಮುಗಿದ ಮೇಲೆಯೂ ಪುಸ್ತಕ ಮಡಚುವ ಮುನ್ನ , ಕೌಶಿಕನ ಜೊತೆಯಲ್ಲಿ/ ಕೆಲವೊಮ್ಮೆ ಪ್ರತ್ಯೇಕವಾಗಿ ಸಾಗಿದ ' ಜೀವ - ಜಾತ್ರೆ ' ಯಾ ಯಾತ್ರೆಯಲ್ಲಿ ಕಟ್ಟಿಕೊಂಡ ಅನೇಕಾ - ಅನೇಕ ವಿಷಯಾ - ಪ್ರಶ್ನಾ ಸರಪಳಿಗಳನ್ನು ಬಿಡಿಸುತ್ತಾ ನಮ್ಮಲ್ಲೇ ಉತ್ತರ ಕಂಡುಕೊಳ್ಳುವುದು ಈ ಕಾದಂಬರಿಯನ್ನು ಓದುವ ಸಮಯದಷ್ಟೇ ತೆಗೆದುಕೊಳ್ಳಬಹುದು... ಈ ಕಾದಂಬರಿಯ ಕೊನೆ ಖಾಲಿ ಪುಟವು ಈ ಪ್ರಶ್ನೆಗಳನ್ನು ಪದಗಳಿಲ್ಲದೆ ನಮ್ಮಲ್ಲಿ ಹುಟ್ಟು ಹಾಕುತ್ತಾ ,ಕಟ್ಟಿ ಹಾಕುತ್ತವೆ. ಅದನ್ನು ವೈಯಕ್ತಿಕವಾಗಿ ಓದುಗನೆ ಕಂಡುಕೊಳ್ಳಬೇಕೆಂಬ ಅಭಿಲಾಷೆ ನನ್ನದು... ಸಾಮಾನ್ಯವಾಗಿ ಯಾವುದೇ ಕೃತಿ ಓದಿದ ಮೇಲೆ... ' ಕೆಲವೊಂದು ಕೃತಿಗಳು ಕಲ್ಪನಾ ಚಿತ್ರಗಳನ್ನು ಕಟ್ಟಿಕೊಡುತ್ತವೆ, ಕೆಲವೊಂದು ಕೃತಿಗಳ ಪದವು ನಮ್ಮ ಜೊತೆ ಮಾತನಾಡುತ್ತವೆ, ಕೆಲವೊಂದು ಹೊಸ ಅನುಭವವನ್ನು ಕೊಡುತ್ತವೆ. ಆದರೆ ' ಜೀವ ಜಾತ್ರೆ' ಕೃತಿಯು ಲೇಖಕರ ಬಗ್ಗೆ ಒಂದು ವಿಚಿತ್ರ ಅಸೂಯೆ ಯನ್ನು ಹುಟ್ಟಿಹಾಕಿತು ಓದುಗನಾಗಿ ಪ್ರತಿ ಪುಟದಲ್ಲೂ ಹಿಡದಿಟ್ಟುಕೊಳ್ಳುತ್ತಾ ಮನ - ರಂಜಿತವಾಗಿ ಸಾಗುವ ಪರಿಯನ್ನು ಕಂಡು. 'ಅಲ್ಲಾ ಓದುಗನಾಗಿ ನನಗೇ ಇಷ್ಟೊಂದು ಕುತೂಹಲಕಾರಿಯಾಗಿ ಆಗಿ ಓದಿಸಿಕೊಂಡು ಹೋಗುತ್ತಿರಬೇಕಾದರೆ ಇನ್ನು ಬರಹಗಾರರು ಯಾವ ಮಟ್ಟಿನಾ ' ಯೋಚನಾ ಸಮುದ್ರದಲ್ಲಿ ' ಮುಳುಗಿ ಹೊಸ ಅನುಭವ ಪಡೆದಿರಬೇಕು ? ಹೊಸ ತಿರುವು ಹೊಳೆದಾಗ ಅವರಿಗೆ ಆದ ಭಾವನೆ ಯಾವ ಮಟ್ಟದ್ದೂ. ??!! ಎಂಬುದು ಲೇಖಕರ ಅನುಭವಕಷ್ಟೇ ಮೀಸಲು ಮತ್ತು ಸೀಮಿತ.. ಅದೊಂದು ವಿಚಿತ್ರ ಅಸೂಯೆ ಅಷ್ಟೇ...... ಇಲ್ಲಿ ವಿಜ್ಞಾನ ,ಖಗೋಳ, ಚಿರಂಜೀವತ್ವ, ಆದಿವಾಸಿಗಳ ಬದುಕು, ಆಕಾಶ, ನಕ್ಷತ್ರ, ಪ್ರಯೋಗಶಾಲೆ ಈಗ ಅನೇಕ ವಿಷಯಗಳ ವಿಷಯ ಪೂರಿತ ಬರಹಗಳು.... ಬದುಕು, ಸಾವು, ಕಾಮ, ಪ್ರೀತಿ-ಪ್ರೇಮ , ಸಂಪತ್ ಭರಿತ ವ್ಯಕ್ತಿಗಳ ತಿರುಳು ಇವುಗಳ ಬಗ್ಗೆ ಹೇಳುತ್ತಾ ' ತತ್ವಶಾಸ್ತ್ರ ಸಂಬಂಧಿತದ ' ಹಾಗೇ ಬೋಧಿಸಿದರೂ ಇದು ನಮ್ಮನ್ನು ಕೆಲವೊಮ್ಮೆ ನಿಲ್ಲಿಸಿ, ಯೋಚಿಸಿ , ಓದುವಂತೆ ಮಾಡುತ್ತದೆ... ಲೇಖಕರು' ಕೌಶಿಕನ ' ಪಾತ್ರದ ಮೂಲಕ ಪ್ರತಿ ಬದಲಾವಣೆಯ ಸಮಯವನ್ನು ಆತನಲ್ಲಿ ಆಗುವ ಗೊಂದಲವನ್ನೂ ಅಥವಾ ಆತನಲ್ಲಿ ಹುಟ್ಟಿರಬಹುದಾದ ನಿರ್ಲಿಪ್ತತೆಯ ಭಾವವನ್ನು ಸಾಹಿತ್ಯ ಪೂರಕವಾಗಿ ಮುಟ್ಟಿಸುವ ಪ್ರಯತ್ನ ಮಾಡಿರಬಹುದು.. ಅದು ಆತ ಮೊದಲಿಗೆ ' ಬಾರ್ ' ನಾ ಕನ್ನಡಿ ಮುಂದೆ ನಿಂತಾಗ ಇರಬಹುದು..... ' ಸಮುದ್ರ ಆಳದಲ್ಲಿ ಇರಬಹುದು ' .. ' ಏಕಾಂಗಿಯಾಗಿ ಕಳೆದ ತನ್ನ ಪೂರ್ವಜರ ದ್ವೀಪದಲ್ಲಿ ಇರಬಹುದು' ಇನ್ನೂ ' ಆಸ್ಪತ್ರೆಯಲ್ಲಿ ಅವನಲ್ಲಿ ಹುಟ್ಟಿದ ಸಾವು ಬದುಕಿನ ಅರ್ಥ ಅನರ್ಥಗಳ ಬಗ್ಗೆ ಇರಬಹುದು '. ಅಥವಾ ಬಂಗಾಳದಲ್ಲಿ ಭಿಕ್ಷುಕನಿಂದ ಹಿಡಿದು ದೇವಮಾನವನಾಗುವವರೆಗೆ ಇರಬಹುದು' ಇದು ಕೌಶಿಕನಲ್ಲಿ ಹಾಗೂ ಓದುಗರಾಗಿ ನಮ್ಮಲ್ಲಿ ಉಂಟು ಮಾಡಬಹುದಾದ ಭಾವನೆಯನ್ನು ಸಾಹಿತ್ಯ ಪೂರಕವಾಗಿ ದಾಟಿಸಿದ್ದಾರೆ.. ಇಲ್ಲಿ ನನಗೆ ಕೌಶಿಕನ ' ತಾಯಿ ' ಪಾತ್ರವೂ ಕಾಣದೆಯೂ ಕಾಣುವ ತವಕವಾಯಿತು... ಎಲ್ಲೋ ಕಾಲ ಗರ್ಭದಲ್ಲಿ ಕಳೆದು ಹೋಗಿರಬಹುದು...!! ಈ ರೀತಿಯಾ ಕೆಲವೊಂದು ಭಾವ - ಸಂಬಂಧಗಳು, ನಿಗೂಢ ಬಂಧಗಳು, ಪರಿಚಯ ಪಯಣವು, ನಮಗೆ ಓದುತ್ತಾ ಮುಂದುವರೆಯಲು ' ಟಾನಿಕ್ ' ಹಾಗಿ ಬರುತ್ತದೆ.... ' ಗೋವಾದ ಗೆಳೆಯ ' ' ನಿಸ್ಸಹಾಯಕ ಬಿಹಾರದ ದಾಂಡಿಗ - ' ' ಅಡುಗೆ ಭಟ್ಟ ಮನೆ ಅಳಿಯ' ಹೀಗೆ...... ಇನ್ನು ' ಫ್ರೀಮೀಲ್ಸ್' 'ನಾ ಹಾಗೆ ಕಲ್ಪನಾತೀತ ಕಲ್ಪನೆಗಳ ಮೀರಿದ ನಮ್ಮ ಕಲ್ಪನಾ ಶಕ್ತಿಗೆ ಸವಾಲಾಗುವ ಅಥವಾ ಕಲ್ಪನಾ ಶಕ್ತಿಯನ್ನು, ಪರೀಕ್ಷಿಸುವ ಹಾಗೆ ಬರೆದಿರುವ ಬರಹಗಳು, ಕಥೆಯ ಓಟದ ವೇಗಕ್ಕೆ ' ತಡೆ ' ಒಡ್ಡಿದರೂ.. ನನಗೇನೋ ಅದು ಅವಶ್ಯಕ ಎನಿಸಿತು. ಲೇಖಕರು ಕಟ್ಟಿಕೊಟ್ಟಿರುವ ' ಕಾಲ್ಪನಿಕ ಪ್ರಯಾಣ' ವೂ ಇಲ್ಲದಿದ್ದಿದ್ದರೆ ಬಹುಶಃ ಕಥೆಯೂ ಏಕಾತಾನತೆಯ ಅಪಾಯಕ್ಕೆ ಸಿಲುಕುತ್ತಿತ್ತೇನೋ!!!!.. ನನಗೆ ವೈಯಕ್ತಿಕವಾಗಿ ಸ್ವಲ್ಪ ಕಷ್ಟವಲ್ಲಾ, ಕಮ್ಮಿ ಇರಬಹುದೇನೋ ಅನಿಸಿದ್ದು ಗೋವಾದಲ್ಲಿನ ಲೈಂಗಿಕ-ಮಿಲನಗಳನ್ನು ಪದಗಳಲ್ಲಿ ಇನ್ನೂ ಸ್ವಲ್ಪ ಯಥಾವತ್ತಾಗಿ ಬರೆಯದೆ, ಹಳೆತಾದರೂ , ಸಾಹಿತ್ಯ ಜಾಡನ್ನು ಹಿಡಿಯಬಹುದಿತ್ತೇನೋ . ಹಾಗೂ ಇನ್ನು ಕೆಲವು ಕಡೆ ಲೈಂಗಿಕ - ಕ್ರಿಯೆ ವಿಷಯಗಳಿಗೂ ಇದೇ ಅಭಿಪ್ರಾಯ ನನ್ನಲ್ಲಿ.. ಆದರೆ, ಇದ್ಯಾವುದೂ ಕಥೆಯ ಮೂಲ ಓಟಕ್ಕೆ ಅಡ್ಡಿ ಉಂಟು ಆಗುವುದಿಲ್ಲ... ಹಳಿ - ತಪ್ಪಿ ಎಲ್ಲೂ ನಮ್ಮನ್ನು ಹಳಿ ತಪ್ಪಿಸುವುದಿಲ್ಲ... ಇನ್ನು ವೈಯಕ್ತಿಕವಾಗಿ ನನ್ನನ್ನು ಸೆಳೆದ ಅಂಶವೆಂದರೆ ಇಲ್ಲಿನ ಸಣ್ಣ ಸಣ್ಣ ವಿವರಾತ್ಮಕ ಬರಹ ಅದನ್ನು ಮೊದಲ ಪುಟದಿಂದ, ಕೊನೆಯವರೆಗೂ ಅದು ಹೇಗೆ? ಅಷ್ಟು ಪರಿಪೂರ್ಣವಾಗಿ ( ಪರ್ಫೆಕ್ಟ್) ಆಗಿ ಹೆಣೆದಿದ್ದಾರೆ ಎಂಬುದು ನನಗೆ ದೊಡ್ಡ ಕಲಿಕಾ ಸಾಮಗ್ರಿ... ಬಹುಶಃ ಲೇಖಕರಿಗೆ ಕಥೆ ಮೇಲಿನ ಸ್ಪಷ್ಟತೆ ಮತ್ತು ಹಿಡಿತ ಮೊದಲಿನಿಂದ ಕೊನೆಯವರೆಗೂ ಇದ್ದಿದ್ದರಿಂದಲೇ ಅವರಿಗೇ ಪಾತ್ರಗಳ ಈ ಮಟ್ಟಿನ ಸಣ್ಣ-ಸಣ್ಣ ವಿವರಣಾತ್ಮಕ ಅಂಶಗಳನ್ನು ಅಷ್ಟು ಪರಿಪೂರ್ಣವಾಗಿ ಬರೆದು ನಮಗೆ ದಾಟಿಸಲು ಸಾಧ್ಯವಾಯಿತೋ ಏನೋ!! ( ಪ್ರಕಾಶಣ್ಣನ ಪಾತ್ರದ ಪೂರ್ವ ಪರಿಚಯದಲ್ಲಿನ ವಿವರಣೆ ಕೊನೆಗೆ ನಿಜಕ್ಕೂ ಅಚ್ಚರಿ ಉಂಟು ಮಾಡಿತು).. ಒಟ್ಟಾಗಿ, ನಮ್ಮ ಈಗಿನ ವೆಬ್ ಸರಣಿ ಯುಗದ ಕಾಲದ ನೋಡುಗರಿಗೆ, ಓದುಗರಿಗೆ, ಇದು ಅದ್ಭುತ ಅನುಭವವನ್ನ ನೀಡಿ, ನಿಮ್ಮನ್ನು ಕ್ಷಣ ಕಾಲ ಕಾಡಿ, ಕಾಲದ ವರೆಗೂ ಸ್ಮೃತಿಯಲ್ಲಿ ಉಳಿಯಬಹುದಾದ ಕೃತಿ ' ಜೀವ - ಜಾತ್ರೆ ' . ಹೊಸ ಅನುಭವ - ಸಾಕಷ್ಟು ಕಲಿಕೆಯನ್ನು ಈ ಕೃತಿಯ ಮೂಲಕ ಕೊಟ್ಟಂತಹ ಲೇಖಕರಾದ, ಮೌನೇಶ್ ಬಡಿಗೇರ್ ರವರಿಗೆ ವಂದನೆಗಳು....
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಜೀವ ' ಜಾತ್ರೆ ' ಯಲ್ಲಿ ಕೌಶಿಕನೊಡನೆ ' ಮಾಯ ಕನ್ನಡಿ' ಮೇನಕ ಳನ್ನು ಹುಡುಕುತ್ತಾ ... ಕಳೆದು ಹೋಗಿ... 500 ವರ್ಷದ ಹಿಂದೆ ಯಾವುದು ಅನಾಮಿಕ ದ್ವೀಪಕ್ಕೆ ಬಂದು ಬಿದ್ದಿದ್ದೇವೆ... ಈಗ ತಾನೆ ಕಪ್ಪು ಸುಂದರಿ ಯೊಂದಿಗೆ ಮದುವೆಯಾಗಿದೆ....
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಹೊಸದಾಗಿ ಕಾದಂಬರಿ ಓದಲು ಶುರುಮಾಡುವ ಓದುಗರಿಗೆ. ಮಕ್ಕಳಿಗಾಗಿ ಅಲ್ಲ ಕಾಲ್ಪನಿಕ ಥ್ರಿಲ್ಲರ್' ಇಷ್ಟಪಡುವವರಿಗೆ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.