ಪುಸ್ತಕದ ಶೀರ್ಷಿಕೆ: ಪದೇಪದೇ ಕಾಡುವಳು ನಂಜಮ್ಮ
ಪುಸ್ತಕದ ಲೇಖಕರು: ಎಸ್ ಎಲ್ ಬೈರಪ್ಪ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಕಿರಣ್.S
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 2.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಗೃಹಭಂಗ' ಒಂದು ಆಳವಾದ, ಸರಳ ಮತ್ತು ದುಃಖದ ಕಥೆ ಎಂದು ವಿಮರ್ಶಿಸಬಹುದು. ಹೆಂಗಸು ಜಯಿಸಿಕೆಟ್ಟಳು. ಗಂಡಸು ಕುಡಿದು ಕೆಟ್ಟನು. ತಾಳ್ಮೆ ಸಹನೆ ಸೊಸೆ, ಹಠಮಾರಿ ಅತ್ತೆಯ ಜೊತೆ ಮಾಡಿದ ಸಂಸಾರದ ಪರಿ ಇಂದು ನಡೆಯುವ ಸಮಾಜದ ವ್ಯವಸ್ಥೆಯನ್ನು ಅನಾವರಣಗೊಳಿಸುತ್ತದೆ. ಗೃಹಭಂಗ' ಕಾದಂಬರಿಯು ಸ್ವಾತಂತ್ರ್ಯಪೂರ್ವ ಗ್ರಾಮೀಣ ಕರ್ನಾಟಕದ ಬದುಕಿನ ವಾಸ್ತವಿಕ ಚಿತ್ರಣವನ್ನು ನೀಡುತ್ತದೆ. ಇದು ಲೇಖಕರ ಸ್ವಂತ ಜೀವನದ ಕೆಲವು ಘಟನೆಗಳಿಂದ ಪ್ರೇರಿತವಾದ ಕಥೆಯಾಗಿದೆ, ಇದರಲ್ಲಿ ಅವರ ತಂದೆಯ ಪಾತ್ರವನ್ನು ಹೋಲುವ 'ಚೆನ್ನಿಗ' ಎಂಬ ಪ್ರಮುಖ ಪಾತ್ರವಿದೆ. ಕಥೆಯು ಆ ಕಾಲದ ಹಳ್ಳಿ ಜೀವನದ ನಂಬಿಕೆಗಳು, ಆಚರಣೆಗಳು, ಮೂಢನಂಬಿಕೆಗಳು ಮತ್ತು ಸಾಮಾಜಿಕ ರಚನೆಗಳನ್ನು ಆಳವಾಗಿ ಪರಿಶೀಲಿಸುತ್ತದೆ. ಪ್ರಮುಖ ವಿಷಯಗಳು ಜೀವನದ ಅಸ್ತಿತ್ವ: ಕಾದಂಬರಿಯು ಜೀವನದ ಮೂಲಭೂತ ಅಸ್ತಿತ್ವ ಮತ್ತು ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಮುಖ್ಯ ಭೂಮಿಕೆಯಾಗಿ ಹೊಂದಿದೆ. ಹೆಣ್ಣಿನ ಪಾತ್ರ: ಹೆಣ್ಣಿನ ಪಾತ್ರಗಳು ಕಥೆಯಲ್ಲಿ ಪ್ರಧಾನವಾಗಿ ಕಂಡುಬರುತ್ತವೆ. ಜೀವನದ ಸಂಘರ್ಷಗಳಲ್ಲಿ ಹೆಣ್ಣು ಹೇಗೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಾಳೆ ಎಂಬುದನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಗಂಡಿನ ಮುಖವಾಡಗಳು: ಗಂಡು ಪಾತ್ರಗಳ ವಿವಿಧ ಮುಖವಾಡಗಳು ಮತ್ತು ಅವುಗಳ ವ್ಯಕ್ತಿತ್ವದ ವಿಭಿನ್ನ ಆಯಾಮಗಳು ಅನಾವರಣಗೊಂಡಿವೆ. ಗ್ರಾಮೀಣ ನಂಬಿಕೆಗಳು: ಗ್ರಾಮ ದೇವತೆಗಳು, ವಾಮಾಚಾರ, ಮತ್ತು ಸಾಂಕ್ರಾಮಿಕ ರೋಗಗಳಿಂದ ಗ್ರಾಮವನ್ನು ರಕ್ಷಿಸುವ 'ಊರಮ್ಮ'ನಂತಹ ನಂಬಿಕೆಗಳನ್ನು ಕಾದಂಬರಿ ಒಳಗೊಂಡಿದೆ. ಒಟ್ಟಾರೆಯಾಗಿ, 'ಗೃಹಭಂಗ' ಕಾದಂಬರಿಯು ಮಾನವ ಸಂಬಂಧಗಳು, ಗ್ರಾಮೀಣ ಜೀವನದ ಸವಾಲುಗಳು ಮತ್ತು ಬದುಕಿನ ಅನಿವಾರ್ಯತೆಗಳ ಬಗ್ಗೆ ಯೋಚಿಸುವಂತೆ ಮಾಡುವ ಒಂದು ಉತ್ತಮ ಕೃತಿಯಾಗಿದೆ. ಭೈರಪ್ಪನವರ ಬರವಣಿಗೆಯಲ್ಲಿನ ವಾಸ್ತವಿಕತೆ ಮತ್ತು ಪಾತ್ರಗಳ ಮನೋವಿಜ್ಞಾನದ ಸೂಕ್ಷ್ಮ ಚಿತ್ರಣವು ಕಾದಂಬರಿಯನ್ನು ಶಕ್ತಿಯುತವಾಗಿಸಿದೆ. ಆಡಳಿತಾತ್ಮಕ ಹುದ್ದೆಗಳಾದ ಶೇಕ್ದಾರ, ಶಾನುಭೋಗ, ಪಟೇಲ ಮುಂತಾದ ಪಾತ್ರಗಳ ಮೂಲಕ ಆ ಕಾಲದ ಭೂಕಂದಾಯ ಆಡಳಿತದ ವ್ಯವಸ್ಥೆಯನ್ನೂ ಲೇಖಕರು ಪರಿಚಯಿಸಿದ್ದಾರೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಅತ್ತೆ ಗಂಗಮ್ಮ ಸೊಸೆ ನಂಜಮ್ಮ ಹಾಗು ಮಗಳ ಮೂಲಕ ಮೂರು ತಲೆಮಾರುಗಳ ಹೆಣ್ಣಿನ ಸಂವೇದನೆಗಳನ್ನು, ಕಾದಂಬರಿಯಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಜೊತೆಗೆ ಮಾದೇವಯ್ಯನವರ ಪಾತ್ರ, ಅಲೆಮಾರಿ ಬದುಕಿನಲ್ಲೂ ಸಂಸ್ಕೃತಿ ಹೇಗೆ ಕಾಪಾಡಿಕೊಂಡರು ಎಂದು ಬಿಂಬಿತವಾಗುತ್ತದೆ. ನಂಜಮ್ಮ” ಬದುಕನ್ನು ಸ್ವೀಕರಿಸುವ ರೀತಿ, ಆಕೆ ಅನುಸರಿಸಿದ ನೈತಿಕ ಪದ್ದತಿಗಳು, ಅನ್ಯಾಯದ ವಿರುದ್ದ ಸಿಡಿದು ಬೀಳುವ ಪರಿ ಎಲ್ಲವೂ ಸುಂದರವಾಗಿ ಮೂಡಿದೆ. ತಾಯಿ (ಗಂಗಮ್ಮ) ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ, ಸರ್ವಾಧಿಕಾರಿ ಧೋರಣೆಯಿಂದ ಬದುಕಿದರೆ, ಮಕ್ಕಳು ಹೇಗೆ ಹದಗೆಡುತ್ತಾರೆ ಎನ್ನುವುದೂ ಕೂಡ ಬದುಕಿನ ಪಾಠವಾಗಿ ಸಾಬೀತಾಗುತ್ತದೆ. ಸಾವಿನ ದವಡೆಯಲ್ಲಿ, ಸಿಕ್ಕಿದ ಮಕ್ಕಳನ್ನು ಕಂಡು ನಂಜಮ್ಮ ಕೊರಗುವ ಸ್ಥಿತಿ, ಹಾಗು ಸಾವು ಸಾರ್ವಕಾಲಿಕ ಸತ್ಯ ಎಂದು ನಂಬಿ ಮತ್ತೆ ಬದುಕಿಗೆ ಮುಖ ಮಾಡುವ ರೀತಿ, ಬದುಕಿನ ನೈಜತೆಯನ್ನು ಬಿಂಬಿಸುತ್ತದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯ ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು. ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.