Submission 1802

ಪುಸ್ತಕದ ಶೀರ್ಷಿಕೆ: ಸಂಜೀವನಿ

ಪುಸ್ತಕದ ಲೇಖಕರು: ಡಾ. ನಾಗವೇಣಿ ಮಂಚಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶೋಭಾ. ಪಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

"ಸಂಜೀವನಿ" ಎಂಬ ಪುಸ್ತಕವು ಸಂಜೀವ ಎನ್ನುವ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು, ಹೆಚ್ಐವಿ ಪಾಸಿಟಿವ್ ಆಗಿದ್ದು, ಸಮಾಜದಲ್ಲಿ ಎಲ್ಲರಂತೆ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಕೂಡ ಬದುಕನ್ನು ಬಯಸುತ್ತಿದ್ದಾರೆ ಇದಕ್ಕಾಗಿ ಕಾನೂನಾತ್ಮಕ ಮಾಡುತ್ತಿರುವ ಹೋರಾಟವು ಈ ಪುಸ್ತಕದ ಮೂಲಕ ಮೂಡಿಬಂದಿದೆ. ಈ ಕೃತಿಯಲ್ಲಿ ಹೇಳಿರುವ ಪ್ರಕಾರ ಅವರು ಜೀವನದಲ್ಲಿ ಪಟ್ಟಂತಹ ಪಡುತ್ತಿರುವಂತಹ ಕಷ್ಟವನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನು ತಿಳಿಯಬಹುದು. ಹಾಗೆಯೇ ತನ್ನಂತೆ ತಪ್ಪು ಮಾಡದೆ ಯಾರಲ್ಲೂ ಹೇಳಿಕೊಳ್ಳಲಾಗದೆ ಇರುವ ಎಚ್ಐವಿ ಪಾಸಿಟಿವ್ ಇರುವ ಹಲವಾರು ಅಮಾಯಕ ಜೀವಗಳು ಪ್ರಾಣ ಕಳೆದುಕೊಳ್ಳದೆ ಧೈರ್ಯವಾಗಿ ಸಮಾಜದಲ್ಲಿ ಬದುಕಿ ತೋರಿಸಲು ಸ್ಪೂರ್ತಿದಾಯಕವಾಗಿದೆ. ಸಂಜೀವ ಅವರು ಸಮಾಜದಲ್ಲಿ ಹೆಚ್ಐವಿ ಪಾಸಿಟಿವ್ ಇರುವ ಮಹಿಳೆಯರು, ಪುರುಷರು, ಮಕ್ಕಳು ಹಾಗೆಯೇ ಲಿಂಗತ್ವ ಅಲ್ಪಸಂಖ್ಯಾತರು ಮುಂತಾದವರ ಬಗ್ಗೆ ಸಮಾಜವು ಅರ್ಥಮಾಡಿಕೊಳ್ಳಲು ದೇಶದ ವಿವಿದೆಡೆ ಪ್ರಯಾಣ ಮಾಡಿ ಹೋರಾಟಗಳನ್ನು ಮಾಡಿದ್ದಾರೆ. ಇವರು ಬದುಕನ್ನು ಕಳಕೊಂಡು ಅಸಹಾಯಕ ಸ್ಥಿತಿಯಲ್ಲಿ ಸಾವನ್ನು ಎದುರು ನೋಡುತ್ತಿರುವ ವ್ಯಕ್ತಿಯಾಗಿದ್ದು, ಆದರೂ ಅವರ ಸಮುದಾಯದವರಿಗೆ ಧೈರ್ಯ ತುಂಬುತ್ತಾ ಧನಾತ್ಮಕ ಚಿಂತನೆಗಳನ್ನು ತುಂಬುವ ವ್ಯಕ್ತಿಯಾಗಿದ್ದಾರೆ. ಯಾರು ಬೇಕಾದರೂ ಈ ಪುಸ್ತಕವನ್ನು ಓದಬಹುದು. ಸಮಾಜದಲ್ಲಿ ನಡೆಯುತ್ತಿರುವ ಸತ್ಯ ಘಟನೆಗಳು ಇದ್ದು ಹೀಗೂ ಇದೆಯಾ ಎಂಬ ಆಶ್ಚರ್ಯ ಉಂಟಾಗುತ್ತದೆ. ಓದುತ್ತಾ ಹೋದರೆ ಓದುತ್ತಲೇ ಇರಬೇಕೆಂಬಸ್ಟು ಒಳ್ಳೆಯ ಕೃತಿಯಾಗಿದೆ. ಜ್ಞಾನ ಹೆಚ್ಚಾಗುವುದರ ಜೊತೆಗೆ ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಗೌರವ ಮೂಡುತ್ತದೆ. ಅಂತೆಯೇ ಹೆಚ್ ಐ ವಿ ಪಾಸಿಟಿವ್ ಇರುವವರಿಗೆ ಈ ಪುಸ್ತಕ ಆಶಾಕಿರಣವಾಗಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಕೃತಿಯು ಸಂಜೀವ ಅವರ ಧೈರ್ಯ, ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಲಿಂಗತ್ವ ಅಲ್ಪಸಂಖ್ಯಾತರ ಬದುಕಿಗೆ ದಾರಿದೀಪವಾಗಬಲ್ಲದು. ಸಂಜೀವರ ಜೀವನದ ಕಷ್ಟದ ಸಮಯದಲ್ಲಿ ನೆರವಿಗೆ ಬಂದಂತಹ ಮೀನಕ್ಕ ಜಯಶ್ರೀ ಮೇಡಂ, ರವಿ ಬೆಳಗೆರೆ ಅವರ ಮಗಳು ಡಾ. ನಿಖಿಲ್ ಶೆಟ್ಟಿ, ಡಾ. ಶರತ್ ,ಡಾ. ವಿಶಾಲ್ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಹೀಗೆ ಹಲವಾರು ವ್ಯಕ್ತಿಗಳು ಇಲ್ಲಿ ನೆನಪಿಸಿಕೊಳ್ಳಬಹುದು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಹೆಚ್ಐವಿ ಪಾಸಿಟಿವ್ ಇರುವ ವ್ಯಕ್ತಿಗಳ ಬಗ್ಗೆ ಅವರ ಹಿನ್ನೆಲೆಯನ್ನು ತಿಳಿಯುವ ಹಾಗೆಯೇ ಸಮಾಜವು ಅವರ ಬಗ್ಗೆ ಹೇಳುತ್ತಿರುವ ಮಾತುಗಳು ಸತ್ಯವೋ ಸುಳ್ಳ ಎಂಬ ಕುತೂಹಲವಿರುವ ವ್ಯಕ್ತಿಗಳಿಗೆ ಈ ಪುಸ್ತಕ ಓದುವುದು ಸೂಕ್ತ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

3
Votes
91
Views
7 Months
Since posted

Voting Closed!

Scroll to Top